Sign In

By signing in or creating an account, you agree with Associated Broadcasting Company's Terms & Conditions and Privacy Policy.

KIAL ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಳಪೆ ಆಹಾರ ಪೂರೈಕೆ: ಕ್ಯಾಂಟಿನ್ ಗೆ ಬಿಸಿ ಮುಟ್ಟಿಸಿ, ಆಕ್ರೋಶ

ಪ್ರತಿದಿನ ಕಳಪೆ ಆಹಾರ ತಿನ್ನುತ್ತಿದ್ದ ಟ್ಯಾಕ್ಸಿ ಚಾಲಕರು ಈ ಬಗ್ಗೆ ಫುಡ್ ಸೆಫ್ಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜ ಆಗಿಲ್ಲವಂತೆ. ಹೀಗಾಗಿ ಇಂದು ಕಳಪೆ ಇಡ್ಲಿ, ಚಟ್ನಿ ತಿಂದ ಚಾಲಕರು ರೊಚ್ಚಿಗೆದ್ದು ಕ್ಯಾಂಟಿನ್ಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಕ್ಯಾಂಟೀನ್​ ಟೆಂಡರ್ ರದ್ದು ಮಾಡಿ ಉತ್ತಮ ಆಹಾರ ನೀಡೋರಿಗೆ ಟೆಂಡರ್ ನೀಡುವಂತೆ ಏರ್ಪೊಟ್ ಅಧಿಕಾರಿಗಳಿಗೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.

KIAL ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಳಪೆ ಆಹಾರ ಪೂರೈಕೆ: ಕ್ಯಾಂಟಿನ್ ಗೆ ಬಿಸಿ ಮುಟ್ಟಿಸಿ, ಆಕ್ರೋಶ
ಕೆಂಪೇಗೌಡ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಳಪೆ ಆಹಾರ ಪೂರೈಕೆ: ಕ್ಯಾಂಟಿನ್ ಗೆ ಬಿಸಿ ಮುಟ್ಟಿಸಿ, ಆಕ್ರೋಶ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Nov 23, 2023 | 11:04 AM

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಟ್ಯಾಕ್ಸಿಗಳು ಸಂಚರಿಸುತ್ತವೆ. ಇದೇ ಟ್ಯಾಕ್ಸಿಗಳು ನಿಲ್ಲಿಸುವ ಪಾರ್ಕಿಂಗ್ ಏರಿಯಾದ ಕ್ಯಾಂಟಿನ್ ನಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಿರೋ ಆರೋಪ ಕೇಳಿ ಬಂದಿದೆ. ಕಳಪೆ ಆಹಾರ ನೀಡುತ್ತಿರುವ ಆರೋಪದ ಹಿನ್ನಲೆ ಟ್ಯಾಕ್ಸಿ ಚಾಲಕರು (KIAL taxi Drivers protest) ಕ್ಯಾಂಟಿನ್ (canteen) ಗೆ ನುಗ್ಗಿ ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಆಹಾರ (Food) ನೀಡ್ತಿದ್ದಾರೆ ಅಂತಾ ಕ್ಯಾಂಟಿನ್ ಗೆ ಮುತ್ತಿಗೆ ಹಾಕಿರೋ ನೂರಾರು ಟ್ಯಾಕ್ಸಿ ಚಾಲಕರು…. ಕ್ಯಾಂಟಿನ್ ನಲ್ಲಿ ತಯಾರಾಗಿದ್ದ ತಿಂಡಿಗಳನ್ನ ಹೊರಗಡೆ ತಂದಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿರೋ ಡ್ರೈವರ್ ಗಳು.. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ 7 ಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು. ಹೌದು ಅಂದಹಾಗೆ ಈ ದೃಶ್ಯಗಳೆಲ್ಲ ನಿನ್ನೆ ಬುಧವಾರ ಕಂಡು ಬಂದಿದ್ದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ.

ಅಂದಹಾಗೆ KIAL ಏರ್ಪೊಟ್ ಪಿ 7 ಪಾರ್ಕಿಂಗ್ ನಲ್ಲಿದ್ದ ನೂರಾರು ಚಾಲಕರು ಕ್ಯಾಂಟಿನಲ್ಲಿ ಕಳಪೆ ಆಹಾರ ನೀಡ್ತಿದ್ದಾರೆ ಅಂತಾ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಸಾವಿರಾರು ಟ್ಯಾಕ್ಸಿ ಚಾಲಕರು ಇದೇ ಕ್ಯಾಂಟಿನ್ ನಲ್ಲಿ ಪ್ರತಿನಿತ್ಯ ತಿಂಡಿ ಊಟವನ್ನ ಮಾಡ್ತಿದ್ರು. ಆದರೆ ಇತ್ತಿಚೆಗೆ ಕ್ಯಾಂಟಿನ್ ನಲ್ಲಿ ರಾತ್ರಿ ಉಳಿದ ಅನ್ನವನ್ನೆ ಬಿಸಿ ಮಾಡಿ ಬೆಳಗ್ಗೆ ಕಳಪೆ ಆಹಾರವಾಗಿ ಕೊಡುತ್ತಿದ್ದಾರಂತೆ. ಹೀಗಾಗಿ ನಿನ್ನೆ ಕ್ಯಾಂಟಿನ್ ನ ಒಳಗಡೆ ಕಳಪೆ‌ ಆಹಾರ ಕೊಡ್ತಿದ್ದಾರೆ ಅಂತ ಟ್ಯಾಕ್ಸಿ ಚಾಲಕರು ಕ್ಯಾಂಟಿನ್ ಒಳಗಡೆ ನುಗ್ಗಿ ಕಳಪೆ ಆಹಾರವನ್ನ ಹೊರಗಡೆ ತಂದು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ಕಳಪೆ ಆಹಾರ ತಿನ್ನುತ್ತಿದ್ದ ಟ್ಯಾಕ್ಸಿ ಚಾಲಕರು ಈ ಬಗ್ಗೆ ಪುಡ್ ಸೆಪ್ಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜ ಆಗಿಲ್ಲವಂತೆ. ಹೀಗಾಗಿ ಇಂದು ಕಳಪೆ ಇಡ್ಲಿ, ಚಟ್ನಿ ತಿಂದ ಚಾಲಕರು ರೊಚ್ಚಿಗೆದ್ದು ಕ್ಯಾಂಟಿನ್ಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ ಇಂತಹ ಕಳಪೆ ಆಹಾರ ಕೊಡುವವವರ ಟೆಂಡರ್ ರದ್ದು ಮಾಡಿ ಉತ್ತಮ ಆಹಾರ ನೀಡೋರಿಗೆ ಟೆಂಡರ್ ನೀಡುವಂತೆ ಏರ್ಪೊಟ್ ಅಧಿಕಾರಿಗಳಿಗೆ ಟ್ಯಾಕ್ಸಿ ಚಾಲಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral: 4 ವಾರವಾದರೂ ಬಿಯರ್​​​​ನ ಅಮಲು ಬಿಡಲಿಲ್ಲ, ‘ಲಾಂಗ್ ಹ್ಯಾಂಗೋವರ್’ ದಾಖಲೆ ಮಾಡಿದ ವ್ಯಕ್ತಿ!

ಇನ್ನೂ ಏರ್ಪೋಟ್ ಕ್ಯಾಂಟಿನ್ ನಲ್ಲಿ ಇಷ್ಟೆಲ್ಲ ಹೈಡ್ರಾಮ ಆಗ್ತಿದ್ದಂತೆ ಎಚ್ಚೆತ್ ದೇವನಹಳ್ಳಿ ಪುಡ್ ಸೆಪ್ಟಿ ಇನ್ಸ್ಪೆಕ್ಟರ್ ಪ್ರವೀಣ್ ಕ್ಯಾಂಟಿನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆಗೆ ಕ್ಯಾಂಟಿನ್ ನಲ್ಲಿ ಬೆಳಗ್ಗೆಯಿಂದ ತಯಾರಾಗಿದ್ದ ತಿಂಡಿಗಳು ಹಾಗೂ ಆಹಾರ ಪದಾರ್ಥಗಳ ಸ್ಯಾಂಪಲ್ ಕಲೆಕ್ಟ್ ಮಾಡಿ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿದ್ರು.

ಒಟ್ಟಾರೆ ಕೆಂಪೇಗೌಡ ಏರ್ಪೊಟ್ ನ ಪಾರ್ಕಿಂಗ್ ನ ಕ್ಯಾಂಟಿನ್ ನಲ್ಲಿ ಚಾಲಕರಿಗೆ ಕಳಪೆ ಆಹಾರ ಪೂರೈಕೆ ಆರೋಪದ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಏರ್ಪೊಟ್ ಆಡಳಿತ ಮಂಡಳಿ ಅಧಿಕಾರಿಗಳು ಕ್ಯಾಂಟಿನ್ ಟೆಂಡರ್ ಪಡೆದಿದ್ದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ