ಗೃಹ ಸಚಿವರೇ! ದೇವನಹಳ್ಳಿ ಉಪವಿಭಾಗದ 4 ಪೊಲೀಸ್ ಠಾಣೆಗಳ ಸಿಬ್ಬಂದಿಯ ಭತ್ಯೆಗೆ ಬ್ರೇಕ್ ಹಾಕಲಾಗಿದೆ
ದೇವನಹಳ್ಳಿ, ಚಿಕ್ಕಜಾಲ, ಏರ್ಪೋರ್ಟ್ ಪೊಲೀಸ್ ಠಾಣೆ ಮತ್ತು ಏರ್ಪೋರ್ಟ್ ಸಂಚಾರಿ ಪೊಲೀಸರ ಗೃಹ ಭತ್ಯೆ ಕಡಿತಗೊಳಿಸಲಾಗಿದೆ. 310 ಕ್ಕೂ ಹೆಚ್ಚು ಪೊಲೀಸರಿಗೆ ನೀಡ್ತಿದ್ದ ಶೇ. 24 ಗೃಹ ಭತ್ಯೆಯನ್ನು ಶೇ. 08ಕ್ಕೆ ಕಡಿತಗೊಳಿಸಲಾಗಿದೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore police) ದೇವನಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ (ಈಶಾನ್ಯ ಪೊಲೀಸ್ ವಿಭಾಗ) ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯ ಭತ್ಯೆಗೆ ಬ್ರೇಕ್ ಹಾಕಲಾಗಿದೆ. ಈ ವಿಭಾಗದ ಸಿಬ್ಬಂದಿಯ ಗೃಹ ಭತ್ಯೆ (Housing Allowance) ಕಡಿತಗೊಳಿಸಲಾಗಿದೆ. ದೇವನಹಳ್ಳಿ, ಚಿಕ್ಕಜಾಲ, ಏರ್ಪೋರ್ಟ್ ಪೊಲೀಸ್ ಠಾಣೆ ಮತ್ತು ಏರ್ಪೋರ್ಟ್ ಸಂಚಾರಿ ಪೊಲೀಸರ ಗೃಹ ಭತ್ಯೆ ಕಡಿತಗೊಳಿಸಲಾಗಿದೆ. 310 ಕ್ಕೂ ಹೆಚ್ಚು ಪೊಲೀಸರಿಗೆ ನೀಡ್ತಿದ್ದ ಶೇ. 24 ಗೃಹ ಭತ್ಯೆಯನ್ನು ಶೇ. 08ಕ್ಕೆ ಕಡಿತಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಉಪವಿಭಾಗ ವ್ಯಾಪ್ತಿಯ ಎಸಿಪಿ, ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ಎಲ್ಲಾ ಸಿಬ್ಬಂದಿಯ ಭತ್ಯೆಗಳನ್ನು ಏಕಾಏಕಿ ಕಡಿತಗೊಳಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರೂ ಬಿಬಿಎಂಪಿ ವ್ಯಾಪ್ತಿಯಲ್ಲಿಲ್ಲ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಾಗಿದ್ದರೂ ಬಿಬಿಎಂಪಿ ವ್ಯಾಪ್ತಿಯಲ್ಲಿಲ್ಲ ಎಂಬ ಕಾರಣ ನೀಡಿ ಈ ಕಡಿತ ಅನ್ವಯಿಸಲಾಗಿದೆ. ಆದರೆ, ಏಕಾಏಕಿ ಭತ್ಯೆ ಕಡಿತ ಆದೇಶಕ್ಕೆ ಸಿಬ್ಬಂದಿಯಿಂದ ಅಸಮಧಾನ ವ್ಯಕ್ತವಾಗಿದೆ. ಗೃಹ ಭತ್ಯೆ ಎಂದಿನಂತೆ ಕೊಡಿ, ಇಲ್ಲವೇ ವರ್ಗಾವಣೆ ಮಾಡಿ ಅಂತ ಸಾಮೂಹಿಕ ವರ್ಗಾವಣೆಗೆ ಪತ್ರಗಳನ್ನ ಬರೆದಿದ್ದಾರೆ. ಹಿರಿಯ ಅಧಿಕಾರಿಗಳು, ಗೃಹ ಸಚಿವ ಮತ್ತು ಮುಖ್ಯಮಂತ್ರಿಗೆ ಸಿಬ್ಬಂದಿ ಪತ್ರ ಬರೆದಿದ್ದಾರೆ.
Published On - 4:35 pm, Mon, 12 September 22