AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ವಾಹನ ಸವಾರರೇ ಎಚ್ಚರ; ಮಳೆಗೆ ಬಾಯ್ತೆರೆದು ಕೊಳ್ಳುತ್ತಿವೆ ಡೆಡ್ಲಿ ಗುಂಡಿಗಳು

ಮೊದಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗುಂಡಿಗಳಿಲ್ಲದ ರೋಡ್​ಗಳು ತುಂಬಾ ಕಮ್ಮಿ. ಅದ್ರಲ್ಲೂ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿದ್ದ ಗುಂಡಿಗಳೆಲ್ಲ ಜನರ ಬಲಿ ಪಡೆಯಲು ಬಾಯ್ತೆರೆದುಕೊಂಡಿವೆ. ಇದರಿಂದ ವಾಹನ ಸವಾರರು ಈಗ ಮತ್ತೆ ಪರದಾಡುವಂತಾಗಿದೆ.

ಬೆಂಗಳೂರಿನ ವಾಹನ ಸವಾರರೇ ಎಚ್ಚರ; ಮಳೆಗೆ ಬಾಯ್ತೆರೆದು ಕೊಳ್ಳುತ್ತಿವೆ ಡೆಡ್ಲಿ ಗುಂಡಿಗಳು
ವಾಹನ ಸವಾರರೇ ಎಚ್ಚರ; ಮಳೆಗೆ ಬಾಯ್ತೆರೆದು ಕೊಳ್ಳುತ್ತಿವೆ ಡೆಡ್ಲಿ ಗುಂಡಿಗಳು
Kiran Surya
| Updated By: ಆಯೇಷಾ ಬಾನು|

Updated on: Jul 20, 2024 | 6:52 AM

Share

ಬೆಂಗಳೂರು, ಜುಲೈ.20: ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ರೋಡ್​ಗಳೆಲ್ಲ ಗುಂಡಿಮಯವಾಗಿವೆ (Potholes). ಗುಂಡಿಗಳಲ್ಲಿ ವಾಹನ ಓಡಿಸಲು ಆಗದೆ ಪರದಾಡುವಂತಾಗಿದೆ. ಮಳೆ (Bengaluru Rain) ಬಂದಾಗ ಮಳೆ ನೀರು ತುಂಬಿಕೊಂಡು ರೋಡ್ ಯಾವುದು, ಗುಂಡಿ ಯಾವುದು ಅಂತ ಗೊತ್ತಾಗದೆ ಭಯದಲ್ಲಿ ಸವಾರರು ವಾಹನ ಸಂಚಾರ ಮಾಡುತ್ತಿದ್ದಾರೆ. ಇದು ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಿಎಂಟಿಸಿ ಬಸ್ ಸ್ಟ್ಯಾಂಡ್ ರೋಡ್​ನ ಕಥೆ.

ಈ ರೋಡ್ ನಲ್ಲಿ ಪ್ರತಿದಿನ ಸಾವಿರಾರು ಬಸ್ಸುಗಳು ಸಂಚಾರ ಮಾಡುತ್ತವೆ. ಲಕ್ಷಾಂತರ ಜನರು ಓಡಾಡುತ್ತಾರೆ. ಆದರೆ ಈ ರೋಡ್ ಗೆ ಎಂಟ್ರಿಯಾಗ್ತಿದ್ದಂತೆ ವೆಲ್ಕಮ್ ಮಾಡೋದೆ ಗುಂಡಿಗಳು. ಈ ರೋಡ್​ನಲ್ಲಿ ಐದೋ ಹತ್ತೋ ಗುಂಡಿಗಳಿಲ್ಲ ಸುಮಾರು ಐವತ್ತಕ್ಕೂ ಹೆಚ್ಚು ಗುಂಡಿಗಳಿವೆ ಸಣ್ಣಪುಟ್ಟ ಗುಂಡಿಗಳಿಲ್ಲ ದೊಡ್ಡ ದೊಡ್ಡ ಗುಂಡಿಗಳು. ಈ ಗುಂಡಿಗಳಿಂದ ಮೆಜೆಸ್ಟಿಕ್ ಎಂಟ್ರಿ ಆಗ್ತಿದಂತೆ ಬಸ್ ನಲ್ಲಿರುವ ಪ್ರಯಾಣಿಕರು ನಿಂತು ಕೊಳ್ಳುತ್ತಾರೆ ಅಥವಾ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಕೈಕಾಲು, ಸೊಂಟ ಮುರಿದು ಹೋಗದೆ ಇರಲಿ ಎಂದು ಅಷ್ಟರಮಟ್ಟಿಗೆ ಇಲ್ಲಿಯವರೆಗೆ ಗುಂಡಿಗಳು ಆಳವಾಗಿವೆ.

ಇದನ್ನೂ ಓದಿ: ರಮ್ಯಾ ಬದಲು ರಚಿತಾ ರಾಮ್: ಪ್ರೇಕ್ಷಕರು ಇದನ್ನು ಒಪ್ಪಿಕೊಳ್ತಾರಾ? ನಾಗಶೇಖರ್ ಹೇಳಿದ್ದಿಷ್ಟು

ಇನ್ನೂ ಇತ್ತ ಬನ್ನೇರುಘಟ್ಟ ರೋಡ್, ಆನೆಪಾಳ್ಯ ಜಂಕ್ಷನ್ ಬಳಿ ಬಿದ್ದಿರುವ ಗುಂಡಿಗಳಲ್ಲಿ ವಾಹನಗಲೇನಾದ್ರು ಇಳಿದ್ರೆ ಮುಗಿತು ಮತ್ತೆ ಮೇಲೆ ಬರಲು ಹರಸಾಹಸ ಪಡಬೇಕು. ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಆ ಕಡೆಯಿಂದ ಈ ಕಡೆ ಟರ್ನ್ ಮಾಡ್ತಾರೆ. ಇದರಿಂದ ಹಿಂದೆ ಬರುವ ವಾಹನಗಳಿಗೂ ಸಮಸ್ಯೆಯಾಗುತ್ತಿದೆ. ಈ ಗುಂಡಿಗಳಿಂದ ಈ ರೋಡ್ ಟ್ರಾಫಿಕ್ ಕೂಡ ಆಗುತ್ತಿದೆ. ಇತ್ತ ಹೊಸಕೆರೆಹಳ್ಳಿ ಕೋಡಿ ರೋಡ್ ನಲ್ಲಂತೋ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಈ ರೋಡ್​ನಲ್ಲಿ ಓಡಾಡಲು ಆಗೋದೆ ಇಲ್ಲ ಗುಂಡಿಗಳಲ್ಲಿ ಅಷ್ಟು ಕೊಚ್ಚೆ ನೀರು ನಿಂತಿದೆ‌‌. ಪ್ರತಿದಿನ ಸ್ಕೂಲ್ ಕಾಲೇಜಿಗೆ ಹೋಗುವ ಮಕ್ಕಳು ಕಷ್ಟ ಪಟ್ಟು ನಡೆಯುತ್ತಾರೆ.

ಒಟ್ನಲ್ಲಿ ನಗರದಲ್ಲಿ ಸುರಿಯುತ್ತಿರು ಮಳೆಯಿಂದ ಗುಂಡಿಗಳಲ್ಲಿ ನೀರು ನಿಂತಿರುತ್ತೆ. ಹಾಗಾಗಿ ವಾಹನ ಸವಾರರಿಗೆ ಗುಂಡಿಗಳು ಯಾವುದು ರೋಡ್ ಯಾವುದು ಅಂತ ಗೊತ್ತಾಗದೆ ಪರದಾಡುವಂತಾಗಿದೆ. ಕೂಡಲೇ ಬಿಎಂಟಿಸಿ ಮತ್ತು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಇಲ್ಲಾಂದ್ರೆ ವಾಹನ ಸವಾರರು ಕೈ ಕಾಲು ಮುರಿದುಕೊಳ್ಳುವುದು ಗ್ಯಾರೆಂಟಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ