ದೇವನಹಳ್ಳಿ, ನವೆಂಬರ್ 23: ಆಕೆ ಎರಡು ವರ್ಷಗಳಿಂದಷ್ಟೇ ಪ್ರೀತಿಸಿದವನ ಜೊತೆ ಬಾಳಬೇಕು ಅಂತ ಮನೆಯವರನ್ನ ಒಪ್ಪಿಸಿ ಮದುಯಾಗಿದ್ದರು. ಜೊತೆಗೆ ಆರು ತಿಂಗಳಿಂದೆ ಗರ್ಭಿಣಿಯಾಗಿದ್ದು (pregnant), ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅಷ್ಟರಲ್ಲೇ ಗಂಡನ ಮನೆಯವರು ನೀಡಿದ ಕಿರುಕುಳಕ್ಕೆ ಬೇಸತ್ತು ಸಾವಿನ ಮನೆ ಸೇರಿದ್ದು, ಮಗಳ ಚೊಚ್ಚಲ ಬಾಣಂತನದ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾಳೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿ ನಿವಾಸಿ ಸುರೇಶ್ ಜೊತೆ ಕಳೆದ 2 ವರ್ಷದಿಂದಷ್ಟೆ ಹಸೆಮಣೆ ಏರಿದ್ದ ರೂಪ ಮೃತ ಗರ್ಭಿಣಿ. ಆರು ತಿಂಗಳ ಗರ್ಭಿಣಿಯಾಗಿದ್ದ ರೂಪ ಹೊಟ್ಟೆಯಲ್ಲಿನ ಮಗು ಕಣ್ಣು ತೆರೆಯುವ ಮುನ್ನವೆ ತಾಯಿ ಹೊಟ್ಟೆಯಲ್ಲಿನ ಮಗು ಸಮೇತ ಪರಲೋಕ ಸೇರಿದ್ದಾರೆ.
ಹೌದು. ಅಂದಹಾಗೆ ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಎರಡು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ರೂಪ ಮತ್ತು ಸುರೇಶ್ ಆರು ತಿಂಗಳವರೆಗೂ ಸುಖ ಸಂಸಾರ ಮಾಡಿದ್ದಾರೆ. ಆದರೆ ಆರು ತಿಂಗಳು ಕಳೆಯುತ್ತಿದ್ದಂತೆ ನನಗೆ ಸಾಲಗಾರರ ಕಾಟ ಜಾಸ್ತಿಯಾಗುತ್ತಿದೆ. ಮದುವೆಗೆ ಸಾಲ ಮಾಡಿದ್ದು, ಬೇರೆ ಹುಡುಗಿಯನ್ನ ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು. ಸಾಲ ತೀರುತಿತ್ತು ಅಂತ ಗಂಡ ಮತ್ತು ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ರಂತೆ.
ಇದನ್ನೂ ಓದಿ: ಅಕ್ಕನ ಮೇಲೆ ತಮ್ಮನಿಂದ ದರ್ಪ: ಹೊರದಬ್ಬಿ ಮನೆಗೆ ಬೀಗ ಹಾಕಿದ ಒಡ ಹುಟ್ಟಿದಾತ
ಅಲ್ಲದೆ ಪದೇ ಪದೇ ತವರು ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಅಂತ ತವರು ಮನೆಗೆ ಕಳಿಸುತ್ತಿದ್ದ ಕಾರಣ ರೂಪ ಬೇಸತ್ತಿದ್ದಾಳೆ. ಇನ್ನೂ ಪದೇ ಪದೇ ಇದೇ ರೀತಿ ಹಲವು ಭಾರಿ ಹಣಕ್ಕೆ ಅತ್ತೆ ಮಾವ ಸೇರಿದಂತೆ ಪ್ರೀತಿಸಿ ಮದುವೆಯಾದ ಗಂಡನು ಕಿರುಕುಳ ನೀಡಿದ್ದು, ತವರು ಮನೆಯವರು ಅಡ್ಜೆಸ್ಟ್ ಮಾಡಿಕೊಂಡು ಬಾಳಮ್ಮ ಅಂದಿದ್ರಂತೆ. ಜೊತೆಗೆ ಇದೇ ನೆಪದಲ್ಲಿ ಪದೇ ಪದೇ ಊಟ ಸೇರಿದಂತೆ ಸಣ್ಣ ಪುಟ್ಟ ವಿಚಾರಕ್ಕೂ ಗಂಡನ ಮನೆಯವರು ರೂಪಾಗೆ ಕಿರುಕುಳ ನೀಡ್ತಿದ್ರಂತೆ. ಇನ್ನೂ ಗಂಡನ ಮನೆಯವರ ಕಿರುಕುಳ ತಾಳಲಾರದೆ ಬೇಸತ್ತ ತುಂಬು ಗರ್ಭಿಣಿ ರೂಪ ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಬುಕ್ ಒಂದರಲ್ಲಿ ಪ್ರೀತಿಯ ಅಣ್ಣನಿಗೆ ತಂಗಿ ಮಾಡುವ ನಮಸ್ಕಾರಗಳು. ಅಣ್ಣ ನಾನು ನಿನ್ನ ಮಾತು ಕೇಳದೆ ತಪ್ಪು ಮಾಡಿ ಈ ಮದುವೆ ಆದೆ. ಆದರೆ ನಾನು ಮದುವೆ ಆಗಿ 2 ವರ್ಷದಿಂದ ಒಂದು ದಿನವು ನನಗೆ ಇಲ್ಲಿ ನೆಮ್ಮದಿಯಿಲ್ಲ. ನನ್ನ ಜೀವನಕ್ಕೆ ನರಕವಾಗಿದೆ. ಇನ್ನೂ ನನಗೆ ಬದುಕಲು ಇಷ್ಟವಿಲ್ಲ. ಸಾಧ್ಯವಾದರೆ ಕ್ಷಮಿಸು. ಮುಂದಿನ ಜನ್ಮವಿದ್ದರೆ ನಿನ್ನ ಋಣ ತೀರಿಸುತ್ತೇನೆ. ಅಪ್ಪ, ಅಮ್ಮ, ಅಜ್ಜಿಗೆ ನನ್ನ ಕೊನೆಯ ನಮನಗಳು. ನನ್ನ ಸಾವಿಗೆ ದಯವಿಟ್ಟು ನ್ಯಾಯ ಕೊಡಿಸು. ನನ್ನ ಸಾವಿಗೆ ಅತ್ತೆ, ಮಾವ, ನನ್ನ ಗಂಡ ಮತ್ತು ಗಂಡನ ಮನೆಯವರೇ ಕಾರಣ. ನನ್ನ ಅತ್ತೆ ದೇವಮ್ಮ, ಮಾಮ ನರಸಿಂಹಮೂರ್ತಿ ಮತ್ತು ಗಂಡ ಸುರೇಶ್ ಇವರಿಗೆ ಶಿಕ್ಷೆ ಕೊಡಿಸಿ ನನಗೆ ನ್ಯಾಯ ಕೊಡಿಸಿ ಅಣ್ಣ ದಯವಿಟ್ಟು. ಇಂತಿ ನಿಮ್ಮ ಪ್ರೀತಿಯ ತಂಗಿ ರೂಪ ರತ್ನಮ್ಮ ಜಿಆರ್ ಎಂದು ಡೆತ್ ನೋಟ್ ಬರೆದು ಅಣ್ಣನಿಗೆ ವಾಟ್ಸ್ ಆಪ್ ಮೂಲಕ ಫೋಟೋ ಕಳಿಸಿದ್ದಾರೆ.
ಇದನ್ನೂ ಓದಿ: 16 ವರ್ಷದ ಅಪ್ರಾಪ್ತ ಸೊಸೆಯನ್ನೇ ಗರ್ಭಿಣಿ ಮಾಡಿದ ಸೋದರ ಮಾವ
ಇನ್ನೂ ಈ ಕುರಿತು ಮೃತಳ ಗಂಡ ಸುರೇಶ್ ಸಹೋದರನನ್ನ ಕೇಳಿದರೆ ಮನೆಯಲ್ಲಿ ಯಾವುದೇ ಗಲಾಟೆಗಳು ಆಗ್ತಿರಲಿಲ್ಲ. ರೂಪ ಅವರ ಮಾವ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು ಹಣದ ಆಸೆ ಇದ್ದಿದ್ದರೆ ಮದುವೆ ಯಾಕೆ ಮಾಡ್ತಿದ್ರು ಅಂತ ವರದಕ್ಷಿಣೆ ಕಿರಕುಳ ಆರೋಪವನ್ನ ತಳ್ಳಿ ಹಾಕಿದ್ದಾರೆ. ಸದ್ಯ ದೊಡ್ಡಬೆಳವಂಗಲ ಠಾಣೆ ಪೊಲೀಸರು ಮೃತ ರೂಪ ಗಂಡ ಸುರೇಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸಂಪೂರ್ಣ ತನಿಖೆ ನಂತರ ರೂಪಾಳ ಸಾವಿನ ಹಿಂದಿನ ಸತ್ಯ ಬೆಳಕಿಗೆ ಬರಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.