Bengaluru Metro: ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಆಗಿ ಹೊರಹೊಮ್ಮಿದ ಬೆಂಗಳೂರು ನಮ್ಮ ಮೆಟ್ರೋ
ಬೆಂಗಳೂರು ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಆಗಿ ಹೊರಹೊಮ್ಮಿದೆ. 63 ನಿಲ್ದಾಣಗಳೊಂದಿಗೆ 69.66 ಕಿ.ಮೀ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ದೇಶದ ಎರಡನೇ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ದೆಹಲಿ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ.
ಬೆಂಗಳೂರು: ಬಹು ನಿರೀಕ್ಷಿತ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ (KR Puram-Whitefield Metro) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 25ರಂದು ಉದ್ಘಾಟಿಸುವ ಮೂಲಕ ಬೆಂಗಳೂರು ನಮ್ಮ ಮೆಟ್ರೋ (Namma Metro) ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಆಗಿ ಹೊರಹೊಮ್ಮಿದೆ. 63 ನಿಲ್ದಾಣಗಳೊಂದಿಗೆ 69.66 ಕಿ.ಮೀ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ಪ್ರಧಾನಮಂತ್ರಿಯವರು ಉದ್ಘಾಟಿಸಿರುವ ಈ ನಿರ್ದಿಷ್ಟ ವಿಸ್ತರಣೆಯು ಬೆಂಗಳೂರಿನ ಪೂರ್ವ ಅಂಚನ್ನು ನೈಋತ್ಯ ಅಂಚಿಗೆ ಸೇರುತ್ತದೆ.
ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗದ ಒಟ್ಟು ಉದ್ದವು ಸುಮಾರು 42.5 ಕಿಮೀ ಹೊಂದಿದ್ದು, ಇದು ಕೆಆರ್ ಪುರಂನಲ್ಲಿ (ಬ್ಲೂ ಲೈನ್) ಇಂಟರ್‌ಚೇಂಜ್ ಹೊಂದಿದೆ. ಎಂಜಿ ರಸ್ತೆಯಲ್ಲಿ (ನೇರಳೆ ಲೈನ್) ಮತ್ತು ಮೆಜೆಸ್ಟಿಕ್ನಲ್ಲಿ (ಹಸಿರು ಲೈನ್) ಇಂಟರ್‌ಚೇಂಜ್ ಹೊಂದಿದೆ. ಪ್ರಸ್ತುತ ಈ ಮಾರ್ಗವು ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ (ಸುಮಾರು 26 ಕಿಮೀ) ಒಟ್ಟು ಉದ್ದದ ಕೇವಲ 60 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ.
ನಿನ್ನೆ ಉದ್ಘಾಟನೆ ನಂತರ ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ್ದರು. 13.71 ಕಿಲೋ ಮೀಟರ್ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್.ಪುರ, ವೈಟ್ ಫೀಲ್ಡ್ ಭಾಗದಲ್ಲಿ ಆಗುತ್ತಿದ್ದ ಸಂಚಾರ ದಟ್ಟಣೆ ಅಲ್ಪಮಟ್ಟಿಗೆ ನಿವಾರಣೆಯಾಗಲಿದೆ.
ವೈಟ್ಫೀಲ್ಡ್ನಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದರೆ ಕೆ.ಆರ್.ಪುರಂ ನಿಲ್ದಾಣ ಇನ್ನೂ ಅಪೂರ್ಣವಾಗಿದೆ. ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ. ಅಲ್ಲದೆ ಕೆ.ಆರ್.ಪುರದಿಂದ ಬೈಯ್ಯಪ್ಪನಹಳ್ಳಿಗೆ ಇನ್ನೂ ಕನೆಕ್ಟಿವಿಟಿ ಕಲ್ಪಿಸಿಲ್ಲ. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ ಟ್ರೀಪಾರ್ಕ್, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಾಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್ ಪಾಳ್ಯ, ಸಿಂಗಯ್ಯನಪಾಳ್ಯ, ಕೆಆರ್‌ಪುರದಲ್ಲಿ ಮೆಟ್ರೋ ನಿಲ್ದಾಣಗಳಿವೆ.
ಕೆಆರ್‌ಪುರ, ವೈಟ್‌ಫೀಲ್ಡ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಇದ್ದು ಕೆಆರ್‌ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್‌ಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
ಮೆಟ್ರೋದಲ್ಲಿ ಮೊಬಿಲಿಟಿ ಕಾರ್ಡ್ ಬಳಕೆ
ಶನಿವಾರ, ನಮ್ಮ ಮೆಟ್ರೋದ ಮೊದಲ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಪ್ರಧಾನ ಮಂತ್ರಿಯವರು ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಸಲು ಬಳಸಿದರು. RBL ಬ್ಯಾಂಕ್‌ನ (BMRCL ಗಾಗಿ ನೀಡುವ ಬ್ಯಾಂಕ್) ರೂಪಾಯಿ NCMC ಕಾರ್ಡ್‌ಗಳು ಗುರುವಾರದಿಂದ (ಮಾರ್ಚ್ 30) ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತವೆ ಎಂದು BMRCL ಪ್ರಕಟಿಸಿದೆ. NCMC ಕಾರ್ಡ್‌ಗಳು ನಮ್ಮ ಮೆಟ್ರೋದಲ್ಲಿ ಮಾತ್ರವಲ್ಲದೆ ಇತರ ನಗರಗಳ ಮಹಾನಗರಗಳಲ್ಲಿಯೂ ಜನರು ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಕಾರ್ಡ್‌ನ ಬೆಲೆ 100 ರೂ. ಮತ್ತು ಕಾರ್ಡ್ ಹೊಂದಿರುವವರು ಪ್ರಯಾಣದ ಅವಶ್ಯಕತೆಗೆ ಅನುಗುಣವಾಗಿ ರೀಚಾರ್ಜ್ ಮಾಡಬೇಕು. 2020 ರಲ್ಲಿ BMRCL ಕಾರ್ಡ್‌ನ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಲಾಗಿತ್ತಾದರೂ ಕಾರ್ಡ್‌ಗಳನ್ನು ಪರಿಚಯಿಸಲು ನಿಗದಿಪಡಿಸಿದ್ದ ಹಲವಾರು ಗಡುಗಳನ್ನು ಮೀರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Sun, 26 March 23