Devanahalli: ದೇವನಹಳ್ಳಿ ಬಳಿ ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿಗಳು, ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ

Land Encroachment: ಗ್ರಾಮ ಪಂಚಾಯಿತಿ ಖಾತೆಯನ್ನಿಟ್ಟುಕೊಂಡು ನಿವೇಶನ ಕಬಳಿಸಿದ್ದಾರೆ ಎಂದು ರೌಡಿಶೀಟರ್ ನಾರಾಯಣಸ್ವಾಮಿ ವಿರುದ್ಧ ದ್ಯಾವರಹಳ್ಳಿಯ 8 ಕುಟುಂಬದವರು ಆರೋಪ ಮಾಡಿದ್ದಾರೆ. ನಮ್ಮ ನಿವೇಶನ ಹಿಂದಿರುಗಿಸಿ ಅಥವಾ ವಿಷ ಕೊಡಿ ಎಂದು ನೊಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಜನರನ್ನು ಕಾಯುವ ಪೊಲೀಸ್​ ಠಾಣೆಗೆ ದೂರು ನೀಡಲು ಹೋದರೆ ಆರಕ್ಷಕ ಪೊಲೀಸರಿಂದಲೂ ದಬ್ಬಾಳಿಕೆ ನಡೆಯಿತು ಎಂಬ ಆರೋಪ ಬಂದಿದೆ.

Devanahalli: ದೇವನಹಳ್ಳಿ ಬಳಿ ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿಗಳು, ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ
ದೇವನಹಳ್ಳಿ: ನಕಲಿ ದಾಖಲೆಗಳ ಸೃಷ್ಟಿಸಿ ಭೂ ಕಬಳಿಕೆಗೆ ಯತ್ನ -ಪ್ರಭಾವಿ ಮಾಜಿ ರೌಡಿಶೀಟರ್ ವಿರುದ್ಧ ಗಂಭೀರ ಆರೋಪ
Updated By: ಸಾಧು ಶ್ರೀನಾಥ್​

Updated on: May 14, 2022 | 2:50 PM

ದೇವನಹಳ್ಳಿ: ದೇವನಹಳ್ಳಿ ಹೆಸರು ಹೇಳಿದರೆ ಸಾಕು ಅದು ವಿಶ್ವವಿಖ್ಯಾತ ಎನಿಸಿದೆ. ಅಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ಬಂದ ಮೇಲಂತೂ ದೇವನಹಳ್ಳಿ ಆಸುಪಾಸಿನ ಜಮೀನುಗಳು ಸೈಟುಗಳಾಗಿ ಪರಿವರ್ತನೆಗೊಂಡು ಅಲ್ಲಿನ ಕೃಷಿ ಜಮೀನಿಗೆ ಬಂಗಾರದಂತಹ ಬೆಲೆ ಬಂದಿದೆ. ದೇವನಹಳ್ಳಿ ಸುತ್ತಮುತ್ತಲ ಜಾಗ (Devanahalli Dyavarahalli ) ಹೀಗೆ ವಿಪರೀತ ಎನಿಸುವಷ್ಟು ರೇಟು ಪಡೆದಿದ್ದೇ ಭೂಗಳ್ಳರು, ರೌಡಿ ಪಟಾಲಂ, ಭೂಮಿಗೆ ಭೂಮಿಯನ್ನೇ ಸ್ವಾಹಾ ಮಾಡುವವರು ನಾಯಿಕೊಡಗಳಂತೆ ಇಲ್ಲಿಗೆ ಬಂದು ಟೆಂಟು ಹಾಕತೊಡಗಿದರು. ಅದರಲ್ಲಿ ನಿಜಕ್ಕೂ ನರಳಿದವರು ಇಲ್ಲಿನ ನೈಜ ರೈತಾಪಿ ಜನರು. ಅವರಿವರ ಕೈ-ಬಾಯಿಗೆ ಸಿಕ್ಕಿ ತಮ್ಮ ಅಮೂಲ್ಯ ಸ್ಥಿರಾಸ್ತಿಯನ್ನೂ ಕಳೆದುಕೊಂಡ ಮಂದಿ ಸುತ್ತಮುತ್ತಲ ಹಳ್ಳಿಗಳಲ್ಲಿ ಬೀದಿಬೀದಿಯಲ್ಲಿ ಸಿಗುತ್ತಾರೆ. ತಾಜಾ ಪ್ರಕರಣವೊಂದರಲ್ಲಿ (Land Encroachment) ಸಮೀಪದ ಗ್ರಾಮವೊಂದರ ಪ್ರಭಾವಿಗಳು ಮತ್ತು ರೌಡಿಶೀಟರ್ (Rowdy Sheeter) ವಿರುದ್ಧ ಇಂತಹುದೇ ಅಮಾಯಕರ ಜಾಗ ಕಬಳಿಸುವ ಯತ್ನ ನಡೆಸಿದ್ದಾನೆ ಎಂದು ನೊಂದ ರೈತಾಪಿ ಜನ ಗಂಭೀರ ಆರೋಪ ಮಾಡಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಕೆಗೆ ಯತ್ನ ಆರೋಪ ಕೇಳಿಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿಯಲ್ಲಿ ಅನೇಕ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಿಸುತ್ತಿವೆ. ಸ್ಥಳೀಯ ಗ್ರಾಮಸ್ಥರು ವಾಸವಿರುವ ಹಲವಾರು ಮನೆಗಳಿಗೇ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಪ್ರಭಾವಿಗಳು ಮತ್ತು ರೌಡಿಶೀಟರ್ ವಿರುದ್ಧ ಗ್ರಾಮಸ್ಥರು ಈ ಆರೋಪ ಮಾಡಿದ್ದಾರೆ.’

ಗ್ರಾಮ ಪಂಚಾಯಿತಿ ಖಾತೆಯನ್ನಿಟ್ಟುಕೊಂಡು ನಿವೇಶನ ಕಬಳಿಸಿದ್ದಾರೆ ಎಂದು ರೌಡಿಶೀಟರ್ ನಾರಾಯಣಸ್ವಾಮಿ ವಿರುದ್ಧ ದ್ಯಾವರಹಳ್ಳಿಯ 8 ಕುಟುಂಬದವರು ಆರೋಪ ಮಾಡಿದ್ದಾರೆ. ನಮ್ಮ ನಿವೇಶನ ಹಿಂದಿರುಗಿಸಿ ಅಥವಾ ವಿಷ ಕೊಡಿ ಎಂದು ನೊಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ನಮ್ಮ ಸೈಟ್​ ಬಗ್ಗೆ ಕೇಳಲು ಹೋದರೆ ಹಲ್ಲೆ ಮಾಡುತ್ತಾರೆಂದು ಸಂತ್ರಸ್ಥ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇನ್ನು ಜನರನ್ನು ಕಾಯುವ ಪೊಲೀಸ್​ ಠಾಣೆಗೆ ದೂರು ನೀಡಲು ಹೋದರೆ ಆರಕ್ಷಕ ಪೊಲೀಸರಿಂದಲೂ ದಬ್ಬಾಳಿಕೆ ನಡೆಯಿತು ಎಂಬ ಆರೋಪ ಬಂದಿದೆ. ವಿಶ್ವನಾಥಪುರ ಪೊಲೀಸರ ವಿರುದ್ಧ ದ್ಯಾವರಹಳ್ಳಿ ನಿವಾಸಿಗಳು ಈ ಆರೋಪ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Sat, 14 May 22