ಗುಂಡಿಗಳೇ ತುಂಬಿದ ಕನಕಪುರ ರಸ್ತೆ: ಸರ್ಕಾರದ ಗಮನ ಸೆಳೆಯಲು ಪೋಸ್ಟರ್​ ಹಾಕಿದ ಜನ

ನೈಸ್​ರೋಡ್​ನಿಂದ ಕನಕಪುರವರೆಗೆ 50 ಕಿಮೀ ದೂರದವರೆಗೆ ರಸ್ತೆ ಗುಂಡಿಗಳಿಂದ ಕೂಡಿದ್ದು, ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ರಸ್ತೆ ದುರಸ್ತಿ ಮಾಡುವಂತೆ ಸರ್ಕಾರದ ಗಮನ ಸೆಳೆಯಲು, ನಗರದ ಚಾರಿಟೇಬಲ್​ ಟ್ರಸ್ಟ್​ ಪೀಸ್​ಫುಲ್​ ಅಫ್​ ಇಂಡಿಯಾ ಟ್ರಸ್ಟ್​ ಹಾಗೂ ಪೀಸ್​​ ಫುಲ್​ ಇಂಡಿಯಾ ಟಿವಿಯವರು ದಾರಿ ಮಧ್ಯೆ ಪೋಸ್ಟರ್​ ಹಾಕಿದ್ದಾರೆ.  

ಗುಂಡಿಗಳೇ ತುಂಬಿದ ಕನಕಪುರ ರಸ್ತೆ: ಸರ್ಕಾರದ ಗಮನ ಸೆಳೆಯಲು ಪೋಸ್ಟರ್​ ಹಾಕಿದ ಜನ
Follow us
TV9 Web
| Updated By: Pavitra Bhat Jigalemane

Updated on:Dec 07, 2021 | 6:25 PM

ಬೆಂಗಳೂರು: ಒಂದೆಡೆ ಸರ್ಕಾರ ಜನತೆಗೆ ಬೇಕಾದ ಸೌಕರ್ಯಗಳನ್ನು ಮಾಡಲು ಸದಾ ಸಿದ್ಧ ಎನ್ನುತ್ತಿದೆ. ಆದರೆ ಹದಗೆಟ್ಟ ರಸ್ತೆಗಳು, ಸರಿಯಾದ ಕ್ರಮದಲ್ಲಿ ನಡೆಯದೇ ಬಾಕಿ ಇರುವ ಕಾಮಗಾರಿಗಳು ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಂಗಳೂರು ನಗರದಲ್ಲೇ ಇಂತಹ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ರಸ್ತೆಯ ಮೇಲಿನ ಗುಂಡಿಗಳಿಂದ ಈಗಾಗಲೇ ಹಲವರ ಜೀವ ಬಲಿಯಾಗಿದೆ. ಇದೀಗ ನೈಸ್​ರೋಡ್​ನಿಂದ ಕನಪುರವರೆಗೆ ರಾಷ್ಟ್ರೀಯ ಹೆದ್ದಾರಿ 209ರಲ್ಲಿ  50 ಕಿಮೀ ದೂರದವರೆಗೆ ರಸ್ತೆ ಗುಂಡಿಗಳಿಂದ ಕೂಡಿದ್ದು, ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದರಂತೂ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತದೆ. ಇದರಿಂದ ವಾಹನ ಸವಾರರು ಸಂಚರಿಸಲಾಗದೆ ಸಾಲು ಸಾಲು ವಾಹನಗಳು ನಿಲ್ಲುತ್ತಿವೆ. ಇದರಿಂದ ವಾಹನಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ರಸ್ತೆ ದುರಸ್ತಿ ಮಾಡುವಂತೆ ಸರ್ಕಾರದ ಗಮನ ಸೆಳೆಯಲು, ನಗರದ ಚಾರಿಟೇಬಲ್​ ಟ್ರಸ್ಟ್​ ಪೀಸ್​ಫುಲ್​ ಅಫ್​ ಇಂಡಿಯಾ ಟ್ರಸ್ಟ್​ ಹಾಗೂ ಪೀಸ್​​ ಫುಲ್​ ಇಂಡಿಯಾ ಟಿವಿಯವರು ದಾರಿ ಮಧ್ಯೆ ಪೋಸ್ಟರ್​ ಒಂದನ್ನು ಅಳವಡಿಸಿದ್ದಾರೆ. ಪೋಸ್ಟರ್​ನಲ್ಲಿ ಎಚ್ಚರವಿರಲಿ ವಾಹನ ಸವಾರರೇ ಈ ಕನಕಪುರ ರಸ್ತೆ ತುಂಬಾ ಹದಗೆಟ್ಟಿದೆ. ನಿಧಾನವಾಗಿ ಚಲಿಸಿ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯವರು ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಬರೆದಿದ್ದಾರೆ.

ಈ ಬಗ್ಗೆ ಟಿವಿ9 ಡಿಜಿಟಲ್​ನೊಂದಿಗೆ ಮಾತನಾಡಿದ ಪೀಸ್​ಫುಲ್​ ಇಂಡಿಯಾದ ಕಾರ್ಯದರ್ಶಿ ನದೀಮ್​ ಪಾಶಾ, ಕಳೆದ 6 ತಿಂಗಳಿನಿಂದ ಈ ರೀತಿ ಗುಂಡಿಗಳಿರುವ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ನೈಸ್​ರೋಡ್​ನಿಂದ ಕನಕಪುರದವರೆಗೆ 50 ಕಿಮೀ ದೂರ ರಸ್ತೆ ಗುಂಡಿಗಳಿಂದ ಕೂಡಿದೆ. ಸಂಚಾರ ಮಾಡುವುದೇ ಕಷ್ಟವಾಗಿದೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ದಿನಕ್ಕೆ 2-3 ಅಪಘಾತಗಳು ಸಂಭವಿಸುತ್ತಲೇ ಇದೆ. ಈಗಾಗಲೇ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗ್ಲಾಸ್​ ಚೂರುಗಳು ಬಿದ್ದಿದ್ದು, ವಾಹನಸವಾರರು ಪರದಾಡುವಂತಾಗಿದೆ. ಹಲವು ಬಾರಿ ಹದಗೆಟ್ಟ ರಸ್ತೆ ದುರಸ್ತಿ ಮಾಡಿಕೊಡುವಂತೆ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಹೀಗಾಗಿ ಜನರ ಸುರಕ್ಷತೆಗಾಗಿ ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ. ಈ ಪೋಸ್ಟರ್​ ಮೂಲಕ ಈಗಾಗಲೇ ಸಾಕಷ್ಟು ಜನರನ್ನು ತಲುಪಿದ್ದೇವೆ. ಹೀಗಾಗಿ ನಮಗೆ ಜನರ ಬೆಂಬಲವಿದೆ. ರಸ್ತೆ ದುರಸ್ತಿ ಕಾರ್ಯ ಮಾಡಿಕೊಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರಸ್ತೆ ಬಂದ್​ ಮಾಡಿ ಧರಣಿ ನಡೆಸಲು ಜನರು ನಮ್ಮೊಂದಿಗೆ ಕೈಜೋಡಿಸಲು ತಯಾರಾಗಿದ್ದಾರೆ. ಇದರ ಜತೆಗೆ ಆರೋಹಳ್ಳಿ ಇಂಡಸ್ಟ್ರೀಯ ಅಸೋಸಿಯೇಷನ್ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರಸ್ತೆ ದುರಸ್ತೆಯೆಡೆಗೆ ಗಮನಹರಿಸಿ, ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂಓದಿ: 

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಪ್ರಸ್ಟಿ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ

ಮತಾಂತರ ನಿಷೇಧ ಖಾಸಗಿ ವಿಧೇಯಕ: ಸರ್ಕಾರದೊಂದಿಗೆ ಸಂಘರ್ಷವಿಲ್ಲ ಎಂದ ತುಳಸಿ ಮುನಿರಾಜು

Published On - 6:14 pm, Tue, 7 December 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?