ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 7ರ ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ತೆರಳುತ್ತಿದ್ದ ಕಾರು ಚಾಲಕನಿಗೆ ಕೆಲ ಪುಂಡರ ಗುಂಪು ಬೈಕ್ನಲ್ಲಿ ವೀಲಿಂಗ್ ಮಾಡುತ್ತಾ 3 ಕಿಲೋ ಮೀಟರ್ಗೂ ಅಧಿಕ ದೂರ ಕೀಟಲೆ ನೀಡಿದ್ದಾರೆ. ಹೀಗಾಗಿ ಕೋಪಗೊಂಡ ಕಾರು ಚಾಲಕ ನಡು ರಸ್ತೆಯಲ್ಲೇ ಪುಂಡರ ಬೈಕ್ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ನಿಂದ ಆವತಿ ಗ್ರಾಮದವರೆಗೂ ಪುಂಡರು ವೀಲಿಂಗ್ ಮಾಡುತ್ತ ಕಾರು ಚಾಲಕನಿಗೆ ಹಾವಳಿ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಚಾಲಕ ನಂತರ ಆವತಿ ಗ್ರಾಮದ ಬಳಿ ಹೆದ್ದಾರಿಯಲ್ಲೆ ಬೈಕ್ ಅಡ್ಡಗಟ್ಟಿ ಬುದ್ದಿವಾದ ಹೇಳಿದ್ದಾರೆ. ಈ ವೇಳೆ ಕಾರು ಚಾಲಕರಿಗೆ ವೀಲಿಂಗ್ ಪುಂಡರು ಅವಾಜ್ ಹಾಕಿದ್ದಾರೆ ಎನ್ನಲಾಗಿದ್ದು, ಅವಾಜ್ ನಿಂದ ಕೋಪಗೊಂಡ ಕಾರು ಚಾಲಕ ವೀಲಿಂಗ್ ಮಾಡಿಕೊಂಡು ಬಂದ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಇನ್ನೂ ಕಾರು ಚಾಲಕ ಬೈಕ್ಗೆ ಬೆಂಕಿ ಹಚ್ಚುತ್ತಿದ್ದಂತೆ ಸ್ಥಳೀಯರು ಸಹ ಜಮಾಯಿಸಿ ವೀಲಿಂಗ್ ಪುಂಡರ ವಿರುದ್ಧ ತಿರುಗಿ ಬಿದ್ದಿದ್ದು ಎಚ್ಚೆತ್ತ ಪುಂಡರು ಹುರಿಯುತ್ತಿದ್ದ ಬೈಕ್ ಅನ್ನ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಇನ್ನೂ ಪುಂಡರು ಎಸ್ಕೇಪ್ ಆಗ್ತಿದ್ದಂತೆ ಕಾರು ಚಾಲಕ ಸಹ ಸ್ಥಳದಿಂದ ತೆರಳಿದ್ದು, ಮೇಲ್ನೂಟಕ್ಕೆ ಆಂಧ್ರ ರಿಜಿಸ್ಟ್ರೇಷನ್ ನಂಬರ್ ನ ಬೈಕ್ ಅನ್ನೂದು ಗೊತ್ತಾಗಿದೆ. ಇನ್ನೂ ಬೈಕ್ ಗೆ ಬೆಂಕಿ ಹಚ್ಚಿದ್ರು ಬೈಕ್ ಮಾಲೀಕ ಮತ್ತು ಕಾರು ಚಾಲಕ ಯಾರು ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಹೀಗಾಗಿ ಹೊತ್ತಿ ಉರಿದ ಬೈಕ್ ಹೆದ್ದಾರಿಯ ಬದಿಯಲ್ಲೆ ಬಿದ್ದಿದ್ದು ವೀಲಿಂಗ್ ಪುಂಡರ ಹಾವಳಿಯಿಂದ ಬೇಸತ್ತಿದ್ದ ಸ್ಥಳೀಯರು ಕಾರು ಚಾಲಕ ಕಾರ್ಯವನ್ನ ಶ್ಲಾಘಿಸಿದ್ದಾರೆ. ಇನ್ನೂ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಯಾರಾದ್ರು ಬಂದು ದೂರು ಕೊಡ್ತಾರ ಅಂತ ಪೊಲೀಸರು ಸಹ ಸುಮ್ಮನಾಗಿದ್ದಾರೆ.
ವೀಕೆಂಡ್ನಲ್ಲಿ ವೀಲಿಂಗ್ ಪುಂಡರ ಹಾವಳಿಗೆ ಬೆಸತ್ತ ಜನ
ವೀಕೆಂಡ್ ಬಂತು ಅಂದ್ರೆ ಸಾಕು ನಂದಿಬೆಟ್ಟಕ್ಕೆ ಹೋಗೋಕೆ ಲಾಂಗ್ ಡ್ರೈವ್ ಅಂತೆಲ್ಲ ಪುಡಾರ ಗ್ಯಾಂಗ್ ಜನರ ಮಧ್ಯೆಯೆ ಡೆಡ್ಲಿ ವೀಲಿಂಗ್ ಮಾಡುತ್ತ ಕಾಟ ಕೊಡುತ್ತಿದ್ದರು. ಕೊಂಚವೂ ಭಯವಿಲ್ಲದೆ ದರ್ಪ ಮೆರೆಯುತ್ತಿದ್ದರು. ಜೊತೆಗೆ ಈ ಬಗ್ಗೆ ಸಾಕಷ್ಟು ಭಾರಿ ಪೊಲೀಸರಿಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಕಾರಣ ಜನರು ಸಹ ವೀಲಿಂಗ್ ಪುಂಡರ ವಿರುದ್ದ ರೋಸಿಹೋಗಿದ್ದರು. ಸದ್ಯ ವೀಲಿಂಗ್ ಪುಂಡರಿಗೆ ಸರಿಯಾಗೆ ಬಿಸಿ ಮುಟ್ಟಿಸಿದ್ದಾರೆ ಅಂತ ಕಾರು ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಬೈಕ್ಗೆ ಬೆಂಕಿ ಹಚ್ಚಿದರೂ ದೂರು ನೀಡದೆ ಸುಮ್ಮನಾಗಿದ್ದು ಬೈಕ್ ಆಂಧ್ರ ರಿಜಿಸ್ಟ್ರೇಷನ್ ಹೊಂದಿರೂ ಕಾರಣ ಕಳ್ಳತನ ಮಾಡಿರೂ ಬೈಕ್ ತಂದು ಶೋಕಿ ಮಾಡ್ತಿದ್ರ ಅನ್ನೂ ಶಂಕೆಯು ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮುಂಜಾನೆಯೇ ವೀಲಿಂಗ್ ಹಾವಳಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್