ದೊಡ್ಡಬಳ್ಳಾಪುರ: ಖದೀಮರು ಕುಡಿದ ನಶೆಯಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇನ್ನು ಡಿಕ್ಕಿ ಹೊಡೆದಿದ್ದನ್ನ ಪ್ರಶ್ನಿಸಿದಕ್ಕೆ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿ ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಕೋಟೆ ಗ್ರಾಮದ ಬಳಿ ಘಟನೆ ನಡೆದಿದೆ.
ಖದೀಮರು ಚಾಕು ತೋರಿಸುತ್ತಿದ್ದಂತೆ ಬೈಕ್ ಮಾಲೀಕ ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಲೀಕ ಪರಾರಿಯಾದ ಅಂತ ಬೈಕ್ ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ. ಕಿಡಿಗೇಡಿಗಳು, ಶೈನ್ ಬೈಕ್ ಅನ್ನ ರಸ್ತೆ ಬದಿಯ ಹಳ್ಳಕ್ಕೆ ಹಾಕಿ ಕಿಡಿ ಹಚ್ಚಿದ್ದಾರೆ.
ಆದರೆ ಗ್ರಾಮಸ್ಥರು ಬೆಂಕಿ ಹಚ್ಚಿ ಎಸ್ಕೇಪ್ ಆಗ್ತಿದ್ದವರನ್ನ ಮುಂದಿನ ಗ್ರಾಮದ ಬಳಿ ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಸ್ಥಳೀಯರು ಹೆಸರಘಟ್ಟ ಮೂಲದ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.