ತುಳಸಿಕಟ್ಟೆ ವಿಚಾರವಾಗಿ ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ ಧರ್ಮ ದಂಗಲ್

ಜಾತ್ರೆ, ಶಾಲಾ-ಕಾಲೇಜು ಆಯ್ತು ಇದೀಗ ಬೆಂಗಳೂರಿನ ಎರಡನೇ ಅತೀದೊಡ್ಡ ಅಪಾರ್ಟ್ಮೆಂಟ್​ನಲ್ಲಿ ಧರ್ಮ ದಂಗಲ್ ಕೇಳಿಬಂದಿದೆ. ಯಲಹಂಕ(Yalahanka) ತಾಲೂಕಿನ ಮಾರಸಂದ್ರದ ಪ್ರಾವಿಡೆಂಟ್ ವೆಲ್ವರ್ಥ್ ಅಪಾರ್ಟ್ಮೆಂಟ್​ನಲ್ಲಿ ತುಳಸಿಕಟ್ಟೆ ವಿಚಾರವಾಗಿ ಎರಡು ಧರ್ಮಗಳ ನಡುವೆ ಗದ್ದಲ ಉಂಟಾಗಿದೆ.

ತುಳಸಿಕಟ್ಟೆ ವಿಚಾರವಾಗಿ ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ ಧರ್ಮ ದಂಗಲ್
ಪ್ರಾವಿಡೆಂಟ್ ವೆಲ್ವರ್ಥ್ ಅಪಾರ್ಟ್ಮೆಂಟ್​ನಲ್ಲಿ ತುಳಸಿಕಟ್ಟೆ ವಿಚಾರವಾಗಿ ಎರಡು ಧರ್ಮಗಳ ನಡುವೆ ಗದ್ದಲ
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 4:28 PM

ಬೆಂಗಳೂರು, ಜೂ.27: ಬೆಂಗಳೂರಿನ ಯಲಹಂಕ(Yalahanka) ತಾಲೂಕಿನ ಮಾರಸಂದ್ರದ ಪ್ರಾವಿಡೆಂಟ್ ವೆಲ್ವರ್ಥ್ ಅಪಾರ್ಟ್ಮೆಂಟ್​ನಲ್ಲಿ ತುಳಸಿಕಟ್ಟೆ ವಿಚಾರವಾಗಿ ಎರಡು ಧರ್ಮಗಳ ನಡುವೆ ಗದ್ದಲ ಉಂಟಾಗಿದೆ. ಹೌದು, ಇಲ್ಲಿ ತುಳಸಿಕಟ್ಟೆ ಇದೆ. ನಮಗೂ ಸಾಮೂಹಿಕ ಪ್ರಾರ್ಥನೆಗೆ ಮಸೀದಿ‌ ಕಟ್ಟಲು ಸ್ಥಳ ನೀಡಿ ಎಂದು ಮನವಿ ಮಾಡಿದ್ದಾರೆ. ಇತ್ತ ಕ್ರಿಶ್ಚಿಯನ್ ಸೇರಿ ವಿವಿಧ ಧರ್ಮದ ವಾಸಿಗಳು ತಮ್ಮ ಮಂದಿರಗಳನ್ನೂ ಕಟ್ಟಲು ಅವಕಾಶ ನೀಡುವಂತೆ ಕೋರಿದ್ದಾರೆ. ಇದಕ್ಕೆ ಅವಕಾಶ ನೀಡದಿದ್ರೆ ತುಳಸಿ ಕಟ್ಟೆಯನ್ನೂ ತೆರವು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ತುಳಸಿ ಕಟ್ಟೆ ತೆರವಿಗೆ ಪಟ್ಟು

ಮೊದಲಿನಿಂದಲೂ ಅಪಾರ್ಟ್ಮಂಟ್​ನಲ್ಲಿ ಅರಳಿಮರ, ಬೇವು, ಬಿಲ್ವಪತ್ರೆ ಮರ ಇದೆ. ಸ್ವಚ್ಚತೆ ಇಲ್ಲ ಎಂದು ತುಳಸಿ ಕಟ್ಟೆ ಇಟ್ಟಿರುವುದಾಗಿ ಅಪಾರ್ಟ್ಮೆಂಟ್ ವಾಸಿಗಳು ವಾದಿಸಿದ್ದಾರೆ. ಇನ್ನು  ಶುಕ್ರವಾರ, ಮಂಗಳವಾರ ಸಂಜೆ ವೇಳೆಯಲ್ಲಿ ಹೆಚ್ಚಾಗಿ ಮಹಿಳೆಯರು ತುಳಸಿ ಕಟ್ಟೆ ಪೂಜೆ ಮಾಡುತ್ತಾರೆ. ಈ ವೇಳೆ ಓಡಾಡಲೂ ಕಷ್ಟವಾಗುತ್ತಿದೆ ಎಂದು ಅನ್ಯ ಧರ್ಮದವರು ದೂರು ನೀಡಿದ್ದಾರೆ. ಜೊತೆಗೆ ಎಲ್ಲಾ ಧರ್ಮದವರೂ ತಮ್ಮ ತಮ್ಮ‌ ಮಂದಿರ ಕಟ್ಟಬೇಕು ಎಂದು ಮನವಿ ಸಲ್ಲಿಸಿದ್ದಾರೆ. ತುಳಸಿ ಕಟ್ಟೆಯನ್ನು ತೆರವು ಮಾಡಿ. ಇಲ್ಲ, ಎಲ್ಲಾ ಧರ್ಮಕ್ಕೂ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ. ತುಳಸಿಕಟ್ಟೆಯಿಂದ ಯಾವುದೇ ತೊಂದರೆ ಇಲ್ಲ, ನಾವು ತೆರವುಗೊಳಿಸಲ್ಲ ಎಂದು ಮತ್ತೊಂದು ಗುಂಪು ಪಟ್ಟು ಹಿಡಿದಿದೆ. ಈ ಘಟನೆ ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯ ಪ್ರಾವಿಡೆಂಟ್ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ.

ಇದನ್ನೂ ಓದಿ:ಕೋಲಾರ: ಮಸೀದಿ ಎದುರು ಡಿಜೆ ಸೌಂಡ್ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ತಡೆದು ಗಲಾಟೆ

ಇನ್ನು ತುಳಸಿ ಕಟ್ಟೆ, ಮಸೀದಿ, ಗುರುದ್ವಾರದ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತು ಪರಿಶೀಲಿಸಲು ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಒಂದು ತಂಡ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲಿದೆ. ಬಹುಸಂಖ್ಯಾತ ಹಿಂದೂ ನಿವಾಸಿಗಳು ಶಾಂತಿಯುತವಾಗಿ ನಡೆಸಿಕೊಂಡು ಹೋಗುತ್ತಿದ್ದ ತುಳಸಿ ಪೂಜೆಗೆ ಈ ಧರ್ಮ ದಂಗಲ್‌ನಿಂದಾಗಿ ಅಡ್ಡಿಯಾಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ಷೇಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Thu, 27 June 24

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us