ಹಾಲಿ,ಮಾಜಿ ಶಾಸಕರ ಕ್ರೆಡಿಟ್ ವಾರ್; ಆರು ತಿಂಗಳಿಂದೆ ಪೊಲೀಸ್​ ಠಾಣೆ ನಿರ್ಮಾಣವಾದ್ರು ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 7:28 PM

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಸುಸಜ್ಜಿತ ಪೊಲೀಸ್ ಠಾಣೆಯನ್ನ ನಿರ್ಮಾಣ ಮಾಡಿದ್ದು, ಆರು ತಿಂಗಳಿಂದೆಯೇ ಓಪನಿಂಗ್​ಗೂ ಸಿದ್ದವಾಗಿ ನಿಂತಿದೆ. ಆದ್ರೆ, ಪೊಲೀಸ್ ಠಾಣೆ ಉದ್ಘಾಟನೆಗೆ ಸಿದ್ದವಿದ್ರೂ ಹಾಲಿ ಮಾಜಿ ಶಾಸಕರ ಕ್ರೇಡಿಟ್ ವಾರ್​ನಿಂದ ಹಾಗೆ ಉಳಿದಿದ್ದು, ಪೊಲೀಸರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 

ಹಾಲಿ,ಮಾಜಿ ಶಾಸಕರ ಕ್ರೆಡಿಟ್ ವಾರ್; ಆರು ತಿಂಗಳಿಂದೆ ಪೊಲೀಸ್​ ಠಾಣೆ ನಿರ್ಮಾಣವಾದ್ರು ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ
Follow us on

ಬೆಂಗಳೂರು ಗ್ರಾಮಾಂತರ, ಮಾ.06: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura)  ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಕಳೆದ ಎರಡು ವರ್ಷಗಳಿಂದೆ ಹೆದ್ದಾರಿ ಅಗಲೀಕರಣಕ್ಕೆ ಡೆಮಾಲಿಷನ್ ಆಗಿತ್ತು. ಹೀಗಾಗಿ ನೂತನ ಠಾಣೆ ನಿರ್ಮಾಣದವರೆಗೂ ಅಂಬೇಡ್ಕರ್ ಭವನಕ್ಕೆ ತಾತ್ಕಾಲಿಕವಾಗಿ ಠಾಣೆಯನ್ನ ಶಿಪ್ಟ್ ಮಾಡಿ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೆ ಅಂದಿನ ಕಾಂಗ್ರೆಸ್​ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದ್ದರು. ಹೀಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲೆ ನೂತನ ಪೊಲೀಸ್ ಠಾಣೆ ನಿರ್ಮಾಣ ಮಾಡಿದ್ದು, ಆರು ತಿಂಗಳಿಂದೆಯೆ ಉದ್ಘಾಟನೆಗೂ ಸಿದ್ದವಾಗಿದೆ. ಆದ್ರೆ, ಇದೀಗ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕ ಗೆದ್ದಿರುವ ಕಾರಣ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟನೆ ಮಾಡಲು ಬಿಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಜೊತೆಗೆ ಮಾಜಿ ಶಾಸಕರ ಗ್ರಾಮದ ವ್ಯಾಪ್ತಿಗೆ ಈ ಪೊಲೀಸ್ ಠಾಣೆ ಬರುವ ಹಿನ್ನೆಲೆಯಲ್ಲಿ ಠಾಣೆಗೆ ಉದ್ಘಾಟನೆ ಭಾಗ್ಯ ಸಿಗದಿದ್ದು, ಹೆಚ್ಚಿನ ಜನ ಪೊಲೀಸ್ ಠಾಣೆಗೆ ದೂರು ನೀಡಲು ಬಂದರೆ, ಸ್ಥಳಾವಕಾಶವಿಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಆರು ತಿಂಗಳಿಂದ ಪೊಲೀಸ್ ಠಾಣೆ ಸುಣ್ಣ ಬಣ್ಣ ಬಳೆದುಕೊಂಡು ಬೋರ್ಡ್ ಹಾಕಿದರೂ ಉದ್ಘಾಟನೆಯಾಗದ ಕಾರಣ, ವಿಧಿಯಿಲ್ಲದೆ ಪೊಲೀಸರು ಕಿರಿದಾದ ಅಂಭೇಡ್ಕರ್ ಭವನದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದ್ರೆ, ಅಕ್ಕ ಪಕ್ಕದ ಗ್ರಾಮಗಳಲ್ಲಿನ ದಲಿತ ಸಮುದಾಯದ ಕಾರ್ಯಕ್ರಮಗಳಿಗಾಗಿ ನಿರ್ಮಾಣ ಮಾಡಿದ್ದ ಭವನ, ಎರಡು ವರ್ಷ ಕಳೆದರೂ ಸಮುದಾಯಕ್ಕೆ ಸಿಗದಿದ್ದು, ನಮಗೆ ಕಾರ್ಯಕ್ರಮ ಮಾಡಲು ಸ್ಥಳವಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಆಸ್ಪತ್ರೆ; ಉದ್ಘಾಟನೆ ಆದರೂ ರೋಗಿಗಳಿಗಿಲ್ಲ ಸೇವೆ

ಜೊತೆಗೆ ಹಾಲಿ ಹಾಗೂ ಮಾಜಿ ಶಾಸಕರ ಕ್ರೆಡಿಟ್ ವಾರ್​ನಿಂದ ಇದೀಗ ಪೊಲೀಸರು ಮತ್ತು ಬಡ ಜನರು ಪರದಾಡುತ್ತಿದ್ದು, ಕೂಡಲೇ ಪೊಲೀಸ್ ಠಾಣೆ ಉದ್ಘಾಟನೆ ಮಾಡಿಸಿ ಸಮುದಾಯ ಭವನ ಖಾಲಿ ಮಾಡಿಸುವಂತೆ ದಲಿತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಒಟ್ಟಾರೆ ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬಂತೆ ನೂತನ ಠಾಣೆ ಉದ್ಘಾಟನೆಗೆ ಸಿದ್ದವಿದ್ದರೂ, ಹಾಲಿ,ಮಾಜಿ ಶಾಸಕರ ಕ್ರೆಡಿಟ್ ವಾರ್​ನಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಗೃಹ ಇಲಾಖೆ ಇತ್ತ ಗಮನಹರಿಸಿ ನೂತನ ಠಾಣೆಗೆ ಉದ್ಘಾಟನೆ ಭಾಗ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ