ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಭುಗಿಲೆದ್ದ ಭಿನ್ನಮತ: ಹಾಲಿ ಶಾಸಕ ಟಿ.ವೆಂಕಟರಮಣಯ್ಯಗೆ ಟಿಕೆಟ್ ನೀಡದಂತೆ ಕೈ ಮುಖಂಡರ ಒತ್ತಾಯ
ದೊಡ್ಡಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಹಾಲಿ ಶಾಸಕ ಟಿ.ವೆಂಕಟರಮಣಯ್ಯಗೆ ಟಿಕೆಟ್ ನೀಡದಂತೆ ಕೆಲ ‘ಕೈ’ ಮುಖಂಡರು ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ: ಹಾಲಿ ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ(T Venkataramanaiah) ವಿರುದ್ಧ ಸ್ವ ಪಕ್ಷದವರೆ ಗರಂ ಆಗಿದ್ದು ಈ ಭಾರಿ ಶಾಸಕ ಟಿ.ವೆಂಕಟರಮಣಯ್ಯ ಗೆ ಕ್ಷೇತ್ರದಿಂದ ಕಾಂಗ್ರೆಸ್(Congress) ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಬಲಿಗರ ಜೊತೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ರಂಗರಾಜು ಮತ್ತು ಪ್ರಕಾಶ್ ನೇತೃತ್ವದ ತಂಡ ಪತ್ರಿಕಾಗೋಷ್ಠಿ ನಡೆಸಿ ಹಾಲಿ ಶಾಸಕ ವೆಂಕಟರಮಣಯ್ಯ ವಿರುದ್ದ ಕಿಡಿಕಾಡಿದ್ದಾರೆ. ಕಳೆದ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ವೆಂಕಟರಮಣಯ್ಯ ಹಿರಿಯ ಕಾಂಗ್ರೆಸ್ ಮುಖಂಡರನ್ನ ಕಡೆಗಣಿಸಿ ಕ್ಷೇತ್ರದಲ್ಲಿ ಕಾರ್ಯಕರ್ತರು ಮುಖಂಡರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದ್ದಾರೆ. ಜೊತೆಗೆ ಈ ಭಾರಿ ಕಾಂಗ್ರೆಸ್ ಟಿಕೆಟ್ ವೆಂಕಟರಮಣಯ್ಯಗೆ ನೀಡಿದ್ರೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ ಅಂತ ಸರ್ವೆ ವರದಿಗಳು ಬಂದಿದ್ದು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಅಂತ ಮನವಿ ಮಾಡಿದ್ದಾರೆ.
ವೆಂಕಟರಮಣಯ್ಯ ಟಿಕೆಟ್ ನೀಡಿದಲ್ಲಿ ಸೋಲಿಸಲು ರಣತಂತ್ರ
ಹೈಕಮಾಂಡ್ ಸ್ಥಳೀಯ ಮುಖಂಡರನ್ನ ಕಡೆಗಣಿಸಿ ವೆಂಕಟರಮಣಯ್ಯ ಟಿಕೆಟ್ ನೀಡಿದಲ್ಲಿ ಅವರ ವಿರುದ್ಧ ನಾವು ಪಣತೊಟ್ಟು ವೆಂಕಟರಮಣಯ್ಯನನ್ನ ಸೋಲಿಸಲುಬೇಕಾದ ರಣತಂತ್ರ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವೆಂಕಟರಮಣಯ್ಯ ವಿರುದ್ದ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ನಾವು ಬೆಂಬಲ ನೀಡಲಿದ್ದು ಅದಕ್ಕೆಲ್ಲ ಅವಕಾಶ ನೀಡದೆ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಅಥವಾ ಬೇರೆಯಾರಿಗಾದ್ರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಬಿರುಸಿನ ಪ್ರಚಾರ ಮಾಡುತ್ತಿದ್ದ ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ವೆಂಕಟಸ್ವಾಮಿಗೆ ಹೃದಯಾಘಾತ
ಸಿದ್ದರಾಮಯ್ಯ ಬಂದ್ರೆ ಗೆಲುವು ಖಚಿತ
ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೆ ಕ್ಷೇತ್ರದ ಹುಡುಕಾಟದಲ್ಲಿದ್ದು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಈ ಭಾರಿ ನಮ್ಮ ಕ್ಷೇತ್ರದಿಂದ ಸ್ವರ್ದಿಸಿದ್ರೆ ಅವರ ಗೆಲುವು ಕಟ್ಟಿಟ್ಟಬುತ್ತಿ. ಅವರು ಬರಲಿಲ್ಲ ಅಂದ್ರೆ ನಾವೆ ಅವರ ಪರ ಪ್ರಚಾರ ಮಾಡಿ ಅವರನ್ನ ಗೆಲ್ಲಿಸುತ್ತೇವೆ. ಸಿದ್ದರಾಮಯ್ಯ ಅವರು ದೊಡ್ಡಬಳ್ಳಾಪುರದಿಂದ ಸ್ವರ್ದೆ ಮಾಡಲಿ ಅಂತ ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:14 pm, Wed, 22 March 23