ಓಂಶಕ್ತಿ ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ: ಕೇಸ್​ ಬುಕ್, ಬೆಂಜ್ ಕಾರು ಜಪ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 16, 2025 | 4:37 PM

ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಬೆಂಜ್ ಕಾರು ರಸ್ತೆ ದಾಟುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ. ನೆಲಮಂಗಲದಲ್ಲಿ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಅಪಘಾತಕ್ಕೀಡಾದ ಕಾರನ್ನು ಜಪ್ತಿ ಮಾಡಲಾಗಿದೆ.

ಓಂಶಕ್ತಿ ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ: ಕೇಸ್​ ಬುಕ್, ಬೆಂಜ್ ಕಾರು ಜಪ್ತಿ
ಓಂಶಕ್ತಿ ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ: ಕೇಸ್​ ಬುಕ್, ಬೆಂಜ್ ಕಾರು ಜಪ್ತಿ
Follow us on

ನೆಲಮಂಗಲ, ಜನವರಿ 16: ಶಾಸಕ ಕೆ.ಸಿ.ವೀರೇಂದ್ರ (kc veerendra) ಪಪ್ಪಿ ಕಾರು ಡಿಕ್ಕಿ ಹೊಡೆ ಪರಿಣಾಮ ಇಬ್ಬರು ಓಂಶಕ್ತಿ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆ ಚಾಲನೆ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. ಅಪಘಾತಕ್ಕೀಡಾದ KA 55, P 0003 ಸಂಖ್ಯೆ ಬೆಂಜ್ ಕಾರನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ ಆಗಿದೆ. ಬೆಳಿಗ್ಗೆ 9:25ರ ಸುಮಾರಿಗೆ ಒಟ್ಟು ಮೂರು ಕಾರುಗಳ ಮುಖಾಂತರ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ನೆಲಮಂಗಲ: ಓಂಶಕ್ತಿ ಮಾಲಾಧಾರಿಗಳಿಗೆ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ

ಮುಂದಿನ ಕಾರಿನಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ತೆರಳುತ್ತಿದ್ದರು. KA 55, P 0003 ಸಂಖ್ಯೆ ಬೆಂಜ್​ ಕಾರಿನಲ್ಲಿ ಪತ್ನಿ ಚೈತ್ರಾ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳಿಗೆ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತ ನಂತರ ವೀರೇಂದ್ರ ಪಪ್ಪಿ ಕಾರಿನಲ್ಲೇ ಪತ್ನಿ ಚೈತ್ರಾ ಬೆಂಗಳೂರಿಗೆ ತೆರಳಿದ್ದಾರೆ. ಬೆಂಜ್ ಕಾರಿನಲ್ಲೇ ಗಾಯಳುಗಳನ್ನು ಪಿಎ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಗಾಯಳು ಹೇಳಿದ್ದಿಷ್ಟು

ಟಿವಿ 9ಗೆ ಗಾಯಳು ಬಿಂದು ಪ್ರತಿಕ್ರಿಯಿಸಿದ್ದು, ರಸ್ತೆ ದಾಟಲು ನಿಂತಿದ್ದ ವೇಳೆ ಏಕಾಏಕಿ ಕಾರು ಬಂದು ನಮ್ಮ ಅತ್ತೆ ಹಾಗೂ ನನಗೆ ಡಿಕ್ಕಿಯಾಗಿದೆ. ಆಮೇಲೆ ನನಗೆ ಏನಾಯಿತು ಗೊತ್ತಿಲ್ಲ. ಅವರ ಕಾರಿನಲ್ಲೇ ನಮ್ಮನ್ನ ಆಸ್ಪತ್ರೆಗೆ ಕರಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದಾರೆ. ನನಗೆ ತಲೆ, ಕೈ, ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಂಗಿಗೆ ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದನಿಗೆ ಅಣ್ಣನಿಂದ ಧರ್ಮದೇಟು

ಶಾಸಕ ವೀರೇಂದ್ರ ಪಪ್ಪಿ ಅವರ ಪತ್ನಿ ಚೈತ್ರ ಅವರು ಹಿರಿಯ ನಟ ದೊಡ್ಡಣ್ಣರ ಮಗಳು. ಘಟನೆಯಿಂದ ಭಯಗೊಂಡು ಚೈತ್ರ ದೊಡ್ಡಣ್ಣ ಮನೆಗೆ ಬಂದಿದ್ದಾರೆ. ದೊಡ್ಡಣ್ಣ ಬಳಿ ಬಂದು ಅಪಘಾತದ ದೃಶ್ಯ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಗಳನ್ನ ಸಂತೈಸಿ ಧೈರ್ಯ ತುಂಬಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:36 pm, Thu, 16 January 25