ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿಯಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಹೆಗ್ಡೆ

Hijab Verdict: ಹಿಜಾಬ್ ವಿಚಾರವಾಗಿ ಕೋರ್ಟ್​ನಲ್ಲಿ ತೀರ್ಪು ಬಂದಿದೆ. ಅದು ಸರಿಯಾ ಅಥವಾ ತಪ್ಪಾ ಎಂದು ಮೇಲಿನ ಕೋರ್ಟ್​ಗೆ ಹೋಗಲಿ. ಅದು ಬಿಟ್ಟು ಬೀದಿಗಿಳೀತೀವಿ, ಬಂದ್ ಮಾಡ್ತೇವೆಂಬುದು ಸರಿಯಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ತಿಳಿವಳಿಕೆ ಕೊಟ್ಟಿದ್ದಾರೆ.

ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿಯಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಹೆಗ್ಡೆ
ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿ ಅಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಸಂತೋಷ್ ಹೆಗ್ಡೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 24, 2022 | 7:27 PM

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಧಾರ್ಮಿಕ ಕ್ಷೇತ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧ ವಿಚಾರವಾಗಿ ನೆಲಮಂಗಲದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿದ್ದಾರೆ. ಧರ್ಮ ಮತ್ತು ಭಾಷೆಯನ್ನು ಎಲ್ಲಿ ಬಳಸಬೇಕೋ ಅಲ್ಲಿ ಬಳಸಬೇಕು. ಧರ್ಮದ ವಿಚಾರ ಮನೆಯಲ್ಲಿರಬೇಕು ಎಂದು ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ (Former Lokayukta, Justice Santosh Hegde). ಸಮಾಜದಲ್ಲಿ ಬೇರೆ ಬೇರೆ ಧರ್ಮಗಳಿರುತ್ತವೆ. ಹಾಗಾಗಿ ಬಿಕ್ಕಟ್ಟು ಎದುರಾಗುತ್ತದೆ. ದೇಶದಲ್ಲಿ ಒಂದೇ ಧರ್ಮ ಇಲ್ಲ. ಹಾಗಾಗಿ ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿ ಅಲ್ಲ. ಹಿಜಾಬ್ ವಿಚಾರವಾಗಿ ಕೋರ್ಟ್​ನಲ್ಲಿ ತೀರ್ಪು ಬಂದಿದೆ (hijab verdict). ಅದು ಸರಿಯಾ ಅಥವಾ ತಪ್ಪಾ ಎಂದು ಮೇಲಿನ ಕೋರ್ಟ್​ಗೆ ಹೋಗಲಿ. ಅದು ಬಿಟ್ಟು ಬೀದಿಗಿಳೀತೀವಿ, ಬಂದ್ ಮಾಡ್ತೇವೆಂಬುದು ಸರಿಯಲ್ಲ. ನ್ಯಾಯಾಲಯದ ಮಾತಿಗೆ ನಾವು ಬೆಲೆ ಕೊಡಬೇಕಾಗುತ್ತದೆ. ಇದರ ವಿಚಾರವಾಗಿ ಶಾಂತಿಯುತವಾಗಿ, ಸೌಹಾರ್ದತೆಯಿಂದ ಪರಿಹಾರ ಮಾಡ್ಕೊಳ್ಳಬೇಕು. ಇಲ್ಲ ಅಂದ್ರೆ ಇದಕ್ಕೆಲ್ಲಾ ಅಂತ್ಯ ಅನ್ನೋದೆ ಇರಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ತಿಳಿವಳಿಕೆ ಕೊಟ್ಟಿದ್ದಾರೆ.

ಶಲ್ಯವನ್ನೇ ದುಪ್ಪಟ್ಟಾ ಮಾಡಿಕೊಂಡ ಸಿದ್ದರಾಮಯ್ಯ ಹಿಜಾಬ್​ಗೆ ಅವಕಾಶ ಕೊಡಿ ಎಂದು ಅಸೆಂಬ್ಲಿಯಲ್ಲಿ ನಾಟಕೀಯವಾಗಿ ಕೇಳಿದರು: ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್​ ಪೂರ್ಣಪೀಠ ಪೂರ್ಣ ಬಹುಮತದ ತೀರ್ಪು ನೀಡಿದ್ದರ ಹೊರತಾಗಿಯೂ ಮುಸಲ್ಮಾನ ವಿದ್ಯಾರ್ಥಿನಿಯರು ಕೋರ್ಟ್​ ತೀರ್ಪಿಗೆ ಮನ್ನಣೆ ನೀಡದೆ ಅಲ್ಲಲ್ಲಿ ಹಿಜಾಬ್​ ಧರಿಸಿ ಕಾಲೇಜಿಗೆ ಬರುವ ಪ್ರಯತ್ನಗಳು ನಡೆದಿವೆ. ಈ ಮಧ್ಯೆ ರಾಜ್ಯದಲ್ಲಿನ ಪ್ರಮುಖ ಪ್ರತಿಪಕ್ಷವೂ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಹಗ್ಗಜಗ್ಗಾಟ ನಡೆಸುತ್ತಿದೆ. ಇಂದು ವಿಧಾನಸೌಧದಲ್ಲಿ ಪ್ರತಿಪಕ್ಷದ ನಾಯಕ ಮತ್ತು ಉಪ ನಾಯಕ ಇಬ್ಬರೂ ವಿಷಯವನ್ನು ಸದನದಲ್ಲಿಯೂ ಪ್ರಸ್ತಾಪ ಮಾಡಿದರು. ಒಂದು ಹಂತದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಾಟಕೀಯವಾಗಿ ತಾವು ಹೆಗಲ ಮೇಲೆ ಹಾಕಿಕೊಂಡಿದ್ದ ಶಲ್ಯವನ್ನೇ ತೆಗೆದು, ದುಪ್ಪಟ್ಟಾ ಹಾಕಿಕೊಳ್ಳುವುದು ಹೇಗೆ ಎಂದು ಸದನದಲ್ಲಿ ಪ್ರದರ್ಶಿಸಿದರು. ಜೊತೆಗೆ, ಪರೀಕ್ಷೆ ವೇಳೆಯಾದ್ದರಿಂದ ವಿದ್ಯಾರ್ಥಿನಿಯರಿಗೆ ದುಪ್ಪಟ್ಟಾ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ಸರ್ಕಾರದ ಗಮನ ಸೆಳೆದರು.

ಮುಂದುವರಿದು ಸದನದಲ್ಲಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಈ ಸಂಬಂಧ ಬೇಕಿದ್ದರೆ ಧರ್ಮಗುರುಗಳ ಸಭೆ ಕರೆದು ಸರ್ಕಾರ ತೀರ್ಮಾನ ಮಾಡಲಿ ಎಂದೂ ಸರ್ಕಾರಕ್ಕೆ ಸಲಹೆ ಕೊಡುತ್ತಾ, ಮನವಿ ಮಾಡಿದರು. ಇವರಿಗೆ ಸಾಥ್​ ಕೊಡುವಂತೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಸಹ ಸದನದಲ್ಲಿ ಮಾತನಾಡುತ್ತಾ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಡಿಗ್ರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಜೊತೆಗೆ ಕನ್ನಡದ ಕವನವೊಂದನ್ನು ವಾಚಿಸುತ್ತಾ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಬಾಳೋಣ ಎಂದರು ಖಾದರ್‌.

ಇದನ್ನೆಲ್ಲಾ ಕೇಳಿಸಿಕೊಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಹೈಕೋರ್ಟ್​ ತೀರ್ಪಿಗೆ ಅನುಗುಣವಾಗಿ ನಾವು ಹೋಗುತ್ತೇವೆ ಎಂದು ಹೇಳುತ್ತಾ, ಹೈಕೋರ್ಟ್ ಸೂಚನೆ ಪಾಲನೆ ಮಾಡಿ ಅಂತಾ ನೀವು ಅವರ ಮನವೊಲಿಸಿ. ಅದರಿಂದ ವಿಷಯ ಇತ್ಯರ್ಥವಾಗುತ್ತದೆ. ನಾವು ಅವರ ಮನವೊಲಿಸಲು ಹೋಗಿ ಫೇಲ್ ಆಗಿದ್ದೇವೆ ಎಂದು ಸಚಿವ ನಾಗೇಶ್ ಅವರು ಇಬ್ಬರೂ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕೇರಳದಲ್ಲಿ ಕೊವಿಡ್​ 19 ನಿಯಂತ್ರಣ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾದ ದಂಡದ ಮೊತ್ತ ಬರೋಬ್ಬರಿ 350 ಕೋಟಿ ರೂ. !

ಇದನ್ನೂ ಓದಿ: ಯೂನಿಫಾರಂ ಧರಿಸಿ ಬಸ್​ನೊಳಗೆ ಬಿಯರ್ ಕುಡಿದ ಶಾಲಾ ವಿದ್ಯಾರ್ಥಿಗಳ ವಿಡಿಯೋ ವೈರಲ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್