AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನೇ ದಿನೆ ಹೆಚ್ಚುತ್ತಲೇ ಇದೆ ಡೆಂಗ್ಯೂ: ರಾಜ್ಯದಲ್ಲಿ 12 ಸಾವಿರ ಪ್ರಕರಣಗಳು ಪತ್ತೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಕೇಸ್​ಗಳು ಏರಿಕೆಯಾಗುತ್ತಿದ್ದು, ನಿನ್ನೆ ಕೂಡ ದಾಖಲೆಯ ಪ್ರಮಾಣದಲ್ಲಿ ಕೇಸ್​ಗಳು ಪತ್ತೆಯಾಗಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದೆ.

ದಿನೇ ದಿನೆ ಹೆಚ್ಚುತ್ತಲೇ ಇದೆ ಡೆಂಗ್ಯೂ: ರಾಜ್ಯದಲ್ಲಿ 12 ಸಾವಿರ ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
Poornima Agali Nagaraj
| Updated By: ಆಯೇಷಾ ಬಾನು|

Updated on: Jul 20, 2024 | 7:20 AM

Share

ಬೆಂಗಳೂರು, ಜುಲೈ.20: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ದಿನದಿಂದ‌ ದಿನಕ್ಕೆ ಡೆಂಗ್ಯೂ (Dengue) ಕೇಸ್​ಗಳು ಹೆಚ್ಚಳವಾಗುತ್ತಿದ್ದು, ನಿನ್ನೆ ಕೂಡ 12 ಸಾವಿರ ಸಮೀಪ ಕೇಸ್​ಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೇಸ್​ಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ನಿನ್ನೆ ರಾಜ್ಯದಲ್ಲಿ 11,480ರಷ್ಟು ಕೇಸ್​ಗಳು ದಾಖಲಾಗಿದ್ದು, ಹೊಸದಾಗಿ 448 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಸಧ್ಯ ರಾಜ್ಯದಲ್ಲಿ 3,230 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿದ್ದು, ಅದರಲ್ಲಿ 2,610 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ 620 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 604 ಮಂದಿಯನ್ನು ಸಾಮಾನ್ಯ ವಾರ್ಡ್​ನಲ್ಲಿ ದಾಖಲಾತಿ‌ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು16 ಮಂದಿಗೆ ಐಸಿಯೂ ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಇಲ್ಲಿಯವರೆಗೆ ಡೆಂಗ್ಯೂ ಹಾವಳಿಗೆ 8 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 201 ಮಕ್ಕಳು, 18 ವರ್ಷ ಮೇಲ್ಪಟ್ಟ 7,289 ಜನರಲ್ಲಿ ಡೆಂಗ್ಯೂ ದೃಢವಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರದ ಗಡಿದಾಟಿದ್ದು, ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 265 ಪ್ರಕರಣಗಳು ದೃಢವಾಗಿವೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 4305 ಪ್ರಕರಣಗಳು ವರದಿಯಾಗಿದ್ದು ಮುಂದಿನ ಡಿಸೆಂಬರ್ ವರೆಗೂ ಡೆಂಗ್ಯೂ ಕೇಸ್ ಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರೇ ಎಚ್ಚರ; ಮಳೆಗೆ ಬಾಯ್ತೆರೆದು ಕೊಳ್ಳುತ್ತಿವೆ ಡೆಡ್ಲಿ ಗುಂಡಿಗಳು

ಇನ್ನು ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಾಗೃತಿ ಮೂಡಿಸುವ ಸಲುವಾಗಿ ನಿನ್ನೆ ಫೀಲ್ಡ್ ಗಿಳಿದಿದ್ರು. ಬೆಂಗಳೂರಿನ ವಾರ್ಡ್ ಗಳಲ್ಲಿ ಲಾರ್ವಾ ನಾಶಪಡಿಸುವ ಔಷಧಿ ಸಿಂಪಡಣೆ ಮಾಡುವ ಸಲುವಾಗಿ ಬೆಂಗಳೂರಿನ ರಾಮಸ್ವಾಮಿ ಪಾಳ್ಯದಲ್ಲಿ ಫೀವರ್ ಕ್ಲಿನಿಕ್ ಗೆ ಚಾಲನೆ ನೀಡಿದ್ರು. ರಾಮಸ್ವಾಮಿ ಪಾಳ್ಯದ ಕಾಲೋನಿಗಳಲ್ಲಿ ಪರಿಶೀಲನೆ ನಡೆಸಿ, ನೀರು ಶೇಖರಣೆ ಮಾಡದಂತೆ ನಿವಾಸಿಗಳಿಗೆ ತಿಳುವಳಿಕೆ ಹೇಳುವ ಮೂಲಕ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಡೆಂಗ್ಯೂ ನಿಯಂತ್ರಣ ಮಾಡಿ ಎಂದು ಮನವಿ ಮಾಡಿದ್ರು. ಅಲ್ಲದೇ ವಸಂತನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದ್ರು. ಇದೇ ವೇಳೆ ಆರೋಗ್ಯ ಸಚಿವರಿಗೆ ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರು ಕೂಡ ಸಾಥ್ ನೀಡಿದ್ರು.

ಒಟ್ನಲ್ಲಿ, ಮಳೆ ಜೋರಾಗಿ ಬಂದ್ರೆ ನೀರಲ್ಲಿ ಇರುವಂತಹ ಲಾರ್ವಗಳು ಕೊಚ್ಚಿ ಹೋಗುತ್ತವೆ. ಆದ್ರೆ ತುಂತುರು ಮಳೆ ಬಂದ್ರೆ ನೀರು ಅಲ್ಲಲ್ಲೆ ನಿಲ್ಲಲಿದ್ದು, ಲಾರ್ವಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಜನರು ಈ ಮಳೆಯಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ