AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗುಹೆಗಳಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣ ಬರೆದಿದ್ದು, ಅಲ್ಲಿಗೆ ಪ್ರವಾಸಿ ದರ್ಶನಕ್ಕೆ ಹೋಗುವುದು ಹೇಗೆ? ವಿವರ ಇಲ್ಲಿದೆ

ಕರ್ನೂಲು ಮುನ್ಸಿಪಲ್​ ಕಾರ್ಪೊರೇಷನ್​ ವ್ಯಾಪ್ತಿಯಲ್ಲಿ ಪ್ಯಾಪಿಲಿ ಮಂಡಲದ ಬೋಯವಾಳ್ಳಪಲ್ಲಿ ಬಳಿಯ ವಾಲ್ಮೀಕಿ ಗುಹೆ ಪ್ರವಾಸಿಗರಿಗೆ ಲಭ್ಯವಿದೆ. ಈ ಗುಹೆಯಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣವನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಗುಹೆಗಳಲ್ಲಿರುವ ಶಿವಲಿಂಗಗಳು ಧಾರ್ಮಿಕವಾಗಿ ಬಹಳ ಮುಖ್ಯವಾಗಿವೆ.

ಈ ಗುಹೆಗಳಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣ ಬರೆದಿದ್ದು, ಅಲ್ಲಿಗೆ ಪ್ರವಾಸಿ ದರ್ಶನಕ್ಕೆ ಹೋಗುವುದು ಹೇಗೆ? ವಿವರ ಇಲ್ಲಿದೆ
ಈ ಗುಹೆಯಲ್ಲೇ ವಾಲ್ಮೀಕಿ ಋಷಿ ರಾಮಾಯಣ ಬರೆದಿದ್ದು, ಅಲ್ಲಿಗೆ ಹೋಗುವುದು ಹೇಗೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 31, 2024 | 1:44 PM

Share

ನಂದ್ಯಾಲ, ಜನವರಿ 28: ನಂದ್ಯಾಲ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅದ್ಭುತ ಗುಹೆಗಳ ಪ್ರದೇಶಗಳು ಬೆಳಕಿಗೆ ಬಂದಿವೆ. ಅವೆರಡೂ ಇನ್ನು ಪ್ರವಾಸಿಗರಿಗೆ ಲಭ್ಯವಾಗಲಿವೆ. ಬಿಲಾಸ್ವರ್ಗಂ ಗುಹೆಗಳು ಹಲವು ವರ್ಷಗಳಿಂದ ಬೇತಂಚೆರ್ಲಾ ಮಂಡಲದಲ್ಲಿ (ಈ ಹಿಂದೆ ಕರ್ನೂಲು ಜಿಲ್ಲೆಗೆ ಸೇರಿದ್ದಾಗಿದೆ) ನೈಸರ್ಗಿಕವಾಗಿ ಕಾಣಿಸಿಕೊಂಡಿವೆ. ಬೆಂಗಳೂರಿನಿಂದ 290 ಕಿಮೀ ದೂರದಲ್ಲಿವೆ (290 km from Bangalore). ಈ ಗುಹೆಗಳು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದರೂ, ನಿನ್ನೆಯವರೆಗೆ ಜನರಿಗೆ ಅವುಗಳನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇನ್ಮುಂದೆ ಬಣ್ಣಬಣ್ಣದ ದೀಪಗಳಿಂದ ಪ್ರವಾಸಿಗರನ್ನು ಆಕರ್ಷಿಸಲಾಗುವುದು.

ಇದೇ ರೀತಿ, ಕರ್ನೂಲು ಮುನ್ಸಿಪಲ್​ ಕಾರ್ಪೊರೇಷನ್​ (Kurnool Municipal Corporation -KMC) ವ್ಯಾಪ್ತಿಯಲ್ಲಿ ಪ್ಯಾಪಿಲಿ ಮಂಡಲದ ಬೋಯವಾಳ್ಳಪಲ್ಲಿ ಬಳಿಯ ವಾಲ್ಮೀಕಿ ಗುಹೆಗಳೂ ಸಹ ಪ್ರವಾಸಿಗರಿಗಾಗಿ ಲಭ್ಯವಿರುತ್ತವೆ. ನೆಲದಡಿ ನೈಸರ್ಗಿಕವಾಗಿ ಈ ಗುಹೆಗಳು ಕಾಣಿಸಿಕೊಳ್ಳುತ್ತವೆ. ಇವೆರಡನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಗಳು ಈ ಹಿಂದೆ ಬಂದಿದ್ದವಾದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಗುಹೆಯಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣವನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಗುಹೆಗಳಲ್ಲಿರುವ ಶಿವಲಿಂಗಗಳು ಧಾರ್ಮಿಕವಾಗಿ ಬಹಳ ಮುಖ್ಯವಾಗಿವೆ.

Also Read: ಟಿಟಿಡಿ – ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇನ್ಮುಂದೆ ಮಂಗಳಸೂತ್ರ ಮಾರಾಟ

ಸಚಿವ ಬುಗ್ಗಲ ರಾಜೇಂದ್ರನಾಥ ರೆಡ್ಡಿ ( Finance Minister Buggana Rajendranath Reddy) ಅವರು ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಇವುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಗುಹೆಗಳ ಸ್ವಾಭಾವಿಕತೆಯನ್ನು ಕಳೆದುಕೊಳ್ಳದೆ, ಅವುಗಳನ್ನು ನವೀಕರಿಸಲಾಗಿದೆ ಮತ್ತು ರಸ್ತೆಗಳನ್ನು ವಿದ್ಯುದ್ದೀಕರಿಸಲಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಆಂಧ್ರ ಪ್ರವಾಸೋದ್ಯಮ ನಿಗಮ (Andhra Pradesh Tourism Development Corporation -APTDC) ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:43 pm, Wed, 31 January 24

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!