ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ ಕೇಸ್​ಗೆ ಬಿಗ್ ಟ್ವಿಸ್ಟ್: ಮಹಿಳೆಯ ಒಪ್ಪಿಗೆ ಮೇರೆಗೆ ಎಲ್ಲವೂ ನಡೆದಿದ್ಯಾ? ವಿಡಿಯೋ ವೈರಲ್

ನೆಲಮಂಗಲದಲ್ಲಿ ಟೆಲಿಕಾಲರ್​ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಇದೀಗ ಮಹಿಳೆಯ ಒಪ್ಪಿಗೆ ಮೇರೆಗೆ ಅಕ್ರಮ ಸಂಬಂಧ ನಡೆದಿದೆ ಎಂದು ಆರೋಪಿಯ ಪತ್ನಿ ಹೇಳಿಕೆ ನೀಡುವ ಮೂಲಕ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ. ಜ್ಯೋತಿ ಅನುಮತಿ ಇಲ್ಲದೆ ಏನೂ ನಡೆದಿಲ್ಲವೆಂದು ಎಂದು ಆಕೆ ಹೇಳಿದ್ದಾಳೆ.

ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ ಕೇಸ್​ಗೆ ಬಿಗ್ ಟ್ವಿಸ್ಟ್: ಮಹಿಳೆಯ ಒಪ್ಪಿಗೆ ಮೇರೆಗೆ ಎಲ್ಲವೂ ನಡೆದಿದ್ಯಾ? ವಿಡಿಯೋ ವೈರಲ್
ಆರೋಪಿ ಶಿವರಾಮ್ ಮತ್ತು ಈತ ಟೆಲಿಕಾಲರ್ ಮಹಿಳೆ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ ವಿಡಿಯೋ ತೋರಿಸಿದ ಪತ್ನಿ
Edited By: Rakesh Nayak Manchi

Updated on: Nov 17, 2023 | 8:57 AM

ನೆಲಮಂಗಲ, ನ.17: ಟೆಲಿಕಾಲರ್​ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ (Sexual harassment) ನೀಡಿದ ಆರೋಪ ಕೇಳಿಬಂದಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಮಹಿಳೆಯ ಒಪ್ಪಿಗೆ ಮೇರೆಗೆ ಅಕ್ರಮ ಸಂಬಂಧ ನಡೆದಿದೆ ಎಂದು ಆರೋಪಿಯ ಪತ್ನಿ ಹೇಳಿಕೆ ನೀಡುವ ಮೂಲಕ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ. ಜ್ಯೋತಿ ಅನುಮತಿ ಇಲ್ಲದೆ ಏನೂ ನಡೆದಿಲ್ಲವೆಂದು ಎಂದು ಆಕೆ ಹೇಳಿದ್ದಾಳೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಾಲೂಕಿನ ಹಿಂಡಸಗೇರೆ ಗ್ರಾಮದ ನಿವಾಸಿಯಾಗಿರುವ ಆರೋಪಿ ಶಿವರಾಮನ ಪತ್ನಿ ಕೋಮಲ, ನನ್ನನ್ನು ಮದುವೆಗೂ ಮುಂಚೆಯೇ ಪತಿ ಹಾಗೂ ಟೆಲಿಕಾಲರ್ ಮಹಿಳಾ ಉದ್ಯೋಗಿ ಜ್ಯೋತಿಗೂ ಸಂಬಂಧ ಇದೆ ಎಂದಿದ್ದಾರೆ. ಅಲ್ಲದೆ, ಇತ್ತೀಚೆಗೆ ಇವರ ಸಂಬಂಧ ಬ್ರೇಕ್ ಆಗಿತ್ತು. ಸದ್ಯ ನನ್ನ ಪತಿ ಶಿವರಾಮ್ ನನ್ನೊಂದಿಗೆ ಇದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೀನು ನನಗೆ ಬೇಕು ಅಷ್ಟೇ, ನೆಲಮಂಗಲದ ಮಹಿಳಾ ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ

ಜ್ಯೋತಿ ಅನುಮತಿ ಇಲ್ಲದೆ ಏನೂ ನಡೆದಿಲ್ಲವೆಂದು ಹೇಳಿದ ಕೋಮಲ ಅವರು, ಇದಕ್ಕೆ ಸಾಕ್ಷಿ ಇದೆ ಎಂದು ತಿಳಿಸಿದ್ದಾರೆ. ಹೌದು, ಪತಿ ಶಿವರಾಮ್​ಗೆ ವಿಡಿಯೋ ಕಾಲ್ ಕಾಲ್ ಮೂಲಕ​​​ ಜ್ಯೋತಿ ಖಾಸಗಿ ಅಂಗವನ್ನು ತೋರಿಸಿರುವ ವಿಡಿಯೋ ಕೋಮಲಾ ಮೊಬೈಲ್​ನಲ್ಲಿದೆ. ಸದ್ಯ ಜ್ಯೋತಿ ವಿರುದ್ಧ ನೆಲಮಂಗಲ ಠಾಣೆಗೆ ದೂರು ನೀಡಲು ಕೋಮಲ ಮುಂದಾಗಿದ್ದಾರೆ.

ಆದರೆ, ಟೆಲಿಕಾಲರ್ ಮಹಿಳೆ ಜ್ಯೋತಿ ಹೇಳೋದೇ ಬೇರೆ. ತನ್ನ ಗಂಡನನ್ನು ಸಾಯಿಸುವ ಬೆದರಿಕೆ ಹಾಕಿದ್ದರಿಂದ ಒಂದು ಭಾರಿ ವಿಡಿಯೋದಲ್ಲಿ ತೋರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನೇ ಇಟ್ಟುಕೊಂಡು ನನಗೆ ಸಹಕರಿಸಲು ಒತ್ತಾಯ ಮಾಡಿದ್ದಾನೆ. ನನ್ನ ಪತಿಯನ್ನ ಕೊಂದು ನಿನ್ನ ಜೊತೆ ಇರುತ್ತೇನೆ ಅಂತ ಜೀವಭಯ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರ ವಿರೋಧದ ಹೇಳಿಕೆಗಳು ಟಿವಿ9ಗೆ ಲಭ್ಯವಾಗಿದೆ. ಸದ್ಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿದ ನಂತರ ಆರೋಪಿ ಶಿವರಾಮ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಜ್ಯೋತಿ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಶಿವರಾಮ್​ನನ್ನು ಕರೆಸಿ ವಿಚಾರಣೆ ನಡೆಸಿ ಕಳಿಸಿದ್ದರು. ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 am, Fri, 17 November 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us