ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ ಸಂಚಾರ​ ಬಂದ್​, ಬದಲಿ ಮಾರ್ಗ ಇಲ್ಲಿದೆ

ನಮ್ಮ ಮೆಟ್ರೋದ ಆರ್​​ವಿ ರಸ್ತೆ-ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಕಾರಿಡಾರ್​ ಕಾಮಗಾರಿ ನಡೆಯುತ್ತಿದೆ. ಸದ್ಯ ಸಿಲ್ಕ್ ಬೋರ್ಡ್ ಜಂಕ್ಷನ್​ನಿಂದ ಹೆಚ್​ಎಸ್​ಆರ್ ಲೇಔಟ್ ಕಡೆಗೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಸಂಚರಿಸುವ ಸವಾರರಿಗೆ ಮಾರ್ಗ ಬದಲಾವಣೆ ಸೂಚಿಸಲಾಗಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ ಸಂಚಾರ​ ಬಂದ್​, ಬದಲಿ ಮಾರ್ಗ ಇಲ್ಲಿದೆ
ಬದಲಿ ಮಾರ್ಗ
Follow us
ವಿವೇಕ ಬಿರಾದಾರ
|

Updated on: Jul 20, 2024 | 8:28 AM

ಬೆಂಗಳೂರು, ಜುಲೈ 20: ನಮ್ಮ ಮೆಟ್ರೋದ (Namma Metro) ಆರ್​​ವಿ ರಸ್ತೆ-ಬೊಮ್ಮಸಂದ್ರದವರೆಗೆ (RV Road-Bommasandra) ಹಳದಿ ಮಾರ್ಗದ (Yellow Line) ಕಾರಿಡಾರ್​ ಕಾಮಗಾರಿ ನಡೆಯುತ್ತಿದೆ. ಸೆಂಟ್ರಲ್​ ಸಿಲ್ಕ್​​ ಬೋರ್ಡ್​​ ಜಂಕ್ಷನ್​​ (Silk Bord Junction) ನಗರದ ಪ್ರಮುಖ ಟ್ರಾಫಿಕ್​​ ಹಬ್​ ಆಗಿದೆ. ಸದ್ಯ ಸಿಲ್ಕ್ ಬೋರ್ಡ್ ಜಂಕ್ಷನ್​ನಿಂದ ಹೆಚ್​ಎಸ್​ಆರ್ ಲೇಔಟ್ (HSR Layout) ಕಡೆಗೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಿಲ್ಕ ಬೋರ್ಡ್​ ಆಸುಪಾಸಿನ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ.

ಹೊರವರ್ತುಲ ರಸ್ತೆ (ಔಟರ್​ ರಿಂಗ್​ ರೋಡ್)​ನಲ್ಲಿ ಬಿಟಿಎಂ ಲೇಔಟ್ 29ನೇ ಮೈನ್ ಜಂಕ್ಷನ್ ಕಡೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಹೆಚ್ಎಸ್ಆರ್ ಲೇಔಟ್ ಕಡೆಗೆ ಮತ್ತು ಹೊಸೂರು ರಸ್ತೆಯಲ್ಲಿ ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮೀರಾ ಸ್ಕೂಲ್ ಬಳಿ ಹೊಸದಾಗಿ ನಿರ್ಮಾಣವಾಗಿರುವ ಫ್ಲೈಓವರ್ ಅಪ್ಪರ್ ರ್ಯಾಂಪ್ ಬಳಿ ನಿರ್ಭಂದಿಸಲಾಗಿದೆ. ಶನಿವಾರ (ಜು.20) ರಿಂದಲೇ ವಾಹನ ಸಂಚಾರ ಬಂದ್​ ಮಾಡಲಾಗಿದ್ದು, ಬದಲಿ ಮಾರ್ಗ ಇಲ್ಲಿದೆ

ಮಾರ್ಗ ಬದಲಾವಣೆ ವಿವರ

ಹೊರವರ್ತುಲ ರಸ್ತೆ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆ ಜಂಕ್ಷನ್ ಕಡೆಯಿಂದ ಬಂದು ಹೆಚ್ಎಸ್ಆರ್ ಲೇಔಟ್ ಮತ್ತು ಹೊಸೂರು ಮುಖ್ಯರಸ್ತೆಯ ಮೂಲಕ ರೂಪೇನ ಅಗ್ರಹಾರ ಬೊಮ್ಮನಹಳ್ಳಿ ಕಡೆ ಹೋಗುವ ವಾಹನಗಳು ಮೀರಾ ಸ್ಕೂಲ್ ಬಳಿ ಎಡಕ್ಕೆ ತಿರುಗಿ ಫೈ ಓವರ್ ಅಪ್ಪರ್ ರ್ಯಾಂಪ್ ಮೂಲಕ ಸಂಚರಿಸಿ ಮುಂದೆ ವೈ ಜಂಕ್ಷನ್​ನಲ್ಲಿ ಎಡ ಮತ್ತು ಬಲ ತಿರುವು ಪಡೆದು ಮುಖ್ಯರಸ್ತೆಗೆ ತಲುಪಬಹುದಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗ ಶೀಘ್ರ ವಿಸ್ತರಣೆ: ಸದ್ಯದಲ್ಲೇ ನಾಗಸಂದ್ರ – ಮಾದಾವರ ನಡುವೆ ಸಂಚಾರ

ಹೊರವರ್ತುಲ ರಸ್ತೆ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆ ಜಂಕ್ಷನ್ ಕಡೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ನಿಲ್ದಾಣಕ್ಕೆ ಬರುವ ಬಿಎಂಟಿಸಿ ಬಸ್​ಗಳು ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಸಿಲ್ಕ್ ಬೋರ್ಡ್ ಜಂಕ್ಷನ್​ನ ಫ್ಲೈ ಓವರ್ ಕೆಳಭಾಗದಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ತಲುಪಬೇಕು.

ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ವಾಹನಗಳು ಮಾತ್ರ ಎಡಭಾಗದ ಸರ್ವೀಸ್ ರಸ್ತೆ ಮೂಲಕ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್​ಗೆ ತಲುಪಬಹುದಾಗಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಸಿದ್ದರಾಮಯ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಇಡಿ ಯತ್ನ: ಯತೀಂದ್ರ
ಸಿದ್ದರಾಮಯ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಇಡಿ ಯತ್ನ: ಯತೀಂದ್ರ