AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

74 ಭ್ರೂಣ ಹತ್ಯೆ ಪ್ರಕರಣ: ನೆಲಮಂಗಲದ ಆಸರೆ ಆಸ್ಪತ್ರೆ ಬಂದ್: ಕೆಲ ಮಹತ್ವದ ದಾಖಲೆ ವಶಕ್ಕೆ

ನೆಲಮಂಗಲ ನಗರದ ಆಸರೆ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಆಸ್ಪತ್ರೆಯ ವೈದ್ಯರು ಬರೋಬ್ಬರಿ 74 ಭ್ರೂಣಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಆಸರೆ ಆಸ್ಪತ್ರೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದೆ.

74 ಭ್ರೂಣ ಹತ್ಯೆ ಪ್ರಕರಣ: ನೆಲಮಂಗಲದ ಆಸರೆ ಆಸ್ಪತ್ರೆ ಬಂದ್:  ಕೆಲ ಮಹತ್ವದ ದಾಖಲೆ ವಶಕ್ಕೆ
ಆಸರೆ ಆಸ್ಪತ್ರೆ
ಬಿ ಮೂರ್ತಿ, ನೆಲಮಂಗಲ
| Edited By: |

Updated on:Mar 07, 2024 | 5:04 PM

Share

ನೆಲಮಂಗಲ, ಮಾರ್ಚ್​.06: ಭ್ರೂಣ ಹತ್ಯೆ (Foeticide) ತಡೆಗೆ ನಿಷೇಧ ಹೇರಲಾಗಿದ್ದು ಭ್ರೂಣ ಹತ್ಯೆ ತಡೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ (Karnataka Government) ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಈಗ ನೆಲಮಂಗಲ ನಗರದ ಆಸರೆ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಇಲ್ಲಿ ಅವ್ಯಾಹತವಾಗಿ ಭ್ರೂಣ ಹತ್ಯೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿರುವ ಆಸರೆ ಆಸ್ಪತ್ರೆಯಲ್ಲಿ (Aasare Hospital) ಭ್ರೂಣ ಹತ್ಯೆ ನಡೆಯುತ್ತಿದ್ದು ವೈದ್ಯರು ಬರೋಬ್ಬರಿ 74 ಭ್ರೂಣಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ನಿಷೇಧವಿದ್ದರೂ ಯಾವ ಕಾನೂನನ್ನೂ ಪಾಲಿಸದೆ ಡಾಕ್ಟರ್ ರವಿಕುಮಾರ್‌ ಎಂಬುವವರಿಗೆ ಸೇರಿದ ಆಸರೆ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. MTPಕಾಯ್ದೆ ಪರವಾನಗಿ ಪಡೆಯದೇ ಬೇಕಾಬಿಟ್ಟಿಯಾಗಿ ಗರ್ಭಪಾತ ಮಾಡಿಸಲಾಗುತ್ತಿದೆ. (MTP)ಪೂರ್ಣಾವಧಿ ತಲುಪುವ ಮೊದಲು ಅಬಾರ್ಶನ್ ಮಾಡಿಸಲಾಗುತ್ತಿದೆ. ಅವಶ್ಯಕವಾಗಿ ಬೇಕಾದ ಸ್ಕ್ಯಾನಿಂಗ್ ರಿಪೋರ್ಟ್ ಇಲ್ಲ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸಣ್ಣದಾಗಿ ನಮೂದಿಸಿದ್ದು ಸರಿಯಾಗಿ ರೆಕಾರ್ಡ್ ಕೂಡ ಮೈನ್ಟೈನ್ ಮಾಡಿಲ್ಲ. ಸದ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಆಸರೆ ಆಸ್ಪತ್ರೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಟೌನ್ ಠಾಣೆಯಲ್ಲಿ ಡಾ.ರವಿಕುಮಾರ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಐಪಿಸಿ ಸೆಕ್ಷನ್‌ 312, 313, 315, 316ರಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣ: ಸ್ಕ್ಯಾನಿಂಗ್ ಯಂತ್ರಗಳ ಸರಬರಾಜು ಮಾಡಿದ್ದ ಆರೋಪಿ ಬಂಧನ

ಇನ್ನು ಘಟನೆ ಸಂಬಂಧ ಟಿವಿ9ಗೆ ಬೆಂಗಳೂರು ಗ್ರಾಮಾಂತರ DHO ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ಆಸರೆ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲು ಮಾಡಿದ್ದೇವೆ. ತನಿಖೆ ನಡೆಸಿ ಮುಲಾಜಿಲ್ಲದೆ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಆಸರೆ ಆಸ್ಪತ್ರೆ ವೈದ್ಯ ಹಾಗೂ ಮಾಲೀಕ ನಾಪತ್ತೆ

ನೆಲಮಂಗಲ ನಗರದ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆ ಪ್ರಕರಣ ಟಿವಿ9ನಲ್ಲಿ ವರದಿ ಪ್ರಸಾರ ವಾಗುತ್ತಿದ್ದಂತೆ ಆಸರೆ ಆಸ್ಪತ್ರೆ ವೈದ್ಯ ಹಾಗೂ ಮಾಲೀಕ ರವಿಕುಮಾರ್ ನಾಪತ್ತೆಯಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:53 pm, Wed, 6 March 24