ಆನೇಕಲ್; ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಸೂರ್ಯ ಸಿಟಿಯಲ್ಲಿ ಪ್ರಿಯಕರ ಮತ್ತು ಆತನ ಸ್ನೇಹಿತನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಉತ್ತರ ಭಾರತ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಒರಿಸ್ಸಾ ಮೂಲದ ಯುವತಿ ಕಳೆದ ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಯುವತಿ ಉತ್ತರ ಭಾರತ ಮೂಲದ ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು ಪ್ರೀತಿಸುತ್ತಿದ್ದಳು. ಆರೋಪಿ ಪ್ರಿಯಕರ ಕಿತ್ತಗಾನ ಹಳ್ಳಿ ಬಳಿ ವಾಸವಿದ್ದ. ಯುವತಿಯ ಮನೆಯಿಂದ ಅರ್ಧ ಕಿ.ಮಿ ದೂರದಲ್ಲೇ ಇತನ ಮನೆ ಇತ್ತು. ಕೆಲ ದಿನಗಳ ಹಿಂದೆ ಯುವತಿಯನ್ನು ಪರಿಚಯ ಮಾಡಿಕೊಂಡು ಪ್ರೀತಿ ಹೆಸರಲ್ಲಿ ಸಲುಗೆ ಬೆಳೆಸಿದ್ದ. ಇಬ್ಬರೂ ಪ್ರೀತಿಯಲ್ಲಿದ್ದರು. ಆದ್ರೆ ಕಳೆದ ವಾರ ತನ್ನ ಮೆನೆಗೆ ಬರಲು ಹೇಳಿದ್ದ. ರಾತ್ರಿ ಆಗಿದೆ ಹೇಗೆ ಬರಲಿ ಅಂತ ಯುವತಿ ಪ್ರಶ್ನಿಸಿ ಆತನ ಮನಗೆ ಹೋಗಲು ನಿರಾಕರಿಸಿದ್ದಳು. ಆದ್ರೆ ಇದನ್ನು ಒಪ್ಪದ ಆರೋಪಿ ಪ್ರಿಯಕರ ನಿನಗೆ ನಿಜವಾದ ಪ್ರೀತಿ ಇದ್ದರೆ ಬಾ, ನನ್ನ ಸ್ನೇಹಿತ ಕೂಡ ಅದೇ ರಸ್ತೆಯಿಂದನೇ ಬರ್ತಾನೆ ಅವನ ಜೊತೆ ಬಾ ಎಂದಿದ್ದ. ಇದನ್ನೂ ಓದಿ: ಕೊಪ್ಪಳದ ಗ್ರಾಮವೊಂದರ ಹೊರವಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಸುಟ್ಟು ಹೋದ ಧಾಬಾ, ಪ್ರಾಣಹಾನಿ ಇಲ್ಲ
ಪ್ರಿಯಕರನ ಮಾತನ್ನು ತಪ್ಪಲಾರದೆ ಯುವತಿ ಆರೋಪಿಯ ಸ್ನೇಹಿತನ ಜೊತೆ ಮನೆಗೆ ಬಂದಿದ್ದಳು. ಈ ವೇಳೆ ಯುವತಿಗೆ ಮತ್ತು ಬರುವ ಔಷಧಿ ನೀಡಿದ್ದು ಯುವತಿ ತಲೆ ಸುತ್ತು ಬಿದ್ದಾಗ ಪ್ರಿಯಕರ ಮತ್ತು ಆತನ ಸ್ನೇಹಿತ ಇಬ್ಬರೂ ಸೇರಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವತಿ ಎಚ್ಚರವಾದ ನಂತರ ಮನೆಗೆ ಬಿಟ್ಟು ಬಂದಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲೇ ಸ್ಟೇಷನ್ ತೆರಳಿದ್ದ ಯುವತಿ ಇಬ್ಬರ ಮೇಲೂ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ. ಸಂತ್ರಸ್ತ ಯುವತಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
Published On - 6:38 pm, Wed, 18 May 22