
ಆನೇಕಲ್, ಆಗಸ್ಟ್ 03: ನೀವು ಭವಿಷ್ಯ ಹೇಳುವ ಬಾಬಾಗಳನ್ನ ನಂಬುವವರಾಗಿದ್ದರೆ ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. ಏಕೆಂದರೆ ಇಲ್ಲೊಬ್ಬ ಬಾಬಾ ವೇಷಧಾರಿ (fake Baba) ಭವಿಷ್ಯ ಹೇಳುವ ನೆಪದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮಾಡಿ ಯುವಕನ ಬಳಿ ಹಣ, ವಾಚ್ ದೋಚಿ ಪರಾರಿಯಾಗಿದ್ದಾನೆ. ಇಂತಹದೊಂದು ಘಟನೆ ಬೆಂಗಳೂರು (bangaluru) ಹೊರವಲಯ ಆನೇಕಲ್ ಪಟ್ಟಣದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿದೆ.
ಬಾಬಾ ವೇಷಧಾರಿಯೊಬ್ಬ ಭವಿಷ್ಯ ಹೇಳುವ ನೆಪದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಯುವಕನೊರ್ವನನ್ನು ವಂಚಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಆನೇಕಲ್ ಚಂದಾಪುರ ಮುಖ್ಯ ರಸ್ತೆ ಪೊಲೀಸ್ ಕ್ವಾಟ್ರಸ್ ಮುಂಭಾಗದ ಐಮ್ಯಾಕ್ಸ್ ಅಂಗಡಿಯಲ್ಲಿ ಕೆಲಸಗಾರ ಸಂತೋಷ್ ಒಬ್ಬನೇ ಇದ್ದಾಗ ಬಾಬಾ ವೇಷಧಾರಿ ಎಂಟ್ರಿ ಕೋಡುತ್ತಾನೆ.
ಇದನ್ನೂ ಓದಿ: ಪಾಶ್ ಶೋರೂಮಲ್ಲಿ ಡೋಂಗಿ ಬಾಬಾನಿಂದ ಮೋಸಹೋದ ಯುವಕ, ವಾಚ್ ಮತ್ತು ಹಣದೊಂದಿಗೆ ಬಾಬಾ ಪರಾರಿ
ಹೀಗೆ ಬಂದ ಬಾಬಾ ಆಶೀರ್ವಾದ ಮಾಡುವ ನೆಪದಲ್ಲಿ ನವಿಲುಗರಿಯಿಂದ ಮೊದಲು ತಲೆಗೆ ಸವರುತ್ತಾನೆ. ಬಳಿಕ ಭಿಕ್ಷೆ ಕೇಳಿದ್ದು, ಅಂಗಡಿ ಮಾಲೀಕ ಇಲ್ಲ ಎಂದು ಸಂತೋಷ್ ಉತ್ತರಿಸಿದ್ದಾನೆ. ಒತ್ತಾಯ ಮಾಡಿದ್ದರಿಂದ 2 ರೂ. ನಾಣ್ಯ ನೀಡಿದ್ದಾನೆ. ಕ್ಷಣ ಮಾತ್ರದಲ್ಲಿ ನಾಣ್ಯವನ್ನು ರುದ್ರಾಕ್ಷಿ ಮಾಡಿದ್ದಾನೆ. ಬಳಿಕ ಕೊಟ್ಟ ನೂರು ರೂ. ಅನ್ನು ಸಾಯಿಬಾಬಾ ವಿಗ್ರಹ ಮಾಡಿದ್ದಾನೆ. ಬಳಿಕ ಅರಿವಿಲ್ಲದೆ ಒಂದೂವರೆ ಸಾವಿರ ಹಣದ ಜೊತೆಗೆ ಖುದ್ದು ತನ್ನ ಕೈಯಲ್ಲಿದ್ದ ವಾಚ್ ಆತನಿಗೆ ತೊಡಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆ ಆದ ವಿಡಿಯೋ ನೋಡಿ ಮೋಸಹೋದ ಸಂತೋಷ್ ಅಚ್ಚರಿಗೊಳಗಾಗಿದ್ದಾರೆ.
ಇನ್ನೂ ಇತ್ತೀಚೆಗೆ ನಕಲಿ ಬಾಬಾಗಳ ಹಾವಳಿ ಹೆಚ್ಚಾಗಿದೆ. ಈಗ ಆನೇಕಲ್ ಪಟ್ಟಣದಲ್ಲಿಯು ಇವರ ಹಾವಳಿ ಶುರುವಾಗಿದೆ. ಭಿಕ್ಷೆ ಬೇಡುವ ನೆಪದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಸಾರ್ವಜನಿಕರಿಗೆ ಮಂಕುಬೂದಿ ಎರಚಿ ನಗನಾಣ್ಯ ದೋಚುತ್ತಿದ್ದಾರೆ.
ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ನೀನು ಶ್ರೀಮಂತನಾಗುತ್ತಿಯ ಎಂದು ಭವಿಷ್ಯ ನುಡಿದು ವಂಚಿಸುತ್ತಿದ್ದಾರೆ. ಜನಸಾಮಾನ್ಯರು ಈ ಬಗ್ಗೆ ಜಾಗರೂಕರಾಗಬೇಕು. ಇಂತಹ ಡೋಂಗಿ ಬಾಬಾಗಳನ್ನು ಜನ ಸಾಮಾನ್ಯರು ನಂಬಬಾರದು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್ನಲ್ಲಿ ಡೇಟಿಂಗ್? ಅಧಿಕಾರಿಗಳೇ ಶಾಕ್!
ಒಟ್ಟಿನಲ್ಲಿ ಎಲ್ಲಿಯವರೆಗೆ ಇಂತಹ ಡೋಂಗಿ ಬಾಬಾಗಳನ್ನು ನಂಬುವ ಜನ ಇರುತ್ತಾರೋ ಅಲ್ಲಿಯವರೆಗೆ ಇಂತಹ ನಯವಂಚಕ ಬಾಬಾಗಳು ವಂಚನೆ ಮಾಡುತ್ತಲೇ ಇರುತ್ತಾರೆ. ಹಾಗಾಗಿ ಭವಿಷ್ಯ ಹೇಳುವ ಇಂತಹ ಬಾಬಾಗಳಿಂದ ಆದಷ್ಟು ಜನಸಾಮಾನ್ಯರು ದೂರಿರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.