ಬನ್ನೇರುಘಟ್ಟ ಪಾರ್ಕ್​​ನಲ್ಲಿ ಅವಘಡ.. ಬ್ಯಾಟರಿಚಾಲಿತ ವಾಹನಕ್ಕೆ ಸಿಲುಕಿದ ಪುಟ್ಟ ಬಾಲಕ

| Updated By: ಸಾಧು ಶ್ರೀನಾಥ್​

Updated on: Jan 31, 2024 | 2:17 PM

ಬನ್ನೇರುಘಟ್ಟ ಪಾರ್ಕ್​​ನಲ್ಲಿ ಬ್ಯಾಟರಿ ಚಾಲಿತ ವಾಹನ ಡಿಕ್ಕಿಯಾಗಿ ಮಗು ಗಾಯಗೊಂಡಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿದೆ. ಈಗಾಗಲೇ ಗಂಟೆಗೆ ಐದರಿಂದ ಹತ್ತು ಕಿ.ಮಿ ವೇಗದಲ್ಲಿ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಉದ್ಯಾನವನ ಆಡಳಿತ ಮಂಡಳಿ ಭರಿಸಲಿದೆ ಎಂದು ಬಿಬಿಪಿ ಉದ್ಯಾನವನದ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.

ಬನ್ನೇರುಘಟ್ಟ ಪಾರ್ಕ್​​ನಲ್ಲಿ ಅವಘಡ.. ಬ್ಯಾಟರಿಚಾಲಿತ ವಾಹನಕ್ಕೆ ಸಿಲುಕಿದ ಪುಟ್ಟ ಬಾಲಕ
ಬನ್ನೇರುಘಟ್ಟ ಪಾರ್ಕ್​​ನಲ್ಲಿ ಅವಘಡ, ಬ್ಯಾಟರಿ ವಾಹನಕ್ಕೆ ಸಿಲುಕಿದ ಬಾಲಕ
Follow us on

ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರು ಝೂ, ಸಫಾರಿಯಲ್ಲಿನ ಪ್ರಾಣಿ ಪಕ್ಷಿಗಳನ್ನ ಕಂಡು ಏಂಜಾಯ್ ಮಾಡ್ತಾರೆ. ಅದೇ ರೀತಿ ದೂರದ ಊರಿನಿಂದ ಕುಟುಂಬ ಸಮೇತವಾಗಿ ಸಂಬಂಧಿಕರ ಮನೆಗೆ ಬಂದಿದ್ದವರು ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಅವಘಡವೊಂದು ಸಂಭವಿಸಿದ್ದು, ಪುಟ್ಟ ಕಂದಮ್ಮ ಆಸ್ಪತ್ರೆ ಸೇರುವಂತಾಗಿದೆ. ಅಷ್ಟಕ್ಕೂ ಜೂ ವೀಕ್ಷಣೆ ವೇಳೆ ಆ ಕುಟುಂಬಕ್ಕಾದ ಅಘಾತವಾದ್ರು ಏನೂ ಅಂತೀರಾ ನೋಡಿ ಈ ಸ್ಟೋರಿಯಲ್ಲಿ.

ಪುಟ್ಟ ಮಗು ಬ್ಯಾಟರಿಚಾಲಿತ ವಾಹನಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಸಿಸಿಟಿವಿ ದೃಶ್ಯ. ಇಂತಹ ಎದೆ ಝಲ್ ಎನಿಸುವ ದೃಶ ಕಂಡು ಬಂದದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ನಲ್ಲಿ. ಬಿಜಾಪುರ ಮೂಲದ ತ್ರಿಧರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗು. ಇದೇ ತಿಂಗಳು 27ನೇ ತಾರೀಖು ದೂರದ ಬಿಜಾಪುರದಿಂದ ಸಂಬಂಧಿಕರ ಮನೆಗೆ ಅಪ್ಪ-ಅಮ್ಮ ಮತ್ತು ದೊಡ್ಡಮ್ಮನೊಂದಿಗೆ ಬಂದಿದ್ದ ತ್ರಿಧರ್ ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಕುಟುಂಬದ ಜೊತೆ ತೆರಳಿದ್ದಾನೆ.

ಝೂನಲ್ಲಿನ ಚಿರತೆ ಗ್ಯಾಲರಿ ಬಳಿ ತಾಯಿ ಬಳಿ ಇದ್ದ ಬಾಲಕ ಕ್ಷಣಾರ್ಧದಲ್ಲಿ ರಸ್ತೆದಾಟಲು ಮುಂದಾಗಿ ಬ್ಯಾಟರಿ ಚಾಲಿತ ವಾಹನದ ಕೆಳಗೆ ಸಿಲುಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಉದ್ಯಾನವನದ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.

ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಝೂ, ಚಿಟ್ಟೆಪಾರ್ಕ್ ಮತ್ತು ಸಫಾರಿ ಏರಿಯಾದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದ್ರೆ ಝೂ ಏರಿಯಾದಲ್ಲಿ ಪ್ರವಾಸಿಗರಿಗಾಗಿ ಬ್ಯಾಟರಿ ಚಾಲಿತ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

Also Read: ಈ ಗುಹೆಗಳಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣ ಬರೆದಿದ್ದು, ಅಲ್ಲಿಗೆ ಪ್ರವಾಸಿ ದರ್ಶನಕ್ಕೆ ಹೋಗುವುದು ಹೇಗೆ? ವಿವರ ಇಲ್ಲಿದೆ

ಇದೀಗ ಬ್ಯಾಟರಿ ಚಾಲಿತ ವಾಹನ ಡಿಕ್ಕಿಯಾಗಿ ಮಗು ಗಾಯಗೊಂಡಿದ್ದು, ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿದೆ. ಈಗಾಗಲೇ ಗಂಟೆಗೆ ಐದರಿಂದ ಹತ್ತು ಕಿ.ಮಿ ವೇಗದಲ್ಲಿ ವಾಹನ ಚಲಾಯಿಸುವಂತೆ ಸೂಚಿಸಲಾಗಿದ್ದು, ಗಾಯಾಳು ಮಗು ಅಪಾಯದಿಂದ ಪಾರಾಗಿದೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಉದ್ಯಾನವನ ಆಡಳಿತ ಮಂಡಳಿ ಭರಿಸಲಿದೆ ಎಂದು ಬಿಬಿಪಿ ಉದ್ಯಾನವನ ಸಹಾಯಕ ನಿರ್ದೇಶಕ ವಿಶಾಲ್ ಪಾಟೀಲ್ ತಿಳಿಸಿದ್ದಾರೆ.

ಮಗುವಿನ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣಿಸುತ್ತೆ. ಕೂಡಲೇ ಮಗುವಿಗೆ ಸೂಕ್ತ ಚಿಕಿತ್ಸೆ ದೊರೆತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಉದ್ಯಾನವನ ಅಧಿಕಾರಿಗಳ ಜೊತೆಗೆ ಪಾಲಕರು ಸಹ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ