ದೇವನಹಳ್ಳಿ, ಜನವರಿ 13: ಸರ್ಕಾರ ಇತ್ತೀಚೆಗೆ ಕಚೇರಿಗಳಲ್ಲಿ ಎಲ್ಲಾ ಕೆಲಸಗಳಿಗೂ ಡಿಜಿಟಲೀಕರಣ ಮಾಡಲು ಮುಂದಾಗಿದೆ. ಹೀಗಾಗಿ ಸರ್ಕಾರ ಪ್ರತಿಯೊಂದು ಕೆಲಸಕ್ಕೂ ಆಧಾರ್ (Aadhar)ಮತ್ತು ಥಂಬ್ (Thumb) ಇಂಪ್ರೆಷನ್ ಕಡ್ಡಾಯಗೊಳಿಸುತ್ತಿದೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಖದೀಮರು ಜನ ಥಂಬ್ ಕೊಟ್ಟು ಬರುವುದನ್ನೆ ಟಾರ್ಗೆಟ್ ಮಾಡ್ತಿದ್ದು, ಥಂಬ್ ಕೊಟ್ಟ ಕ್ಷಣ ಮಾತ್ರದಲ್ಲೇ ಖಾತೆಗೆ ಕನ್ನ ಹಾಕಿ ಹಣ ಎಗರಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದ ಗ್ರಾಮದ ನಾರಾಯಣಪ್ಪ ಎನ್ನುವವರು ಕಳೆದ ತಿಂಗಳು ತನ್ನ ಮಗಳಿಗೆ ಒಂದು ಗುಂಟೆ ಭೂಮಿಯನ್ನ ಕ್ರಯ ಮಾಡಿಕೊಟ್ಟಿದ್ದರಂತೆ. ಈ ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಕಾವೇರಿ ತಂತ್ರಾಂಶದಡಿ ಥಂಬ್ ಕೊಟ್ಟು ರಿಜಿಸ್ಟರ್ ಮಾಡಿಸಿದ್ದಾರೆ. ರಿಜಿಸ್ಟರ್ ಮಾಡಿಸಿದ ಮರುದಿನದಿಂದ ನಾರಾಯಣಪ್ಪ ಅವರ ಬ್ಯಾಂಕ್ ಖಾತೆಯಿಂದ 5 ಸಾವಿರ ರೂ. ಕಡಿತಗೊಂಡಿದೆ. ಹೀಗೆ ಐದು ದಿನಗಳ ಕಾಲ ಇದ್ದ 40 ಸಾವಿರ ಹಣವೂ ಖಾತೆಯಿಂದ ಮಾಯವಾಗಿದೆ. ಜೊತೆಗೆ ತನ್ನ ಮಗಳ ಖಾತೆಯಲ್ಲೂ ಐದು ಸಾವಿರ ಹಣ ಮಾಯವಾಗಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿ ದೂರನ್ನ ನೀಡಿದ್ದಾರೆ. ಆದ್ರೆ ಬ್ಯಾಂಕ್ನ ಮ್ಯಾನೇಜರ್ ಇದಕ್ಕೆ ತಲೆಯೇ ಕೆಡಿಸಿಕೊಳ್ಳದೆ ಇದೊಂದು ಸೈಬರ್ ಕ್ರೈಂ ಪ್ರಕರಣ ಎಂದು ಉಡಾಫೆ ಉತ್ತರ ಕೊಟ್ಟು ಕಳಿಸಿದ್ದಾರೆ ಎಂದು ಜನರರು ಮ್ಯಾನೇಜರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಆಧಾರ್ ಫಿಂಗರ್ ಪ್ರಿಂಟ್ಗೇ ಕನ್ನ, ಖಾತೆಯಿಂದ ಹಣ ವಿತ್ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ
ಸಬ್ ರಿಜಿಸ್ಟರ್ ಆಪೀಸ್, ರೇಷನ್ ಕಾರ್ಡ್ ತಾಲೂಕು ಕಛೇರಿ ಸೇರಿದಂತೆ ಸರ್ಕಾರಿ ಕೆಲಸಗಳ ಸಾಕಷ್ಟು ಕಡೆ ಸರ್ಕಾರಿ ಸೌಕರ್ಯಗಳಿಗೆ ಆಧಾರ್ ಮತ್ತು ಥಂಬ್ ನೀಡುವುದು ಸಹಜ. ಆದ್ರೆ ಇದೇ ರೀತಿ ನಾರಾಯಣಪ್ಪ ಸಹ ಇದೀಗ ಥಂಬ್ ನೀಡಿ ಬಂದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ರೈಲ್ವೆ ಇಲಾಖೆಯ ನಿವೃತ್ತ ನೌಕರ ಅಶ್ವಥಪ್ಪ ಎನ್ನುವವರು ಪೆನ್ಷನ್ ತೆಗೆದುಕೊಳ್ತಿದ್ದು ಬ್ಯಾಂಕ್ ಖಾತೆಗೆ ಬರುವ ಹಣದಲ್ಲಿ ಏಕಾಏಕಿ 36 ಸಾವಿರ ಹಣ ಕಟ್ ಆಗಿದೆ.
ಹಣ ಕಳೆದುಕೊಂಡ ಬ್ಯಾಂಕ್ ಖಾತೆದಾರರು ಈಗಾಗಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನಮ್ಮ ಹಣ ನಮಗೆ ವಾಪಸ್ ಬರಲು ಬ್ಯಾಂಕ್ನವರೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ