ಆ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೆ ನಿಂತಿದ್ದ ಲಾರಿಗೆ ಸುಮೋ ಡಿಕ್ಕಿ ಹೊಡೆದು 13 ಜನ ಜೀವ ಕಳೆದುಕೊಂಡಿದ್ರು. ಆದ್ರೆ ಇಷ್ಟಾದರೂ ಅಧಿಕಾರಿಗಳು, ಪೊಲೀಸರು ಮಾತ್ರ ಎಚ್ಚೆತ್ತುಕೊಳ್ಳದೆ ಹಾಗೆ ಗಾಢ ನಿದ್ದೆಯಲ್ಲಿದ್ದು ಇದೀಗ ಆ ಹೆದ್ದಾರಿಯಲ್ಲಿ (Highway) ಸಂಚಾರ ಮಾಡಬೇಕು ಅಂದ್ರೆ ಜೀವ ಕೈಯಲ್ಲಿಹಿಡಿದು ಸಂಚರಿಸುವಂತಹ ಸ್ಥಿತಿ ವಾಹನ ಸವಾರರಿಗೆ ನಿರ್ಮಾಣವಾಗಿದೆ. ಅದು ಯಾಕೆ ಅನ್ನೋದನ್ನ ನೀವೇ ನೋಡಿ. ಅಪಘಾತ, ಅಪಘಾತ, ಅಪಘಾತ… ವೀಕೆಂಡ್ ಬಂತು ಅಂದ್ರೆ ಸಾಕು ಈ ಹೆದ್ದಾರಿಯಲ್ಲಿ ಇತ್ತೀಚೆಗೆ ಕಾಣಿಸುವ ರಣಭೀಕರ ದೃಶ್ಯಗಳಿವು. ಅಂದಹಾಗೆ ಇಂತಹ ಡೆಡ್ಲಿ ಅಪಘಾತ ಹಾಗೂ ಅಮಾಯಕ ಜೀವಗಳ ಬಲಿಗೆ ಕಾರಣವಾಗಿರುವುದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಕೆಂಪೇಗೌಡ ಏರ್ಪೋಟ್ ಮೂಲಕ ಹಾದು ಹೋಗಿರುವ ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ (Devanahalli-Chikkaballapur Road Accidents).
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ಮಾರ್ಗವಾಗಿ ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ ಹಾದು ಹೋಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆದ್ರೆ ಸಾವಿರಾರು ವಾಹನಗಳು ಸಂಚಾರ ಮಾಡ್ತಿದ್ರು ಒಂದು ಬದಿಯ ರಸ್ತೆಯಲ್ಲಿ 2 ಪಥಗಳು ಮಾತ್ರ ಇರುವ ಕಾರಣ ವೀಕೆಂಡ್ ಬಂದ್ರೆ ಸಾಕು ಹೈವೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತೆ.
ಈ ಸಂಚಾರ ದಟ್ಟಣೆ ಜೊತೆಗೆ ಹೆದ್ದಾರಿ ಬದಿಯಲ್ಲೆ ಬೃಹತ್ ಸಿಮೆಂಟ್ ಹಾಗೂ ಸರಕು ಸಾಗಾಣಿಕೆ ಲಾರಿಗಳನ್ನು ನಿಲ್ಲಿಸುತ್ತಿದ್ದಾರೆ. ಆದರೆ ಹಿಂದಿನಿಂದ ಬರುವ ವಾಹನ ಸವಾರರು ಹೀಗೆ ನಿಂತ ಲಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗುತ್ತಿದ್ದಾರೆ. ಇದೇ ರೀತಿ ಮೊನ್ನೆಯಷ್ಟೆ ಚಿಕ್ಕಬಳ್ಳಾಪುರ ಬಳಿ 13 ಜನ ಹೆದ್ದಾರಿಯಲ್ಲಿ ಸಾವನ್ನಪಿದರೂ ಸಂಚಾರಿ ಪೊಲೀಸರಾಗಲಿ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯಾಗಲಿ ಎಚ್ಚೆತ್ತುಕೊಂಡಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಬಳಿ 13 ಜನ ಸಾವನ್ನಪಿದ ನಂತರ ಇದೇ ರಸ್ತೆಯಲ್ಲಿ ಕಳೆದ ಶುಕ್ರವಾರ ನಿಂತಿದ್ದ ಲಾರಿಗೆ ಬೈಕ್ ಮತ್ತು ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮಾರಣಕ್ಕೀಡಾಗಿದ್ರು. ಜೊತೆಗೆ ಕೆಲವೊಮ್ಮೆ ಅತಿವೇಗದಲ್ಲಿ ಬರುವ ಖಾಸಗಿ ಬಸ್ಗಳು ಸಹ ಒವರ್ ಟೇಕ್ ಮಾಡುವ ಭರದಲ್ಲಿ ಹೆದ್ದಾರಿ ಬದಿಯಲ್ಲಿನ ಲಾರಿಗಳಿಗೆ ಟಚ್ ಆಗಿ ಪಲ್ಟಿಯಾಗಿವೆ. ಹೀಗಾಗಿ ಈಗಾಗಲೆ ಕಳೆದ ಕೆಲ ತಿಂಗಳುಗಳಲ್ಲೆ 20 ಕ್ಕೂ ಅಧಿಕ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಂಡಿದ್ದು ಏರ್ಪೋಟ್ ಸಂಚಾರಿ ಪೊಲೀಸರು ಕ್ರಮ ಕೈಗೊಳ್ತಿಲ್ಲ ಅಂತ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ನೂರಾರು ರೂಪಾಯಿ ಟೋಲ್ ಶುಲ್ಕ ಕಟ್ಟಿ ವಾಹನ ಸವಾರರು ಹೆದ್ದಾರಿಗಿಳಿಯುತ್ತಿದ್ರು ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ನಿಲ್ಲುತ್ತಿರುವ ವಾಹನಗಳಿಂದ ಅಮಾಯಕರು ಜೀವ ಕಳೆದುಕೊಳ್ತಿದ್ದಾರೆ. ಇನ್ನಾದ್ರು ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಸಂಚಾರಿ ಪೊಲೀಸರು ಎಚ್ಚೆತ್ತು ಹೆದ್ದಾರಿ ಬದಿಯಲ್ಲಿನ ಲಾರಿಗಳನ್ನ ತೆರವುಗೊಳಿಸುವ ಮೂಲಕ ಅಪಘಾತಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ