ಮಧ್ಯರಾತ್ರಿ 3 ಗಂಟೆಗೆ ಎಂಟ್ರಿ ಕೊಡುತ್ತೆ ಬೆಡ್ ಶೀಟ್ ಗ್ಯಾಂಗ್: ಬೆಚ್ಚಿಬಿದ್ದ ಹೊಸಕೋಟೆ ಜನರು 

ಹೊಸಕೋಟೆಯ ಸೂಲಿಬೆಲೆಯಲ್ಲಿರುವ ಎಸ್‌ಬಿಐ ಎಟಿಎಂನಿಂದ ಐದು ಜನರ ಬೆಡ್‌ಶೀಟ್ ಗ್ಯಾಂಗ್ ಕೇವಲ ಆರು ನಿಮಿಷಗಳಲ್ಲಿ 30 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದೆ. ಆ ಮೂಲಕ ಬೆಡ್ ಶೀಟ್ ಗ್ಯಾಂಗ್ ಮತ್ತೆ ಆಕ್ಟೀವ್​ ಆಗಿದೆ. ಶೆಟರ್ ಒಡೆದು ಹಣವನ್ನು ಕದ್ದ ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಮಧ್ಯರಾತ್ರಿ 3 ಗಂಟೆಗೆ ಎಂಟ್ರಿ ಕೊಡುತ್ತೆ ಬೆಡ್ ಶೀಟ್ ಗ್ಯಾಂಗ್: ಬೆಚ್ಚಿಬಿದ್ದ ಹೊಸಕೋಟೆ ಜನರು 
ಮಧ್ಯರಾತ್ರಿ 3 ಗಂಟೆಗೆ ಎಂಟ್ರಿ ಕೊಡುತ್ತೆ ಬೆಡ್ ಶೀಟ್ ಗ್ಯಾಂಗ್: ಬೆಚ್ಚಿಬಿದ್ದ ಹೊಸಕೋಟೆ ಜನರು 
Edited By:

Updated on: Mar 01, 2025 | 6:48 PM

ದೇವನಹಳ್ಳಿ, ಮಾರ್ಚ್​ 01: ಹಿರೋಗಳು ಮತ್ತು ವಿಲನ್​​ಗಳು ಪಕ್ಕಾ ಪ್ಲಾನ್ ಮಾಡಿಕೊಂಡು ಬಂದು ಕ್ಷಣ ಮಾತ್ರದಲ್ಲೇ ಲಕ್ಷ ಲಕ್ಷ ರೂ ಹಣ ಎಗರಿಸುವುದನ್ನು ಸಿನಿಮಾಗಳಲ್ಲಿ ನೋಡುವುದು ಕಾಮನ್. ಆದರೆ ಇದೇ ರೀತಿಯ ಕೃತ್ಯವನ್ನು ಬೆಡ್ ಶೀಟ್ ಗ್ಯಾಂಗ್ (Bed Sheet Gang) ನಿಜ ಜೀವನದಲ್ಲೂ ಮಾಡಿದ್ದು ಜಸ್ಟ್ 6 ನಿಮಿಷದಲ್ಲೇ 30 ಲಕ್ಷ ರೂ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ.

ಮತ್ತೆ ಆ್ಯಕ್ಟೀವ್​ ಆದ ಬೆಡ್ ಶೀಟ್ ಗ್ಯಾಂಗ್

ಸಿನಿಮಿಯ ರೀತಿಯಲ್ಲಿ ಖದೀಮರು ಜಸ್ಟ್ 6 ನಿಮಿಷದಲ್ಲಿ 30 ಲಕ್ಷ ರೂ ಹೆಚ್ಚು ಹಣ ಎಗರಿಸಿ ಪರಾರಿಯಾಗಿರಯವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ. ಸೂಲಿಬೆಲೆಯ ಪ್ರಮುಖ ವೃತ್ತ ಹಾಗೂ ಪೊಲೀಸ್ ಠಾಣೆಯಿಂದ ಜಸ್ಟ್ 500 ಮೀಟರ್ ದೂರದಲ್ಲಿರುವ ಎಸ್​ಬಿಐ ಎಟಿಎಂ ಗೆ ತಡರಾತ್ರಿ 5 ಜನರ ಬೆಡ್ ಶೀಟ್ ಗ್ಯಾಂಗ್ ಎಂಟ್ರಿಕೊಟ್ಟಿದೆ. ಮೊದಲಿಗೆ ಓರ್ವ ಕಾರಿನಿಂದಲೇ ಸಂಪೂರ್ಣವಾಗಿ ತಲೆ ಕೈ ಕಾಲಿಗೆಲ್ಲ ಬೆಡ್ ಶೀಟ್​​ ಹಾಕಿಕೊಂಡು ಎಟಿಎಂ ಶೆಟರ್ ಮುರಿದು ಒಳಬಂದು ನಂತರ ಎಲ್ಲಾ ಕ್ಯಾಮರಾಗಳಿಗೆ ಬ್ಲಾಕ್ ಕಲರ್ ಸ್ಪ್ರೇ ಹೊಡೆದಿದ್ದಾನೆ.

ಇದನ್ನೂ ಓದಿ: ಗದಗಿನಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಪ್ರಶ್ನೆ ಮಾಡಿದ ರೈತನಿಗೆ ಮಾರಣಾಂತಿಕ ಹಲ್ಲೆ

ಇದನ್ನೂ ಓದಿ
ಅಕ್ರಮ ಮರಳು ದಂಧೆಕೋರರ ಅಟ್ಟಹಾಸ: ಪ್ರಶ್ನೆ ಮಾಡಿದ ರೈತನಿಗೆ ಹಲ್ಲೆ
ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ
11 ವರ್ಷಗಳಿಂದ ನಾಪತ್ತೆಯಾಗಿದ್ದ ಶಿಕ್ಷಾಬಂಧಿ ಕೈದಿ ಕೊನೆಗೂ ಸೆರೆ

ಅಷ್ಟರಲ್ಲಿ ಕಾರಿಂದ ಇಳಿದು ಬಂದ ಮತ್ತೆ ನಾಲ್ವರು ಆರೋಪಿಗಳು ಕ್ಷಣ ಮಾತ್ರದಲ್ಲೇ ಎಟಿಎಂ ಮಿಷನ್ ಅನ್ನ ಗ್ಯಾಸ್ ಕಟರ್​ನಿಂದ ಕಟ್ ಮಾಡಿ 30 ಲಕ್ಷಕ್ಕೂ ಅಧಿಕ ಹಣವನ್ನ ಬ್ಲಾಕ್ ಕಲರ್ ಕ್ರಿಟಾ ಕಾರಿನಲ್ಲಿ ತುಂಬಿಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಎಸ್​​ಬಿಐ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡಗಳಿಲ್ಲದಿರುವುದು ತಿಳಿದ್ದ ಖದೀಮರು ಪಕ್ಕಾ ಪ್ಲಾನ್​​ ಮಾಡಿ, ಆಂಧ್ರ ನೊಂದಣಿಯ ನಖಲಿ ನಂಬರ್ ಪ್ಲೇಟ್ ಬೋರ್ಡ್ ಹಾಕಿಕೊಂಡು ಮಾರಕಾಸ್ತ್ರಗಳನ್ನ ತಂದು ಕಳ್ಳತನ ಮಾಡಿದ್ದಾರೆ. ಜೊತೆಗೆ ಖದೀಮರು ರಾಜಾರೋಷವಾಗಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ಕಳ್ಳತನ ಮಾಡುತ್ತಿದ್ದರು ಜನರು ನೋಡುತ್ತಾ ಮೊಬೈಲ್​​ನಲ್ಲಿ ವಿಡಿಯೋ ಮಾಡಿದ್ದಾರೆ ಹೊರತು, ಪೊಲೀಸರಿಗೆ ಮಾಹಿತಿ ನೀಡುವ ಅಥವಾ ಕಳ್ಳರನ್ನ ಸೆರೆ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಶಿಕ್ಷಾಬಂಧಿ ಕೊನೆಗೂ ಅರೆಸ್ಟ್

ಇನ್ನೂ ಎಟಿಎಂನಲ್ಲಿ ಬ್ಯಾಂಕ್ ಸಿಬ್ಬಂದಿ ಸೆಕ್ಯೂರಿಟಿ ಗಾರ್ಡ್ ಮತ್ತು ಸೈರನ್ ಇಲ್ಲದ ಕಾರಣ ಕಳ್ಳರು ಸುಲಭವಾಗಿ ಕಳ್ಳತನ ಮಾಡಿದ್ದಾರೆ ಅಂತ ಸ್ಥಳಿಯರು ಬ್ಯಾಂಕ್ ಸಿಬ್ಬಂದಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸೂಲಿಬೆಲೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಆರೋಪಿಗಳ ಎಡೆಮುರಿಕಟ್ಟಲು 5 ಪ್ರತ್ಯೇಕ ತಂಡಗಳನ್ನ ರಚನೆ ಮಾಡಿದ್ದು, ಬಂದನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:41 pm, Sat, 1 March 25