ದೇವನಹಳ್ಳಿ: ಒಂಟಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚೈನ್ ಎಗರಿಸಿದ್ದ ಸಾಪ್ಟ್ ವೇರ್ ಉದ್ಯೋಗಿ ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 28, 2023 | 7:21 PM

ಆತ ಹೇಳಿ ಕೇಳಿ ಸಾಪ್ಟ್ ವೇರ್ ಉದ್ಯೋಗಿ, ಕೈ ತುಂಬಾ ಸಂಬಳ ಬರುತ್ತಿತ್ತು. ಪ್ರತಿಷ್ಠಿತ ಅಪಾರ್ಟ್ಮೆಂಟ್​​ನಲ್ಲಿ ಪ್ಲಾಟ್ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದ. ಆದ್ರೆ, ಆನ್ ಲೈನ್ ಹುಚ್ಚಿನಿಂದ ಇದ್ದ ಹಣವನ್ನ ಕಳೆದುಕೊಂಡು ಸಾಲದ ಸುಳಿಗೆ ಸಿಕ್ಕ ಅವನು, ಮಾಡ ಬಾರದ ಕೆಲಸ ಮಾಡಲು ಮುಂದಾಗಿ ಇದೀಗ ಪೊಲೀಸರ ಅತಿಯಾಗಿದ್ದಾನೆ ಅದು ಯಾಕೆ ಅಂತೀರಾ? ಇಲ್ಲಿದೆ ನೋಡಿ.

ದೇವನಹಳ್ಳಿ: ಒಂಟಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚೈನ್ ಎಗರಿಸಿದ್ದ ಸಾಪ್ಟ್ ವೇರ್ ಉದ್ಯೋಗಿ ಅರೆಸ್ಟ್​
ಬಂಧಿತ ಆರೋಪಿ
Follow us on

ಬೆಂಗಳೂರು ಗ್ರಾಮಾಂತರ, ಅ.28: ಜಿಲ್ಲೆಯ ಹೊಸಕೋಟೆ (Hosakote) ನಗರದ ಶೋಭಾ ಅಪಾರ್ಟ್ಮೆಂಟ್​ನಲ್ಲಿ ಆರೋಪಿ ಶ್ರೀಧರ್ ಎಂಬಾತ ಕಳೆದ ಹಲವು ವರ್ಷಗಳಿಂದ ಪ್ಲಾಟ್ ಪಡೆದು ವಾಸ ಮಾಡುತ್ತಿದ್ದ. ಜೊತೆಗೆ ಇದೆ  ಅಪಾರ್ಟ್ಮೆಂಟ್​(Apartments) ನಲ್ಲೇ ಅನ್ನಪೂರ್ಣಮ್ಮ ಎನ್ನುವ ಈ ವೃದ್ದೆ ಸಹ ಗಂಡನ ಜೊತೆ ವಾಸ ಮಾಡುತ್ತಿದ್ದು, ಗಂಡ ಹೊರಗಡೆ ಹೋದಾಗ ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದಳು. ಜೊತೆಗೆ ಕತ್ತಿನಲ್ಲಿ ಚಿನ್ನದ ಸರವನ್ನು ಸಹ ಹಾಕಿಕೊಂಡಿದ್ದ. ಅನ್ನಪೂರ್ಣಮ್ಮ ಮನೆ ಹಾಗೂ ಹೊರಗಡೆ ವಾಕಿಂಗ್ ಮಾಡಲು ಮಾತ್ರ ಹೋಗುತ್ತಿದ್ದರು. ಆದ್ರೆ, ಹೀಗಿದ್ದರೂ ಮನೆಯಲ್ಲಿದ್ದ ಅನ್ನಪೂರ್ಣಮ್ಮ ಮೇಲೆ ಅಪರಿಚಿತ ವ್ಯಕ್ತಿಯ ಸೋಗಿನಲ್ಲಿ ಬಂದ ಇದೇ ಶ್ರೀಧರ್, ವೃದ್ದೆಯ ಬಳಿ ನೀರು ಕೇಳಿದ್ದಾನೆ. ಅವರು ನೀರು ಕೊಡಲು ಒಳಗಡೆ ಹೋಗುತ್ತಿದ್ದಂತೆ ಆಕೆಯ ಮೇಲೆ ಹಲ್ಲೆ ಮಾಡಿ 80 ಗ್ರಾಂ ತೂಕದ ಸರ ಖದ್ದು, ಎಸ್ಕೇಪ್ ಆಗಿದ್ದ.

ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ವೃದ್ದೆಯ ಮೇಲೆ ಅಟ್ಯಾಕ್

ಹಲ್ಲೆ ನಡೆಸಿ ಶ್ರೀಧರ್ ಚಿನ್ನದ ಸಮೇತ ಎಸ್ಕೇಪ್ ಆದ್ರೆ, ವೃದ್ದೆ ರಕ್ತದ ಮಡುವಿನಲ್ಲಿ ಒದ್ದಾಡಿ ಕುಸಿದು ಬಿದ್ದಿದ್ದರು. ಬಳಿಕ ಮನೆಗೆ ಬಂದಿದ್ದ ಗಂಡ ಆಕೆಯನ್ನು ಆಸ್ವತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಜೊತೆಗೆ ಅಪಾರ್ಟ್ಮೆಂಟ್​ನ ಪ್ಲಾಟ್ ಗೆ ನುಗ್ಗಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚಿನ್ನದ ಸರವನ್ನ ಎಗರಿಸಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದ್ದು, ಹೊಸಕೋಟೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಅಲ್ಲದೆ ಎಲ್ಲಾ ಆಯಾಮದಲ್ಲೂ ಪರಿಶೀಲನೆ ನಡೆಸಿದಾಗ ಪಕ್ಕದ ಪ್ಲಾಟ್ ನಿವಾಸಿ ಶ್ರೀಧರ್ ಮೇಲೆ ಅನುಮಾನ ಬಂದಿದ್ದು, ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದರು. ಈ ವೇಳೆ ಸಾಲ ಬಾಧೆಯಿಂದ ಈ ಕೃತ್ಯ ಮಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ:ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ, ದಿನಕ್ಕೆ 10 ಮೊಬೈಲ್ ಕಳ್ಳತನ

ಒಟ್ಟಾರೆ ಒಳ್ಳೆ ಕೆಲಸ ಹೈ ಪೈ ಜೀವನದ ಜೊತೆಗೆ ಕೈ ತುಂಬಾ ಸಂಬಳ ಬರುತ್ತಿದ್ದರೂ, ಅಡ್ಡದಾರಿಗಳಿಂದ ಮಾಡಿದ ಸಾಲ ತೀರಿಸಲು ವೃದ್ದೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವನು ಪರಪ್ಪನ ಅಗ್ರಹಾರ ಸೇರಿದ್ದಾನೆ. ಇನ್ನು ವೃದ್ದೆ ಪ್ರಾಣಾಪಾಯದಿಂದ ಕೂದಲಳತೆ ಅಂತರದಲ್ಲಿ ಪಾರಾಗಿದ್ದು, ಪಕ್ಕದ ಪ್ಲಾಟ್​ನ ಕರಾಮತ್ತು ಕಂಡು ಶಾಕ್ ಆಗಿರುವುದಂತು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ