ನೀನೆ ಎಲ್ಲ, ನೀನಿಲ್ಲದೆ ನಾ ಇಲ್ಲ ಎಂದು ನಂಬಿಸಿ ಗರ್ಭಿಣಿ ಮಾಡಿ ಮೋಸ; ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಮಹಿಳೆ

ಮಹಿಳೆಯ ಜೊತೆ ಸಲುಗೆ ಬೆಳಸಿ ಅತ್ಯಾಚಾರ ಎಸಗಿ 7 ತಿಂಗಳು ಗರ್ಭಿಣಿಯಾದ ಬಳಿಕ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಆರೋಪಿ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಕ್ಕಾಗಿ ಮಹಿಳೆ ಅಂಗಲಾಚಿದ್ದಾರೆ.

ನೀನೆ ಎಲ್ಲ, ನೀನಿಲ್ಲದೆ ನಾ ಇಲ್ಲ ಎಂದು ನಂಬಿಸಿ ಗರ್ಭಿಣಿ ಮಾಡಿ ಮೋಸ; ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಮಹಿಳೆ
ನೆಲಮಂಗಲ ಟೌನ್ ಠಾಣೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on: Nov 29, 2023 | 11:32 AM

ನೆಲಮಂಗಲ, ನ.29: ನೀನಂದ್ರೆ ನನಗೆ ತುಂಬಾ ಇಷ್ಟ, ನೀನಿಲ್ಲದೆ ನಾ ಇಲ್ಲ ಎಂದು ಮಹಿಳೆಯ ಜೊತೆ ಸಲುಗೆ ಬೆಳಸಿ ಅತ್ಯಾಚಾರ ಎಸಗಿ 7 ತಿಂಗಳು ಗರ್ಭಿಣಿಯಾದ (Pregnant) ಬಳಿಕ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಆರೋಪಿ ಮಹೇಶ್ ಹಾಗೂ ಆತನ ತಂಗಿ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿರುವ 36 ವರ್ಷದ ಮಹಿಳೆಗೆ ಮಹೇಶ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ಇವರಿಬ್ಬರೂ ಆಗಾಗ್ಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಇದರ ಅಡ್ವಾಂಟೇಜ್ ಪಡೆಯಲು ಮುಂದಾದ ಮಹೇಶ್ ಒಮ್ಮೆ ಮಹಿಳೆಯನ್ನು ಆತನ ಕಚೇರಿಗೆ ಕರೆಸಿಕೊಂಡು ನಾನು ನಿನ್ನ ಇಷ್ಟ ಪಡುತ್ತೇನೆ. ನೀನು ಅದ್ರೆ ನನಗೆ ತುಂಬಾ ಇಷ್ಟ. ದಲಿತ ಜನಾಂಗಕ್ಕೆ ಸೇರಿದರೂ ಪರವಾಗಿಲ್ಲ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಕೆ ಬರುವ ರೀತಿ ವರ್ತಿಸಿದ್ದಾನೆ. ನೀನು ನಿನ್ನ ಗಂಡನನ್ನು ಬಿಟ್ಟು ಬಾ ಎಂದು ಹೇಳಿದ್ದಾನೆ. ಆಗ ಮಹಿಳೆ ನನಗೆ ಇದು ಇಷ್ಟ ಇಲ್ಲ. ಬಿಟ್ಟು ಬಿಡು ಎಂದರೂ ಕೇಳದೆ ಪದೇ ಪದೇ ಫೋನ್ ಮಾಡಿ ತಲೆ ತಿಂದಿದ್ದಾನೆ.

ನಿನ್ನನ್ನು ರಾಣಿ ತರ ಸುಖವಾಗಿಟ್ಟುಕೊಳ್ಳುತ್ತೇನೆಂದು ನಂಬಿಸಿ ಪದೇ ಪದೇ ಮಹಿಳೆಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸಿದ್ದಾನೆ. ಈ ವಿಚಾರ ಮಹಿಳೆಯ ಗಂಡನಿಗೆ ತಿಳಿದು ಮನೆಯಲ್ಲಿ ದೊಡ್ಡ ಜಗಳವಾಗಿ ಗಂಡ ಮಹಿಳೆಯನ್ನು ತೊರೆದಿದ್ದಾರೆ. ಬಳಿಕ ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ಮಹೇಶ, ಮಹಿಳೆ ಬಳಿ ನೀನು ವಿಚ್ಛೇದನ ನೀಡು ನಾನು ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ಬಳಿಕ ಮನೆಗೆ ಕರೆಸಿ ಮಹಿಳೆ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ; ಮಹಿಳಾ ಏಜೆಂಟ್, ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ

ಪತಿ ಬಿಟ್ಟು ಹೋದ 3 ತಿಂಗಳ ನಂತರ ಮಹಿಳೆ ಪ್ರೆಗ್ನೆಂಟ್ ಆಗಿದ್ದು ಈ ವಿಚಾರವನ್ನು ಆರೋಪಿ ಮಹೇಶನ ತಂಗಿಗೆ ಮಹಿಳೆ ತಿಳಿಸಿದ್ದಾರೆ. ಆಗ ಹೀನ ಜಾತಿಯವಳೇ, ಎಷ್ಟು ಧೈರ್ಯ ನಿನಗೆ ನಿನ್ನಂತಹ ಕೀಳು ಜಾತಿಯ ಹೆಣ್ಣನ್ನು ಮನೆಗೆ ಸೇರಿಸಿಕೊಂಡರೆ ನಮ್ಮ ಮಾನಮಾರ್ಯಾದೆ ಹಾಳಾಗುತ್ತೇಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಬಳಿಕ ಮಹೇಶ್ ಹಾಗೂ ಮಹಿಳೆ ಇಬ್ಬರೂ 8ನೇ ಮೈಲಿಯ ಸಪ್ತಗಿರಿ ಆಸ್ಪತ್ರೆ ಕಿರ್ಲೋಸ್ಕರ್ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿ ಕೆಲ ದಿನಗಳ ಕಾಲ ಸಂಸಾರ ನಡೆಸಿದ್ದಾರೆ. ಕೊನೆಗೆ ಮಹೇಶ್ ಮನೆ ಬರುವುದನ್ನೇ ನಿಲ್ಲಿಸಿದ್ದು ಮತ್ತೊಂದು ಮದುವೆಯಾಗಿರುವುದು ಪತ್ತೆಯಾಗಿದೆ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಿನ್ನಂತಹ ಕೀಳು ಜಾತಿಯವಳ ಜೊತೆ ನಾನು ಮದುವೆಯಾದರೆ ನಾನು ಹಾಳಾಗಿ ಹೋಗುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನನ್ನು ನೆಲಕ್ಕೆ ತಳ್ಳಿ, ಕಾಲು ಕೈಗಳಿಂದ ಹಾಗೂ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ನಾನು 7 ತಿಂಗಳ ಗರ್ಭಿಣಿ ಎಂದು ಗೊತ್ತಿದ್ದರೂ ಯಾವುದೇ ಕರುಣೆ ತೋರಿಸದೇ ಕಾಲಿನಿಂದ ತುಳಿದಿದ್ದಾರೆ. ಮಹೇಶ್ ಮೋಸ ಮತ್ತು ವಂಚನೆಯಿಂದ ನನ್ನನ್ನು ನಂಬಿಸಿ ದೈಹಿಕವಾಗಿ ನನ್ನನ್ನು ಬಳಸಿಕೊಂಡು ಆತ್ಯಾಚಾರವೆಸಗಿ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ಮಾಡಿದ್ದಾನೆ ಎಂದು ನೊಂದ ಮಹಿಳೆ ದೂರು ದಾಖಲಿಸಿದ್ದಾರೆ. ಕಲಂ 406, 417, 420, 323, 376, 504, 506 r/w 34 IPC and 3 cl (1) (r)(s)(w)(i)(ii) and 3 cl 2(v-a) sc/st Act De ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ