ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; 4.9 ಕೆ.ಜಿ ಚಿನ್ನ ವಶ

ದುಬೈನಿಂದ ಬಂದ 18 ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೇಸ್ಟ್ ಹಾಗೂ ಕಚ್ಚಾ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; 4.9 ಕೆ.ಜಿ ಚಿನ್ನ ವಶ
ವಶಕ್ಕೆ ಪಡೆದ ಚಿನ್ನ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ (Kempegowda Airport,) ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 4.9 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದುಬೈನಿಂದ (Dubai) ಆಗಮಿಸಿದ್ದ 18 ಪ್ರಯಾಣಿಕರ ವಿಚಾರಣೆ ವೇಳೆ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ. ಪ್ರಯಾಣಿಕರು ಪೇಸ್ಟ್, ಕಚ್ಚಾ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದರು.

ದುಬೈನಿಂದ ಬಂದ 18 ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೇಸ್ಟ್ ಹಾಗೂ ಕಚ್ಚಾ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಸದ್ಯ 4.9 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದು 18 ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೂವರ ಬಂಧನ
ಮೈಸೂರು: ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮೂವರನ್ನು ಬಂಧಿಸಲಾಗಿದೆ. ಬನ್ನೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 59 ಗ್ರಾಂ ಚಿನ್ನಾಭರಣನ್ನು ವಶಕ್ಕೆ ಪಡೆದಿದ್ದಾರೆ. ಕೇತುಪುರ ಗ್ರಾಮದ ತಾಯಮ್ಮ ಮನೆಯಲ್ಲಿ ಕಳವು ನಡೆದಿತ್ತು. 36 ಗ್ರಾಂ ಸರ. 10 ಗ್ರಾಂ ಬ್ರಾಸ್ಲೈಟ್. 3 ಗ್ರಾಂ ಉಂಗುರ, 4 ಗ್ರಾಂ ಓಲೆ, 6 ಗ್ರಾಂ ಹ್ಯಾಂಗಿಂಗ್ ಸೇರಿ 59 ಗ್ರಾಂ ಚಿನ್ನ ಕಳವು ಮಾಡಿದ್ದರು. ಜೊತೆಗೆ 15 ಸಾವಿರ ನಗದು ಕಳ್ಳತನ ಮಾಡಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ

ರಾಯಚೂರಿನಲ್ಲಿ ಮಳೆಯಿಂದ ಮರಿಯನ್ನು ರಕ್ಷಿಸಲು ತಾಯಿ ನಾಯಿ ಏನು ಮಾಡಿತು ನೋಡಿ

ಅಬ್ಬಬ್ಬಾ! ದೊಡ್ಡ ಗಾತ್ರದ ಹಾವಿನ ಬಾಲ ಹಿಡಿದು ಎಳೆದಾಡುವ ಎರಡು ವರ್ಷದ ಮಗುವಿನ ವಿಡಿಯೋ ನೋಡಿ

Read Full Article

Click on your DTH Provider to Add TV9 Kannada