ದೇವನಹಳ್ಳಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಲಾಂಗ್ ಡ್ರೈವ್​​ ಹೊರಟ್ಟಿದ್ದ ಮೂವರು ಸ್ನೇಹಿತರು ಬಲಿ​​

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ದುರ್ಮರಣಕ್ಕೀಡಾಗಿದ್ದಾರೆ. ಹಿಟ್ ಆ್ಯಂಡ್​ ರನ್ ಶಂಕೆ ವ್ಯಕ್ತವಾಗಿದ್ದು, ಸದ್ಯ ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ದೇವನಹಳ್ಳಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಲಾಂಗ್ ಡ್ರೈವ್​​ ಹೊರಟ್ಟಿದ್ದ ಮೂವರು ಸ್ನೇಹಿತರು ಬಲಿ​​
ಭೀಕರ ಅಪಘಾತ
Edited By:

Updated on: Jan 17, 2026 | 6:45 PM

ದೇವನಹಳ್ಳಿ, ಜನವರಿ 17: ಅವರೆಲ್ಲಾ ಪಿಯು ವಿದ್ಯಾರ್ಥಿಗಳು. ಇಂದು ವೀಕೆಂಡ್ ಹಿನ್ನೆಲೆ ಬೈಕ್ ಏರಿ ಲಾಂಗ್ ಡ್ರೈವ್​ಗೆ ಹೊರಟ್ಟಿದ್ದರು. ಹೀಗೆ ಲಾಂಗ್ ಡ್ರೈವ್​​​ ಹೋದ ಮೂವರು ಸ್ನೇಹಿತರ ಪಾಲಿಗೆ ಅದು ಲಾಸ್ಟ್ ಡ್ರೈವ್​ ಆಗಿದ್ದು, ಭೀಕರ ಅಪಘಾತಕ್ಕೆ (Accident) ಸ್ಥಳದಲ್ಲೇ ಮೂವರು ದುರಂತ ಅಂತ್ಯವಾಗಿದ್ದಾರೆ (death). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದ ಅಗಲಕೋಟೆ ಬಳಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ನಡೆದದ್ದೇನು?

ಇಂದು ಬೆಳಗ್ಗೆ 11: 20ರ ಸಮಯ ಹೆದ್ದಾರಿಯಲ್ಲಿ ಟಿಪ್ಪರ್​ ಸೇರಿದಂತೆ ಬೈಕ್​ಗಳು ಸಹ ಎಂದಿನಂತೆ ಸಂಚರಿಸುತ್ತಿದ್ದವು. ಇದೇ ವೇಳೆ ಒಂದು ಬದಿಯಲ್ಲಿ ಹೋಗುತ್ತಿದ್ದ ಈ ಮೂವರು ಯುವಕರಿದ್ದ ಬೈಕ್​​ ಅತಿ ವೇಗದಲ್ಲಿ ಬಂದು ನೋಡ ನೋಡುತ್ತಿದ್ದಂತೆ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ನುಗ್ಗಿ, ನೇರವಾಗಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಮೂವರು ಯುವಕರ ದೇಹಗಳು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ: ನಡು ರಸ್ತೆಯಲ್ಲಿ ಒದ್ದಾಡಿದ ಮಕ್ಕಳು

ತೌಸೀಪ್, ಶ್ರೀನಿವಾಸ್ ಮತ್ತು ಮಣಿಕಂಠ ಮೃತರು. ಮೂಲತಃ ಯಲಹಂಕದ ಹುಣಸಮಾರನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಈ ಮೂರು ಜನ ಸ್ನೇಹಿತರು ಇಂದು ಬೆಳಗ್ಗೆ ವೀಕೆಂಡ್ ಅಂತ ಲಾಂಗ್ ಡ್ರೈವ್​​ಗೆ ಪ್ಲ್ಯಾನ್​ ಮಾಡಿ, ಅದರಂತೆ ಒಂದೇ ಬೈಕ್​ನಲ್ಲಿ ಹೊರಟಿದ್ದಾರೆ. ಹೊಸಕೋಟೆಯ ಕಂಬಳಿಪುರದ ಕಾಟೇರಮ್ಮ ದೇವಸ್ಥಾನಕ್ಕೆ ಹೋಗಿದ್ದ ಸ್ನೇಹಿತರು ವಾಪಸ್ ಯಲಹಂಕದತ್ತ ಮರಳುತ್ತಿದ್ದ ವೇಳೆ ದೇವನಹಳ್ಳಿ ಹೊರವಲಯದ ಬೂದಿಗೆರೆ ರಸ್ತೆಯ ಅಗಲಕೋಟೆ ಬಳಿ ರಸ್ತೆ ತಿರುವಿನಲ್ಲೂ ವೇಗವಾಗಿ ಬೈಕ್​​ ಓಡಿಸಿದ್ದಾರೆ. ಹೀಗಾಗಿ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಒಂದು ಬದಿಯ ರಸ್ತೆಯಿಂದ ಮತ್ತೊಂದು ಬದಿಯ ರಸ್ತೆ ಹಾರಿದ್ದು, ಈ ವೇಳೆ ಬರುತ್ತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿ ರಭಸಕ್ಕೆ ಹೆಲ್ಮೆಟ್ ಹಾಕದ ಕಾರಣ ಯುಕರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪಿದ್ದಾರೆ.

ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಿಯರು ಜಮಾಯಿಸಿ ಆಂಬುಲೆನ್ಸ್​ಗೆ ಕರೆ ಮಾಡಿದ ಒಂದು ಗಂಟೆವರೆಗೂ ಆಂಬುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ದೇವನಹಳ್ಳಿ ಬೂದಿಗೆರೆ ರಸ್ತೆಯ ತಿರುವುಗಳಲ್ಲಿ ಸ್ಪೀಡ್ ಬ್ರೇಕರ್ ಹಾಕದ ಕಾರಣ ವಾಹನ ಸವಾರರು ಅತಿವೇಗದಲ್ಲಿ ಬಂದು ಅಪಘಾತಗಳಿಗೆ ಬಲಿಯಾಗ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಹಿಟ್ ಆ್ಯಂಡ್​ ರನ್ ಶಂಕೆ

ಮೆಲ್ನೋಟಕ್ಕೆ ಬೈಕ್ ಸವಾರ ಅತಿವೇಗ ಹಾಗೂ ಹೆಲ್ಮೆಟ್ ಹಾಕದಿರುವುದು ಮೂವರ ದುರಂತ ಅಂತ್ಯಕ್ಕೆ ಕಾರಣವಾಗಿದೆ ಅಂತ ಪೊಲೀಸರು ಶಂಕಿಸಿದ್ದಾರೆ. ಹಿಟ್ ಆ್ಯಂಡ್​ ರನ್ ಮಾಡಿ ಎಸ್ಕೇಪ್ ಆಗಿರುವ ಟಿಪ್ಪರ್ ಪತ್ತೆಗೂ ಪೊಲೀಸರು ಮುಂದಾಗಿದ್ದು, ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.