ಆನೇಕಲ್: ಇಲ್ಲಿನ ಮುತ್ಯಾಲಮಡುವು ಕಲ್ಲು ಬೀಳುವ ಹಂತದಲ್ಲಿದೆ. ಜಲಪಾತ ಪ್ರವಾಸಿಗರಿಗೆ ಅಪಾಯದ ಸ್ಥಳವಾಗಿ ಮಾರ್ಪಟ್ಟಿದೆ. ಮುತ್ಯಾಲಮಡುವು ಜಲಪಾತದ ಕಲ್ಲು ಬೀಳುವ ಹಂತದಲ್ಲಿದೆ. ಆನೇಕಲ್ ತಾಲೂಕಿನ ಮುತ್ಯಾಲಮಡುವು ಜಲಪಾತ ಪ್ರವಾಸಿಗರಿಗೆ ಅಪಾಯದ ಹಂತದಲ್ಲಿದೆ. ಸತತ ಮಳೆ ಪರಿಣಾಮ ಕಲ್ಲುಗಳು ಗುಡ್ಡದಿಂದ ಜರುಗಿದೆ. ಅಪಾಯಕಾರಿ ಸ್ಥಳದಲ್ಲೇ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಕುಳಿತಿದ್ದಾರೆ.
ದಸರಾ ದೀಪಾಲಂಕಾರ 9 ದಿನ ಮುಂದುವರಿಕೆ: ಬಸವರಾಜ ಬೊಮ್ಮಾಯಿ
ವಿಜಯ ದಶಮಿ ದಿನದ ಬಳಿಕವೂ ನಂತರದ 9 ದಿನ ದಸರಾ ದೀಪಾಲಂಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 15ರಂದು ಅಧಿಕೃತ ಘೋಷಣೆ ಮಾಡಿದ್ದರು. ಸುತ್ತೂರು ಶಾಖಾ ಮಠದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದರು. ದಸರಾ ದೀಪಾಲಂಕಾರ ಮುಂದುವರಿಸಲು ಜನರ ಬೇಡಿಕೆ ಇದೆ. ಹಾಗಾಗಿ ವಿದ್ಯುತ್ ದೀಪಾಲಂಕಾರ ಮುಂದುವರಿಸಲಾಗುವುದು. ಇಂದಿನಿಂದ 9 ದಿನ ದೀಪಾಲಂಕಾರ ಮುಂದುವರಿಯಲಿದೆ ಎಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬೊಮ್ಮಾಯಿ ಹೇಳಿದ್ದರು.
ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ನಾಡ ಹಬ್ಬ ದಸರಾದ ಶುಭಾಶಯ ಕೋರಿದ್ದರು. ರಾಜ್ಯ ಮತ್ತಷ್ಟು ಸುಭಿಕ್ಷವಾಗಲಿ. ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಹರಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಡಿಗೆ ಶುಭಹಾರೈಸಿದ್ದರು. ಸುತ್ತೂರು ಶಾಖಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ದರು. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಮಠದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ತಕ್ಕಮಟ್ಟಿಗೆ ಚೇತರಿಕೆ ಕಂಡ ಮೈಸೂರು ಉದ್ಯಮ; ಟಿವಿ9 ಮಂಥನ ತಂಡಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಕೃತಜ್ಞತೆ
ಇದನ್ನೂ ಓದಿ: ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು
Published On - 6:59 pm, Tue, 19 October 21