ಬೆಂಗಳೂರು ಗ್ರಾಮಾಂತರ, ಜು.26: ಜಿಲ್ಲೆಯ ಹೊಸಕೋಟೆ(Hoskote) ನಗರದ ವಿವಿಧೆಡೆ ನಿಲ್ಲಿಸಿದ್ದ ಬೈಕ್(Bike Theft)ಗಳನ್ನ ಕದ್ದು ಕ್ಷಣ ಮಾತ್ರದಲ್ಲೆ ಎಸ್ಕೇಫ್ ಆಗುತ್ತಿದ್ದರು. ಈ ಕುರಿತು ಹಲವು ಪ್ರಕರಣಗಳು ಹೊಸಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಹೊಸಕೋಟೆ ಪೊಲೀಸರು ಇದೀಗ ಶೋಕಿಗೋಸ್ಕರ ಹೊಸಕೋಟೆ ಸುತ್ತಾಮುತ್ತ ಬೈಕ್ಗಳನ್ನ ಕದ್ದು, ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂದಿಸಿದ್ದಾರೆ. ಇನ್ನು ಈ ಆರೋಪಿಗಳಿಂದ ರಾಯಲ್ ಎನ್ ಫಿಲ್ಡ್ ಪಲ್ಸರ್ ಸ್ಕೂಟಿ ಸೇರಿದಂತೆ 9 ಬೈಕ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಬೈಕ್ ಸಿಗದಿದ್ದಾಗ ಮೊಬೈಲ್ ಕಳ್ಳತನ
ಹೊಸಕೋಟೆಯ ಹಲವೆಡೆ ಮನೆ ಹಾಗೂ ಬಡಾವಣೆಗಳಲ್ಲಿ ರೌಂಡ್ಸ್ ಹಾಕುತ್ತಿದ್ದ ಇವರು, ನಂತರ ಮನೆ ಮುಂದೆ ಹಾಗೂ ಪ್ಲೈ ಒವರ್ ಕೆಳಗಡೆ ನಿಲ್ಲಿಸಿ ಹೋಗುತ್ತಿದ್ದ ಬೈಕ್ಗಳನ್ನ ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಬೈಕ್ಗಳು ಖದೀಯಲು ಸಾದ್ಯವಾಗದಿದ್ದಾಗ ಬಸ್ಟ್ಯಾಂಡ್ನಲ್ಲಿ ಹಾಗೂ ಒಂಟಿಯಾಗಿ ಓಡಾಡುವ ಜನರ ಬಳಿ ಮೊಬೈಲ್ಗಳನ್ನ ಕಸಿದು ಎಸ್ಕೇಪ್ ಆಗುತ್ತಿದ್ದರು. ಇನ್ನೂ ಇದೇ ರೀತಿ ಕಳೆದ ಹಲವು ತಿಂಗಳುಗಳಿಂದ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 9 ದ್ವಿಚಕ್ರವಾಹನಗಳು 12 ಮೊಬೈಲ್ಗಳನ್ನ ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ
ಒಟ್ಟಾರೆ ಕಷ್ಟಾಪಟ್ಟು ದುಡಿದು ತಿನ್ನುವುದನ್ನ ಬಿಟ್ಟು ಸುಲಭವಾಗಿ ಬಿರಿಯಾನಿ ತಿಂದು ಮಜಾ ಮಾಡೋಣವೆಂದು ಕಳ್ಳತನದ ಹಾದಿ ಹಿಡಿದಿದ್ದ ಖದೀಮರು ಇದೀಗ ಮುದ್ದೆ ಮುರಿಯಲು ಪರಪ್ಪನ ಅಗ್ರಹಾರ ಸೇರಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ