ಆನೇಕಲ್​​​ನಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಪುಡಿರೌಡಿಗಳ ಅಟ್ಟಹಾಸ; ಕಣ್ಮುಚ್ಚಿ ಕುಳಿತ ಪೋಲೀಸರು

| Updated By: ವಿವೇಕ ಬಿರಾದಾರ

Updated on: Jul 21, 2023 | 11:19 AM

ಗಾಂಜಾ ಮತ್ತಿನಲ್ಲಿ ಪುಡಿ ರೌಡಿಗಳು ಹಾಡಹಗಲೇ ನಡುರಸ್ತೆಯಲ್ಲಿ ಲಾಂಗು, ಮಚ್ಚು ಜಳಪಿಸಿ ಪುಂಡಾಟವಾಡಿರುವ ಘಟನೆ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ಆನೇಕಲ್​​​ನಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಪುಡಿರೌಡಿಗಳ ಅಟ್ಟಹಾಸ; ಕಣ್ಮುಚ್ಚಿ ಕುಳಿತ ಪೋಲೀಸರು
ಲಾಂಗ್​ ಹಿಡಿದಿರುವ ಪುಡಿರೌಡಿ
Follow us on

ಆನೇಕಲ್: ಗಾಂಜಾ (Ganja) ಮತ್ತಿನಲ್ಲಿ ಪುಡಿ ರೌಡಿಗಳು (Rowdy) ಹಾಡಹಗಲೇ ನಡುರಸ್ತೆಯಲ್ಲಿ ಲಾಂಗು ಮಚ್ಚು ಜಳಪಿಸಿ ಪುಂಡಾಟವಾಡಿರುವ ಘಟನೆ ಆನೇಕಲ್ (Anekal) ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಪುಡಿರೌಡಿಗಳು ರಸ್ತೆಯಲ್ಲಿ ಕೇಕೆ ಹಾಕಿ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಇವರು ಪೋಲೀಸರ ಭಯವಿಲ್ಲದೆ ರಸ್ತೆಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದರೂ, ಆನೇಕಲ್ ಪೋಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ಶಿವಮೊಗ್ಗ ಜು.21: ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ರೌಡಿಶೀಟರ್​​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಮುಜಾಯಿದ್ದೀನ್ (32) ಮೃತ ರೌಡಿ ಶೀಟರ್​. ಮಧ್ಯರಾತ್ರಿ 12.30 ರ ಸುಮಾರಿಗೆ ಮೃತ ರೌಡಿಶೀಟರ್​ ಮುಜಾಯಿದ್ದೀನ್ ಮನೆಯಿಂದ ಹೊರಬಂದಾಗ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್​ ಮಾರಾಟ; ಇಬ್ಬರು ಆರೋಪಿಗಳ ಬಂಧನ

ಇನ್ನು ಮುಜಾಯಿದ್ದೀನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಘಟನೆ ಕುರಿತು ಸ್ಥಳಕ್ಕೆ ಪೇಪರ್​ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ