ಕಾರಿಗೆ ಲಾರಿ ಡಿಕ್ಕಿ; ಸ್ವಲ್ಪದರಲ್ಲೇ ತಾಯಿ-ಮಗಳು ಪ್ರಾಣಾಪಾಯದಿಂದ ಪಾರು
ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದ ಲಾರಿ

ಕಾರಿಗೆ ಲಾರಿ ಡಿಕ್ಕಿ; ಸ್ವಲ್ಪದರಲ್ಲೇ ತಾಯಿ-ಮಗಳು ಪ್ರಾಣಾಪಾಯದಿಂದ ಪಾರು

| Updated By: ವಿವೇಕ ಬಿರಾದಾರ

Updated on: Jul 17, 2022 | 7:25 PM

ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಸಿಗ್ನಲ್ ಬಳಿ ರಸ್ತೆ ಅಪಘಾತವಾಗಿದೆ. ಹೊಸೂರು ಕಡೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು ಸ್ವಲ್ಪದರಲ್ಲೇ ತಾಯಿ-ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನೆಕಲ್​​: ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಸಿಗ್ನಲ್ ಬಳಿ ರಸ್ತೆ ಅಪಘಾತವಾಗಿದೆ. ಹೊಸೂರು ಕಡೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು ಸ್ವಲ್ಪದರಲ್ಲೇ ತಾಯಿ-ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಡಿಕ್ಕಿ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿದೆ. ಸಿಗ್ನಲ್ ರೆಡ್ ಆಗಿದ್ರೂ ಕಾರು ಚಾಲಕ ಜಂಪ್ ಮಾಡಿದ್ದಾನೆ. ಕಾರು ತೆರಳಿದ್ದನ್ನು ಗಮನಿಸಿ ಹಿಂದಿನಿಂದ ಲಾರಿ ಕೂಡ ಮುನ್ನುಗ್ಗಿತ್ತು. ಕಾರು ಸಡನ್ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.

ಲಾರಿ ಡಿಕ್ಕಿ ರಭಸಕ್ಕೆ ಕಾರಿನ ಹಿಂಭಾಗ ಜಖಂ ಸ್ವಲ್ಪದರಲ್ಲೇ ತಾಯಿ-ಮಗಳು ಪ್ರಾಣಾಪಾಯದಿಂದ ಪಾರು | Tv9 Kannada

Published on: Jul 17, 2022 07:25 PM