ದೇವನಹಳ್ಳಿ ಏರ್ಪೋರ್ಟ್ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ವರ್ಷದಿಂದ ಕುಂಟುತ್ತಾ ಸಾಗಿದೆ, ಸಚಿವ ಮುನಿಯಪ್ಪ ಏನಂತಾರೆ?

ದೇವನಹಳ್ಳಿ ಏರ್ಪೋಟ್ ಪಕ್ಕದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದರೂ ಅಧಿಕಾರಿಗಳು ವರ್ಷದಿಂದ ಒಂದು ರಸ್ತೆಯನ್ನೂ ಮಾಡಿಸದಿರುವುದು ದುರಂತವೇ ಸರಿ. ಇನ್ನಾದ್ರು ಸಚಿವ ಕೆಹೆಚ್ ಮುನಿಯಪ್ಪ ಅಥವಾ ಜಿಲ್ಲಾಡಳಿತ ಇತ್ತ ಗಮ‌ನಹರಿಸಬೇಕಿದೆ.

ದೇವನಹಳ್ಳಿ ಏರ್ಪೋರ್ಟ್ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ವರ್ಷದಿಂದ ಕುಂಟುತ್ತಾ ಸಾಗಿದೆ, ಸಚಿವ ಮುನಿಯಪ್ಪ ಏನಂತಾರೆ?
KIAL ಏರ್ಪೋರ್ಟ್ ಪಕ್ಕ ಸರ್ಕಾರಿ ಆಸ್ಪತ್ರೆ ನಿರ್ಮಾಣ ಕುಂಟುತ್ತಾ ಸಾಗಿದೆ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Dec 05, 2023 | 5:57 PM

ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರುವ ವಿಮಾನಗಳ ಕೆಳಗೆ (KIAL) ಆಯಕಟ್ಟಿನ ಜಾಗದಲ್ಲಿರುವ ಊರು. ಅಲ್ಲಿ ಇತ್ತೀಚೆಗಷ್ಟೆ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಹೈಟೆಕ್ ಸರ್ಕಾರಿ ಆಸ್ಪತ್ರೆ ಇದೆ. ಹೀಗಾಗಿ ಹೊಸ ಆಸ್ಪತ್ರೆ (government hospital) ಹೈಟೆಕ್ ಸೌಲಭ್ಯಗಳಿದೆ ಅಂತ ನಿತ್ಯ ನೂರಾರು ಜನ ಆ ಆಸ್ಪತ್ರೆಗೆ‌ ಬರ್ತಿದ್ದಾರೆ. ಆದ್ರೆ ಈ ರೀತಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಒಳಗೆ‌‌ ಹೋಗುವುದೆ ಹರಸಾಹಸವಾಗಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ‌ ನೋಡಿ.

ನೊಡೋಕ್ಕೆ ಒಳಗೆ‌ ಹೊರಗೆ ಆಸ್ಪತ್ರೆ ಹೈಟೆಕ್ ಆಗಿದೆ ಮೂಲ ಸೌಕರ್ಯದ ಜೊತೆಗೆ ವೈದ್ಯರು ಇದ್ದಾರೆ ಅಂತ ನೂರಾರು ಜನ ಆಸ್ಪತ್ರೆಗೆ ಚಿಕಿತ್ಸೆ ಪಡೆಯೋಕ್ಕೂ ಬರುತ್ತಾರೆ. ಆದ್ರೆ ಸುಸಜ್ಜಿತ ಹೈಟೆಕ್ ಕಟ್ಟಡ, ವೈದ್ಯರು ಎಲ್ಲರೂ ಇದ್ದರೂ ಆಸ್ಪತ್ರೆಗೆ ಬಂದ್ರೆ ರೋಗ ಉಚಿತ ಅನ್ನೂ ಕತೆಯಾಗಿದೆ ಈ ಆಸ್ಪತ್ರೆಯದ್ದು. ಆಸ್ಪತ್ರೆಯ ಒಳಗಡೆಗೆ ಆ್ಯಂಬುಲೆನ್ಸ್ ನಲ್ಲಿ ಬರೋದಕ್ಕೂ ರೋಗಿಗಳು ಪರದಾಡ್ತಿದ್ದಾರೆ.

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ ಕೆಂಪೇಗೌಡ ಏರ್ಪೋಟ್ (Devanahalli Airport) ಪಕ್ಕದಲ್ಲೆ ಇರೋ‌‌ ಕಾರಣ ಸರ್ಕಾರ ಕೋಟಿ ಕೋಟಿ ಹಣ ಸುರಿದು ಹೈಟೆಕ್ ತಾಯಿ, ಮಗು ಮತ್ತು ಹೊರ ರೋಗಿಗಳ ಆಸ್ವತ್ರೆಯನ್ನ ನಿರ್ಮಾಣ ಮಾಡಿದೆ. ಜೊತೆಗೆ ಆಸ್ಪತ್ರೆ ಒಳಗಡೆ ಬರೋದಕ್ಕೆ ಸಮರ್ಪಕ ರಸ್ತೆಯಿಲ್ಲ ಅಂತ ಕಳೆದೊಂದು ವರ್ಷದಿಂದೆ ಲಕ್ಷ ಲಕ್ಷ ಅನುದಾನದ ಟೆಂಡರ್ ನೀಡಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೂ ಚಾಲನೆ ನೀಡಿತ್ತು.

ಆದ್ರೆ ಚರಂಡಿ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಮಹಾನುಭಾವ ಕಳೆದ ಒಂದು ವರ್ಷದಿಂದ ಸಣ್ಣ ಚರಂಡಿ ಹಾಗೂ ರಸ್ತೆ ಕಾಮಗಾರಿಯನ್ನ ಮುಗಿಸಿಲ್ಲ. ಜೊತೆಗೆ ರಸ್ತೆ ಅಕ್ಕ‌ಪಕ್ಕ ಚರಂಡಿ ಮಾಡಿ ಮಣ್ಣು ಮತ್ತು ಜಲ್ಲಿಯನ್ನ ರಸ್ತೆಯಲ್ಲೆ ಗುಡ್ಡೆಗಳಾಗಿ ಹಾಕಿ ಬಿಟ್ಟು ಹೋಗಿದ್ದಾನೆ. ಹೀಗಾಗಿ ಆಸ್ವತ್ರೆ ಒಳಗಡೆ ಬರೋಕ್ಕೆ ಒಂದು ವಾಹನ ಬಂದ್ರೆ ಮತ್ತೊಂದು ವಾಹನ ಬರಲಾಗದ ಸ್ಥಿತಿ ಎದುರಾಗಿದೆ.

ಜೊತೆಗೆ ರೋಗಿಗಳನ್ನ ಕರೆತಂದ ವಾಹನಗಳು ಸಾಕಷ್ಟು ಪಾರ್ಕಿಂಗ್ ಜಾಗವಿದ್ರು ಒಳಗಡೆ ಹೋಗಲು ಚರಂಡಿ ಅಡ್ಡಲಾಗಿರುವ ಕಾರಣ ರಸ್ತೆಯಲ್ಲೆ ‌ನಿಲ್ಲಿಸುತ್ತಿದ್ದಾರೆ. ಹೀಗಾಗಿ ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸಂದರ್ಭದಲ್ಲಿ ರೋಗಿಗಳು ಆಸ್ವತ್ರೆ ಒಳಗಡೆ ಬರಲಾಗದೆ ಹೊರಗಡೆಯೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Also Read:   ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಳಪೆ ಆಹಾರ ಪೂರೈಕೆ: ಕ್ಯಾಂಟಿನ್ ಗೆ ಬಿಸಿ ಮುಟ್ಟಿಸಿ, ಆಕ್ರೋಶ

ಒಂದು ವರ್ಷದ ಹಿಂದೆ ಆರಂಭವಾದ ಕಾಮಗಾರಿ ಕುಂಟುತ್ತಾ ಆಮೆಗತಿಯಲ್ಲಿ ಸಾಗ್ತಿದ್ದು ಕಳೆದ ಎರಡು ತಿಂಗಳಿಂದ ನಿಂತಲ್ಲೆ ನಿಂತು ಬಿಟ್ಟಿದೆ. ಜೊತೆಗೆ ಕಾಮಗಾರಿಗೆ ಬಳಸುವ ಜೆಸಿಬಿ ಟ್ಯಾಕ್ಟರ್ ಎಂ ಸ್ಯಾಂಡ್ ಮತ್ತು ಜಲ್ಲಿಯನ್ನ ಆಸ್ವತ್ರೆ ಮುಂಭಾಗದಲ್ಲೆ ಹಾಕಿದ್ದು ಗಾಳಿ ಬಂದ್ರೆ ಧೂಳೆಲ್ಲ ಆಸ್ಪತ್ರೆ ಒಳಗಡೆ ಹೋಗ್ತಿದೆ.

ಅಲ್ಲದೆ ಇದರಿಂದ ರೋಗಿಗಳು ಉಸಿರಾಟದ ತೊಂದರೆ ಪಡುತ್ತಿದ್ದಾರೆ. ಗುತ್ತಿಗೆದಾರನ ಬಳಿ ಈ ಬಗ್ಗೆ ಕೇಳಲು ಹೋಗಿದ್ದ ವೈದ್ಯರ ಮೇಲೆಯೇ ದಬ್ಬಾಳಿಕೆ ಮಾಡಡಿದ್ದಾನಂತೆ. ಜೊತೆಗೆ ರಸ್ತೆ ಕಾಮಗಾರಿ ಬಗ್ಗೆ ಡಿಹೆಚ್ಒ ರನ್ನ ಕೇಳಿದ್ರೆ ನನ್ನ ಗಮನಕ್ಕೆ ಬಂದಿಲ್ಲ ಪರಿಶೀಲನೆ ಮಾಡ್ತೀನಿ ಅಂತಿದ್ದಾರೆ. ಇನ್ನೂ ಗುತ್ತಿಗೆದಾರ ಮೂರ್ತಿ ಎಂಬುವವನನ್ನ ಸಂಪರ್ಕಿಸಿದ್ರೆ ಕೂಲಿಯಾಳುಗಳು ಸಿಗ್ತಿಲ್ಲ ಸಿಕ್ಕಾಗ ಮಾಡ್ತೀನಿ ನೀವ್ಯಾರು ಕೇಳೋಕ್ಕೆ ಅಂತಿದ್ದಾನೆ!

ಒಟ್ಟಾರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದರೂ ಅಧಿಕಾರಿಗಳು ಕಳೆದೊಂದು ವರ್ಷದಿಂದ ಒಂದು ರಸ್ತೆಯನ್ನೂ ಮಾಡಿಸದಿರುವುದು ನಿಜಕ್ಕೂ ದುರಂತ. ಇನ್ನಾದ್ರು ಸಚಿವ ಕೆಹೆಚ್ ಮುನಿಯಪ್ಪ ಅಥವಾ ಜಿಲ್ಲಾಡಳಿತ ಇತ್ತ ಗಮ‌ನಹರಿಸಬೇಕಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?