ನೆಲಮಂಗಲದಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ

ತುಮಕೂರು ಮೂಲದ ಮೋಹನ್(29) ಮೃತ ದುರ್ದೈವಿ. ಮೋಹನ್ ಗಾರ್ಮೆಂಟ್ಸ್ ಔಟ್ ಲೇಟ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಹಲವು ದಿನಗಳಿಂದ ಮದುವೆ ವಿಷಯವಾಗಿ ಒತ್ತಡದಿಂದ ಬಳಲುತ್ತಿದ್ದ.

ನೆಲಮಂಗಲದಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ
ಆತ್ಮಹತ್ಯೆಗೆ ಶರಣಾದ ಮೋಹನ್
Updated By: sandhya thejappa

Updated on: Dec 18, 2021 | 3:20 PM

ನೆಲಮಂಗಲ: ಚಾಕುವಿನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ನಡೆದಿದೆ. ತುಮಕೂರು ಮೂಲದ ಮೋಹನ್(29) ಮೃತ ದುರ್ದೈವಿ. ಮೋಹನ್ ಗಾರ್ಮೆಂಟ್ಸ್ ಔಟ್ ಲೇಟ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಹಲವು ದಿನಗಳಿಂದ ಮದುವೆ ವಿಷಯವಾಗಿ ಒತ್ತಡದಿಂದ ಬಳಲುತ್ತಿದ್ದ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ ನಗರದಲ್ಲಿ ವಾಸವಿದ್ದ ಮೋಹನ್ ಆತ್ಮಹತ್ಯೆಗೂ ಮುನ್ನಾ ಡೆತ್ ನೋಟ್​ನಲ್ಲಿ ತನ್ನ ಸಾವಿಗೆ ತಾನೇ ಕಾರಣವೆಂದು ಉಲ್ಲೇಖಿಸಿದ್ದಾನೆ. ಸ್ಥಳದಲ್ಲಿ ಚಾಕು ಮತ್ತು ಡೆತ್ ನೋಟ್ ಪತ್ತೆಯಾಗಿದೆ.

ಟಿಪ್ಪರ್ ಲಾರಿ ಸ್ಕೂಟಿ ನಡುವೆ ಡಿಕ್ಕಿ
ಟಿಪ್ಪರ್ ಲಾರಿ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾಗಿ ಸ್ಕೂಟಿ ಸವಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 48 ವರ್ಷದ ಮೆಹರುನ್ನೀಸಾ ಸಾವನ್ನಪ್ಪಿದ ಮಹಿಳೆ. ಈ ಘಟನೆ ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯ ರೇಣುಕ ಮಂದಿರ ಬಳಿ ಸಂಭವಿಸಿದೆ. ಮೃತ ಮಹಿಳೆ ಮೆಹರುನ್ನೀಸಾ ದಾವಣಗೆರೆ ನಗರದ ಹೊರವಲಯದ ಕರೂರು ನಿವಾಸಿ. ಹರಿಹರ ಕಡೆಯಿಂದ ಬರುತ್ತಿದ್ದ ಲಾರಿ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಲಾರಿ ಚಕ್ರ ಮಹಿಳೆ ಮೇಲೆ ಹಾಯ್ದು ಹೋದ ಹಿನ್ನೆಲೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಹಿಳೆಗೆ ಅಗ್ನಿಶಾಮಕ ದಳ ವಾಹನ ಡಿಕ್ಕಿ
ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆಗೆ ಅಗ್ನಿಶಾಮಕ ದಳ ವಾಹನ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ದ್ಯಾವೇಗೌಡ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಡಿಕ್ಕಿಯಾಗಿ ಹಿಂಬದಿಯ ಚಕ್ರಕ್ಕೆ ಮಹಿಳೆ ಸಿಲುಕಿದ್ದರು. ಅಗ್ನಿಶಾಮಕ ದಳದ ವಾಹನ ಮಹಿಳೆ ತಲೆ ಮೇಲೆ ಹರಿದಿದೆ. ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ ಮುಮ್ತಾಜ್ ಎಂಬ ಮಹಿಳೆ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಇದನ್ನೂ ಓದಿ

ಜಾಕ್ವೆಲಿನ್​ ಫರ್ನಾಂಡಿಸ್​ಗೂ ವಂಚನೆ? 36 ಲಕ್ಷ ರೂ ಬೆಕ್ಕು, 52 ಲಕ್ಷ ರೂ. ಬೆಲೆಯ ಕುದುರೆ ಬಗ್ಗೆ ಬಾಯ್ಬಿಟ್ಟ ನಟಿ

Ganga Expressway: ಉತ್ತರ ಪ್ರದೇಶ ಅತ್ಯಂತ ಆಧುನಿಕ ರಾಜ್ಯವಾಗಿ ಗುರುತಿಸಲ್ಪಡುವ ದಿನ ದೂರವಿಲ್ಲ; ಗಂಗಾ ಎಕ್ಸ್​​ಪ್ರೆಸ್​ವೇ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು