ಜ್ವರ ಅಂತ ಆಸ್ಪತ್ರೆ ಸೇರಿದ್ದ ಡಿಪ್ಲೋಮಾ ವಿದ್ಯಾರ್ಥಿ ಸಾವು: 20 ದಿನ ಟ್ರೀಟ್ಮೆಂಟ್-9 ಲಕ್ಷ ಬಿಲ್, ಆಸ್ಪತ್ರೆ ವಿರುದ್ದ ಪೋಷಕರ ಆಕ್ರೋಶ
ಯುವಕನ ಸಾವಿಗೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಎರಡೂ ಕಡೆಯಿಂದಲೂ ಹೇಳಿಕೆ ಪಡೆದಕೊಂಡಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಸ್ಪಂದನ ಆಸ್ಪತ್ರೆಯಲ್ಲಿ ಜರುಗುತ್ತಿದ್ದು ಆರೊಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಅನ್ನೋದು ಸಾರ್ವಜನನಿಕರ ಆಗ್ರಹವಾಗಿದೆ.
ಆ ಹುಡುಗ ಆದಿಚುಂಚನಗಿರಿ ಮಠದಲ್ಲಿ ಡಿಪ್ಲೋಮೊ (Diploma) ಓದುತ್ತಿದ್ದ, ತಂದೆ ತಾಯಿಗೆ ಮಾತಾಡಿಸಿಕೊಂಡು ಬರೋಣ ಅಂತ ಸರ್ಜಾಪುರಕ್ಕೆ ಬಂದಿದ್ದ. ಇದಕ್ಕಿದ್ದಂತೆ ಆತನಿಗೆ ಜ್ವರ (fever) ಕಾಣಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆಯವರೆಗೂ ಸ್ನೇಹಿತರ ಜತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದ ಆತ ಬೆಳಗಾಗೋದ್ರಲ್ಲಿ ಇಹಲೋಕ ತ್ಯಜಿಸಿದ್ದಾನೆ. ಈ ಸಾವಿಗೆ ವೈದ್ಯರೇ ಕಾರಣ (hospital negligence) ಅಂತ ಪೋಷಕರು ಆರೋಪ ಮಾಡಿದ್ದಾರೆ. ಪೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ದೀಪಕ್ .. ಆನೇಕಲ್ (anekal) ತಾಲ್ಲೂಕಿನ ಮುತ್ತಾನಲ್ಲೂರು ಸಮೀಪದ ಕೊಮ್ಮಸಂದ್ರ ಗ್ರಾಮದ ನಿವಾಸಿ. ಮೂರು ಜನ ಗಂಡು ಮಕ್ಕಳಲ್ಲಿ ಮೊದಲನೇ ಮಗ ಈತ. ಹಾಸನದ ಆದಿಚುಂಚನಗಿರಿ ಮಠದಲ್ಲಿ ಡಿಪ್ಲೋಮೊ ವ್ಯಾಸಂಗ (student) ಮಾಡ್ತಿದ್ದ. ಹಿರಿಯ ಮಗನ ಮೇಲೆ ಬಹಳಷ್ಟು ಆಸೆ ಆಕಾಂಕ್ಷೆಗಳ ಜೊತೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ಕುಟುಂಬದ ಮೇಲೆ ನಿನ್ನೆ ರಾತ್ರಿಯ ಸಾವಿನ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಕೆಲ ದಿನಗಳ ಹಿಂದೆ ಜ್ವರ, ಕೈಕಾಲು ನೋವಿನಿಂದಾಗಿ ಬಳಲುತ್ತಿದ್ದ ದೀಪಕ್ ಗೆ ಸರ್ಜಾಪುರ ಬಳಿಯ (sarjapura) ಸೋಂಪುರದ ಸ್ಪಂದನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದೀಪಕ್ ಗುಣಮುಖವಾಗಿ ಡಿಸ್ಚಾರ್ಜ್ ಆಗ್ತಾನೆ ಅಂದುಕೊಂಡಿದ್ರು, ಆದರೆ ಆಗಿದ್ದೇ ಬೇರೆ…
ಮೊನ್ನೆ ರಾತ್ರಿಯ ಸಂಜೆವರೆಗೂ ಗೆಳೆಯರಿಗೆ ವಿಡಿಯೋ ಕಾಲ್ ಮಾಡಿದ್ದ ದೀಪಕ್ ಇದಕ್ಕಿದ್ದಂತೆ ಅದ್ಹೇಗೆ ಈ ಲೋಕ ಬಿಟ್ಟು ಹೋದ? ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ. ಇದು ಸ್ಪಂದನಾ ಆಸ್ಪತ್ರೆ ಅಲ್ಲ ಬದಲಿಗೆ ಸ್ಮಶಾನ ಆಸ್ಪತ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಚಿಕ್ಕಪ್ಪ ಹರೀಶ್ ಮತ್ತು ಸ್ನೇಹಿತ ಹೇಮಂತ್.
ಡಿಸೆಂಬರ್ 23ರಂದು ಜ್ವರದ ಕಾರಣ ದೀಪಕ್ ಗೆ ಸ್ಪಂದನ ಆಸ್ಪತ್ರೆ ಯಲ್ಲಿ ದಾಖಲು ಮಾಡಲಾಗಿತ್ತು. ದಾಖಲು ಮಾಡಿದ ಎರಡನೇ ದಿನವೇ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗ್ತಿತ್ತು. ತಮ್ಮ ಮಗನಿಗೆ ಅತ್ಯಂತ ದುಬಾರಿಯ ಇಂಜೆಕ್ಷನ್ ಗಳನ್ನು ತರಿಸಿ ಇಂಜೆಕ್ಟ್ ಮಾಡಿದ್ದಾರೆ. ಆದರೆ ಅವನ ಆರೋಗ್ಯ ಹೇಗಿದೆ? ಅನ್ನೋ ಸರಿಯಾದ ಮಾಹಿತಿಯೇ ನಮಗೆ ಕೊಟ್ಟಿಲ್ಲ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ದೀಪಕ್ ರಾತ್ರಿ ಒಂದು ಗಂಟೆಗೆ ತೀರಿಕೊಂಡಿದ್ರೂ, ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಡೆತ್ ನೋಟ್ ಕೊಟ್ಟಿದ್ದಾರೆ. ದುಡ್ಡು ತಿನ್ನೋದಕ್ಕಾ ಹೀಗೆ ಮಾಡಿದ್ದು ಅಂತ ಪ್ರಶ್ನೆ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪಂದನ ಅಸ್ಪತ್ರೆ ವೈದ್ಯರು, ದೀಪಕ್ ಅರೋಗ್ಯಕ್ಕೆ ಸಂಬಂಧಿಸಿದಂತೆ ತಂದೆ ತಾಯಿಗೆ ಪ್ರತಿಯೊಂದು ವಿಚಾರ ಮುಟ್ಟಿಸಿದ್ದೇವೆ. ದೀಪಕ್ ಬಹುಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದು ಅವರಲ್ಲಿ ರೋಗ ನಿರೋಧಕ ಶಕ್ತಿ ಇರಲಿಲ್ಲ ಅಂತ ಹೇಳಿದ್ದಾರೆ.
ಯುವಕನ ಸಾವಿಗೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಎರಡೂ ಕಡೆಯಿಂದಲೂ ಹೇಳಿಕೆ ಪಡೆದಕೊಂಡಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಸ್ಪಂದನ ಆಸ್ಪತ್ರೆಯಲ್ಲಿ ಜರುಗುತ್ತಿದ್ದು ಆರೊಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಅನ್ನೋದು ಸಾರ್ವಜನನಿಕರ ಆಗ್ರಹವಾಗಿದೆ.
ವರದಿ: ಸೈಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್
Published On - 10:57 am, Fri, 13 January 23