AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ

ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಯುವಕರ ಕಣ್ಮನ ಸೆಳಯುತ್ತಿವೆ ವಿವಿಧ ಬಗೆಯ ಮಣ್ಣಿನ ವಿನಾಯಕ: ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದನಾದ ಕಾಂತಾರ ಗಣಪ
ಕಾಂತಾರ ಗಣಪ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 17, 2023 | 10:16 PM

Share

ಬೆಂಗಳೂರು ಗ್ರಾಮಾಂತರ, ಸೆಪ್ಟೆಂಬರ್​ 17: ಗಣೇಶ ಹಬ್ಬ (Ganesh Chaturthi) ಬಂತು ಅಂದರೆ ಡಿಪರೆಂಟ್ ಆಗಿರುವ ಬೇರೆಲ್ಲೂ ಇಲ್ಲದ ಗಣೇಶಗಳನ್ನ ನಮ್ಮೇರಿಯಾದಲ್ಲಿ ಕೂರಿಸಬೇಕು ಅನ್ನೂ ತವಕ ಯುವಕರಲ್ಲಿರುವುದು ಕಾಮನ್. ಹೀಗಾಗೆ ಇಂತಹ ಯುವಕರಿಗಾಗಿಯೆ ಕಳೆದ 30 ವರ್ಷದಿಂದ ಟ್ರೆಂಡಿಂಗ್ ಪರಿಸರ ಸ್ನೇಹಿ ಗಣೇಶಗಳನ್ನ ಇಲ್ಲೊಂದು ಕುಟುಂಬ ಮಾಡುತ್ತಾ ಬಂದಿದ್ದು ಈ ಭಾರಿ ಕಾಂತಾರ ಗಣೇಶ ಮಾಡುವ ಮೂಲಕ ಕಮಾಲ್ ಮಾಡಿದ್ದಾರೆ.

ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ ರಾಜಗೋಪಾಲ್ ಅನ್ನೂ ಈ ಕುಟುಂಬ ಪರಿಸರ ಗಣೇಶ ಮೂರ್ತಿಗಳನ್ನ ಮಾಡ್ತಿದ್ದಾರೆ. ಅದರಲ್ಲೂ ವರ್ಷ ವರ್ಷ ಟ್ರೆಂಡಿಂಗ್ ನಲ್ಲಿರುವ ಗಣೇಶ ಮೂರ್ತಿಗಳನ್ನ ಮಾಡುವುದು ಇವರ ಹವ್ಯಾಸವಾಗಿದ್ದು, ಈ ಭಾರಿ ಕಾಂತಾರ ಗಣೇಶನನ್ನ ಮಣ್ಣಿನಲ್ಲಿ ಮಾಡುವ ಮೂಲಕ ಯುವಕನ ಗಮನ ಸೆಳೆದಿದ್ದಾರೆ. ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳು ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈಗಾಗಲೆ ಮುಗಿ ಬಿದ್ದು ಯುವಕರು ಕಾಂತಾರ ಗಣೇಶಗಳನ್ನ ಬುಕ್ ಮಾಡಿಕೊಂಡಿದ್ದು ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹೂವಿನಿಂದಲ್ಲ, ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ: ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟು, ನಾಣ್ಯಗಳಿಂದ ಸಿಂಗಾರ

ಕಳೆದ 5 ವರ್ಷದಿಂದ ಆ ವರ್ಷದಲ್ಲಿರುವ ಟ್ರೆಂಡಿಂಗನ್ನ ಗಣೇಶಗಳನ್ನ ಮಾಡ್ತಿದ್ದು ಕಳೆದ ಭಾರಿ ಅಪ್ಪು ಗಣೇಶ ಎಲ್ಲರ ಗಮನ ಸೆಳೆದಿತ್ತು. ಅದೇ ರೀತಿ ಈ ಭಾರಿ ಕಾಂತಾರ ಗಣೇಶ ಗಮನ ಸೆಳೆಯುತ್ತಿದ್ದು ಕಾಂತಾರ ಜೊತೆಗೆ ಇತರೆ ಪರಿಸರ ಸ್ನೇಹಿ ವಿವಿಧ ಬಗೆಯ ಮಣ್ಣಿನ ಗಣಪಗಳು ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಇಲ್ಲಿಂದಲೆ ಬೆಂಗಳೂರು ಮೈಸೂರು ಮಂಡ್ಯ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕಡೆ ಸಾವಿರಾರು ಗಣೇಶಗಳು ಹೋಗ್ತಿದ್ದು ಈ ಭಾರಿಯು ಬೇಡಿಕೆ ಬಂದಿದೆ.

ಇದನ್ನೂ ಓದಿ: Ganesh Chaturthi 2023: ಚೌತಿಯಂದು ಮನೆಯಲ್ಲಿ ಗಣಪತಿ ಕೂರಿಸುವವರು ಅನುಸರಿಸಬೇಕಾದ ನಿಯಮಗಳೇನು? ಆಚರಣೆ ಹೇಗೆ?

ಈ ಭಾರಿಯ ಗಣೇಶೋತ್ಸವಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದು ಎಲ್ಲರೂ ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಗಣೇಶ ಕೂರಿಸುವುದು ಕಡ್ಡಾಯ ಅಂತ ಬೆಂಗಳೂರು ಗ್ರಾಮಾಂತರ ಎಸ್ಪಿ ತಿಳಿಸಿದ್ದಾರೆ.

ಪ್ರತಿಭಾರಿ ಒಂದೊಂದು ಟ್ರೆಂಡಿಂಗ್ ಗಣೇಶ ಮಾಡಿ ಯುವಕರ ಗಮನ ಸೆಳಯುತ್ತಿರುವು ಈ ಕುಟುಂಬ ಈ ಭಾರಿಯು ಕಾಂತಾರ ಗಣೇಶ ಮೂಲಕ ಕಮಾಲ್ ಮಾಡ್ತಿದ್ದಾರೆ. ಇನ್ನೂ ನೀವು ಸಹ ಗಣೇಶ ಉತ್ಸವ ಮಾಡ್ತಿದ್ರೆ ಪರಿಸರ ಸ್ನೇಹಿ ಗಣೇಶಗಳನ್ನ ಕೂರಿಸಿ ಕಾನೂನು ನಿಯಮಗಳನ್ನ ಪಾಲಿಸುವ ಮೂಲಕ ಗಣೇಶೋತ್ಸವ ಮಾಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?