ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕರುಗಳ ರಕ್ಷಿಸಿ, ಠಾಣೆಯಲ್ಲಿ ಆರೈಕೆ ಮಾಡಿದ ದೊಡ್ಡಬಳ್ಳಾಪುರ ಪೊಲೀಸರು
ಶನಿವಾರ ದ್ವಿಚಕ್ರ ವಾಹನವೊಂದರಲ್ಲಿ ನಗರದ ಭುವನೇಶ್ವರಿ ನಗರದ 4ನೇ ಕ್ರಾಸ್ ಬಳಿ ಗೌಡಹಳ್ಳಿ ಮೂಲಕ ಸುಮಾರು ಐದು ದಿನದ ಹಿಂದೆ ಜನಿಸಿರುವ ಎರಡು ಕರುಗಳನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬರ್ತಿದ್ದರು. ಅನುಮಾನಗೊಂಡ ಸ್ಥಳೀಯರು ವಾಹನವನ್ನು ತಡೆದು ಚೀಲವನ್ನು ಬಿಚ್ಚಿದಾಗ ಕರುಗಳನ್ನ ಅಮಾನವೀಯವಾಗಿ ತುಂಬಿರುವುದು ಪತ್ತೆಯಾಗಿತ್ತು.
ದೊಡ್ಡಬಳ್ಳಾಪುರ: ಅಕ್ರಮವಾಗಿ ಕಸಾಯಿ ಖಾನೆಗೆ ಕರುಗಳನ್ನ ಸಾಗಿಸುವಾಗ ರಕ್ಷಿಸಲಾಗಿದ್ದ ಕರುಗಳಿಗೆ ನಗರ ಪೊಲೀಸ್ ಠಾಣಾ ಸಿಬ್ಬಂದಿ ಹಾಲು ಕುಡಿಸಿ, ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ (Doddaballapur police) ಈ ಔದಾರ್ಯತೆ ತೋರಿದ್ದಾರೆ.
ಶನಿವಾರ ದ್ವಿಚಕ್ರ ವಾಹನವೊಂದರಲ್ಲಿ ನಗರದ ಭುವನೇಶ್ವರಿ ನಗರದ 4ನೇ ಕ್ರಾಸ್ ಬಳಿ ಗೌಡಹಳ್ಳಿ ಮೂಲಕ ಸುಮಾರು ಐದು ದಿನದ ಹಿಂದೆ ಜನಿಸಿರುವ ಎರಡು ಕರುಗಳನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬರ್ತಿದ್ದರು. ಅನುಮಾನಗೊಂಡ ಸ್ಥಳೀಯರು ವಾಹನವನ್ನು ತಡೆದು ಚೀಲವನ್ನು ಬಿಚ್ಚಿದಾಗ ಕರುಗಳನ್ನ ಅಮಾನವೀಯವಾಗಿ ತುಂಬಿರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಬಂದಿದ್ದ ನಗರ ಠಾಣೆ ಪೊಲೀಸರು ಆರೋಪಿಗಳು ಹಾಗೂ ಕರುಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದರು. ಈ ಹಿನ್ನೆಲೆಯಲ್ಲಿ, ಆರು ದಿನದ ಕರುಗಳಿಗೆ ಪೊಲೀಸರು ಠಾಣೆಯಲ್ಲಿ ಬಾಟಲ್ ಮೂಲಕ ಮಗುವಿಗೆ ಹಾಲು ಕುಡಿಸುವಂತೆ ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಇದೀಗ ಪೊಲೀಸರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನೇಕಲ್ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಇಬ್ಬರ ಸಾವು ಆನೇಕಲ್: ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ್ದಾರೆ, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕಲ್ ತಾಲೂಕಿನ ಸೋಲೂರು ಗೇಟ್ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಸಿಲುಕಿದ್ದ ಐವರನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಬಳಿಕ ಅನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾರು ಸೋಲೂರು ಗೇಟ್ ಬಳಿಯಿಂದ ಬೆಂಗಳೂರು ಕಡೆ ಹೊರಟಿತ್ತು.
ಸೆಲ್ಫಿ ಹುಚ್ಚಿಗೆ ನೀರು ಪಾಲಾದ ಯುವಕ; ವಾರಾಂತ್ಯ ಪ್ರವಾಸ ಮೋಜು ತಂದಿಟ್ಟ ದುರಂತ
ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೊಬ್ಬ ನೀರು ಪಾಲಾದ ದುರಂತ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದಲ್ಲಿ ಈ ಘಟನೆ ನಡೆದಿದೆ. ಕಿರಣ (22) ನೀರಲ್ಲಿ ಕೊಚ್ಚಿ ಹೋದ ಯುವಕ.
ವಾರಾಂತ್ಯ ಪ್ರವಾಸ ಮೋಜು ತಂದಿಟ್ಟ ದುರಂತ: ಮೃತ ಕಿರಣ ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ. ಇಂದು ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಈ ಸಮಯದಲ್ಲಿ ಸೆಲ್ಫಿಗಾಗಿ ಜಲಾಶಯದ ದಡದಲ್ಲಿ ನಿಂತಿದ್ದ. ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ ಕೊಚ್ಚಿ ಹೋಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಿರಣನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ಗೆ ಬೈಕ್ ಡಿಕ್ಕಿ: ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದ ಆಂಧ್ರ ಮೂಲದ ಇಬ್ಬರು ವಿದ್ಯಾರ್ಥಿಗಳ ಸಾವು
ಉಡುಪಿ: ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಕಲ್ಲೂರು ತರುಣ್ ಕುಮಾರ್ ರೆಡ್ಡಿ(19), ಆದಿತ್ಯರೆಡ್ಡಿ(18) ಸೇರಿ ಮಣಿಪಾಲ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತ ಇಬ್ಬರು ವಿದ್ಯಾರ್ಥಿಗಳು ಆಂಧ್ರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:38 pm, Sun, 17 July 22