ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆ; ಬೆಂಗಳೂರು ಗ್ರಾಮಾಂತರ ಪೊಲೀಸರು ಹೈ ಅಲರ್ಟ್, ಇಲ್ಲಿದೆ ವಿವರ​

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 17, 2023 | 8:08 PM

ಗಣೇಶ ವಿಸರ್ಜನೆ ಎಲ್ಲಿ‌‌ ಮಾಡಲಾಗುತ್ತೆ, ಅಲ್ಲಿನ ಮಾಹಿತಿ ಪಡೆದು ಗಣೇಶ ವಿಸರ್ಜನೆ ಮಾಡುವ ಸ್ಥಳದಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಗಣೇಶ ಕೂರಿಸಲು ಕೂಡ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆ; ಬೆಂಗಳೂರು ಗ್ರಾಮಾಂತರ ಪೊಲೀಸರು ಹೈ ಅಲರ್ಟ್, ಇಲ್ಲಿದೆ ವಿವರ​
ಬೆಂಗಳೂರು ಗ್ರಾಮಾಂತರ ಎಸ್ಪಿ
Follow us on

ಬೆಂಗಳೂರು ಗ್ರಾಮಾಂತರ, ಸೆ.17: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಣೆ ಇರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ (Bengaluru Rural) ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು. ‘2 ಕೆಎಸ್​ಆರ್​ಪಿ (KSRP) ತುಕಡಿ ಹಾಗೂ ಡಿಎಆರ್​ ಸಿಬ್ಬಂದಿ, 300 ಹೋಂ ಗಾರ್ಡ್ಸ್​ ನಿಯೋಜನೆ ಮಾಡಲಾಗಿದ್ದು, ಅತೀಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇವೆ ಎಂದರು.

ವಿಸರ್ಜನೆ ಸ್ಥಳದಲ್ಲೂ ಹೈ ಅಲರ್ಟ್​

ಇನ್ನು ಗಣೇಶ ವಿಸರ್ಜನೆ ಎಲ್ಲಿ‌‌ ಮಾಡಲಾಗುತ್ತೆ, ಅಲ್ಲಿನ ಮಾಹಿತಿ ಪಡೆದು ಗಣೇಶ ವಿಸರ್ಜನೆ ಮಾಡುವ ಸ್ಥಳದಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಗಣೇಶ ಕೂರಿಸಲು ಕೂಡ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು. ಇದೇ ವೇಳೆ ‘ಈಗಾಗಲೇ ಗಣೇಶ ಕೂರಿಸಲು ಅನುಮತಿ ಪಡೆಯಲು ಸಿಂಗಲ್ ವಿಂಡೋ ಸಿಸ್ಟಮ್ ಮಾಡಿದ್ದೇವೆ ಎಂದರು.

ಇದನ್ನೂ ಓದಿ:ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಪತ್ರ ಬಂದಿದೆ: ಸಚಿವ ಆರ್​ ಅಶೋಕ

ಗಣೇಶ ಕೂರಿಸಲು ಮುನ್ನೆಚ್ಚರಿಕೆ ಕ್ರಮ

ಗಣೇಶ ಕೂರಿಸಲು ಬೆಸ್ಕಾಂ, ಜಾಗದ ಅನುಮತಿ, ಅಗ್ನಿಶಾಮಕ ಸೆರಿದಂತೆ ಪೊಲೀಸ್ ಅನುಮತಿ ಸಿಂಗಲ್ ವಿಂಡೋದಲ್ಲಿ ಮಾಡಿಕೊಡುತ್ತಿದ್ದೇವೆ. ಗಣೇಶ ಕೂರಿಸಲು ಮುನ್ನೆಚ್ಚರಿಕೆ ಯಾವ ರೀತಿ ಕ್ರಮ ಅನುಸರಿಸಬೇಕು ಎಲ್ಲವನ್ನು ತಿಳಿ ಹೇಳಿದ್ದೇವೆ. ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ‌ ಬಂದೋಬಸ್ತ್ ಮಾಡಿದ್ದೇವೆ. ಎಲ್ಲರೂ ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಣೆ ಮಾಡಿ ಶಾಂತಿ ಸುವ್ಯವಸ್ಥೆ ಪಾಲಿಸುವಂತೆ ಸೂಚನೆ ನೀಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ