ಬೆಂಗಳೂರು ವಿಮಾನ ನಿಲ್ದಾಣದ ಆ್ಯಂಥಮ್ ಸಾಂಗ್ ಬಿಡುಗಡೆ: ಇಲ್ಲಿದೆ ವಿಡಿಯೋ

| Updated By: ವಿವೇಕ ಬಿರಾದಾರ

Updated on: Jul 21, 2024 | 8:29 AM

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗ್ರೀನ್ ರಸ್ತೆಗಳು, ಕಲರ್ ಪುಲ್ ಹೈಟೆಕ್ ಟರ್ಮಿನಲ್​ನಿಂದ ಹೆಸರುವಾಸಿ. ವಿಮಾನ ನಿಲ್ದಾಣದ ಆ್ಯಂಥಮ್ ಸಾಂಗ್​ವೊಂದು ಬಿಡುಗಡೆಯಾಗಿದೆ. ನೂತನ ಏರ್ಪೋಟ್ ಹಾಡಿಗೆ ಸಾರ್ವಜನಿಕರು ಫುಲ್ ಫಿದಾ ಆಗಿದ್ದಾರೆ. ಹಾಗಾದರೆ ಅಷ್ಟಕ್ಕೂ ಹೇಗಿದೆ ಆ ಹಾಡು, ಯಾರು ರಚಿಸಿದ್ದು ತಿಳಿಯಲು ಈ ಸ್ಟೋರಿ ಓದಿ.

ಬೆಂಗಳೂರು ವಿಮಾನ ನಿಲ್ದಾಣದ ಆ್ಯಂಥಮ್ ಸಾಂಗ್ ಬಿಡುಗಡೆ: ಇಲ್ಲಿದೆ ವಿಡಿಯೋ
ಬೆಂಗಳೂರು ವಿಮಾನ ನಿಲ್ದಾಣ
Follow us on

ಬೆಂಗಳೂರು, ಜುಲೈ 21: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ದ ಆ್ಯಂಥಮ್ ಸಾಂಗ್ (Anthem Song) ಬಿಡುಗಡೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ತನ್ನ ವಿಶಿಷ್ಟ ಸೇವೆ ಮತ್ತು ಸೌಂದರ್ಯದಿಂದ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಚಾಲ್ತಿಯಲ್ಲಿರುವ ಸೇವಗಳು ಮತ್ತು ಗಾರ್ಡನ್ ಟರ್ಮಿನಲ್​ನ ಸೌಂದರ್ಯವನ್ನ 2 ನಿಮಿಷ 30 ಸೆಕೆಂಡ್​​ಗಳ ವಿಡಿಯೋದಲ್ಲಿ ಚಿತ್ರಿಕರಿಸಿದ್ದು, ಹೊಸ ಹಾಡನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಜಪ್ರಿಯತೆ ಗಳಿಸಿರುವ ಪ್ರಸಿದ್ಧ ಗಾಯಕ ರಿಕಿ ಕೇಜ್ (Ricky Kej) ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆ್ಯಂಥಮ್ ಹಾಡನ್ನ ಹಾಡಿದ್ದಾರೆ. ಸ್ವತಃ ರಿಕಿ ಕೇಜ್ ಅವರೇ ಹಾಡನ್ನ ಬಿಡುಗಡೆ ಮಾಡಿದರು. ಹಾಡಿಗೆ ಪ್ರಯಾಣಿಕರು ಫುಲ್ ಫಿದಾ ಆಗಿದ್ದಾರೆ.


ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಗಾಯಕ ರಿಕಿ ಕೇಜ್ “ಕೆಂಪೇಗೌಡ ವಿಮಾನ ನಿಲ್ದಾಣ ನನಗೆ ಎರಡನೆ ಮನೆ ಇದ್ದಹಾಗೆ. ವಾರಕ್ಕೆ 2 ರಿಂದ 3 ಬಾರಿ ಈ ವಿಮಾನ ನಿಲ್ದಾಣದ ಮೂಲಕ ನಾನು ಪ್ರಯಾಣ ಮಾಡುತ್ತೇನೆ. ಸುಂದರವಾದ ವಿಮಾನ ನಿಲ್ದಾಣ ನಮ್ಮ ಬೆಂಗಳೂರಿನಲ್ಲಿರುವುದು ನಮಗೆ ಖುಷಿಯಾಗಿದೆ. ಜೊತೆಗೆ ಈ ವಿಮಾನ ನಿಲ್ದಾಣಕ್ಕೆ ನಾನು ಹಾಡು ಹಾಡಿರುವುದು ನನಗೆ ಸಂತಸ ತಂದಿದೆ ಅಂತ ತಮ್ಮ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ ಸಂಚಾರ​ ಬಂದ್​, ಬದಲಿ ಮಾರ್ಗ ಇಲ್ಲಿದೆ

ಒಟ್ಟಾರೆ ದಿನದಿಂದ ದಿನಕ್ಕೆ ದೇಶ ವಿದೇಶಗಳಲ್ಲಿ ಪರಿಸರ ಕಾಳಜಿ ಮತ್ತು ಅತ್ಯುತ್ತಮ ಸೇವೆಯಿಂದ ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ವಿಡಿಯೋ ಮೂಲಕ ಸದ್ದು ಮಾಡುತ್ತಿರುವುದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ