Video: ದೈಹಿಕ ನ್ಯೂನತೆಯಿದ್ರೂ ಜೀವನಕ್ಕಾಗಿ ಗುಂಡಿ ಅಗೆಯುವ ಕೆಲಸ ನೆಚ್ಚಿಕೊಂಡ ಕೂಲಿ ಕಾರ್ಮಿಕ
ಸ್ವಾಭಿಮಾನದ ಬದುಕೇ ಹಾಗೆ, ಬೇರೆ ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಹಾಗೂ ತನ್ನನ್ನೇ ನಂಬಿದ ಕುಟುಂಬಕ್ಕಾಗಿ ಕಷ್ಟಪಡುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ದೈಹಿಕ ಹಾಗೂ ಮಾನಸಿಕ ನೂನ್ಯತೆ ಮೆಟ್ಟಿ ನಿಂತು ಕೂಲಿ ಕಾರ್ಮಿಕನಾಗಿ ಕುಟುಂಬಕ್ಕಾಗಿ ದುಡಿಯುವ ಈ ವ್ಯಕ್ತಿಯನ್ನು ಕಂಡಾಗ ಕಣ್ಣಲ್ಲಿ ನೀರು ಜಿನುಗುತ್ತದೆ. ಈ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ಒದ್ದೆಯಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ದುಡಿದು ತಿನ್ನುವ ಛಲವಿದ್ದರೆ ದೈಹಿಕ ನ್ಯೂನತೆ ಲೆಕ್ಕಕ್ಕೆ ಬರಲ್ಲ. ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಯೊಬ್ಬ ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾನೆ. ವೈರಲ್ ವಿಡಿಯೋದಲ್ಲಿ ದೈಹಿಕ ನ್ಯೂನತೆ (physical disability) ಮೀರಿ ಶ್ರಮ ವಹಿಸಿ ದುಡಿಯುತ್ತಿದ್ದಾನೆ. ಈ ದೃಶ್ಯವು ಗುಂಡಿಯನ್ನು ಅಗೆಯುತ್ತಿರುವ ಈ ಕೂಲಿ ಕಾರ್ಮಿಕನ ಶ್ರಮವನ್ನು ಎತ್ತಿ ತೋರಿಸಿದೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಇಂಡಿಯಾ ಬ್ಲಾಕ್ ಬಸ್ಟರ್ (India Blockbuster) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಆಳವಾದ ಗುಂಡಿಗಳನ್ನು ಅಗೆಯುತ್ತಿರುವುದನ್ನು ಕಾಣಬಹುದು. ಮೂರೊತ್ತಿನ ತುತ್ತಿಗಾಗಿ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಯ ಶ್ರಮದ ಕೆಲಸವನ್ನು ನೀವಿಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೇವರೇ ಈ ವ್ಯಕ್ತಿ ಆರೋಗ್ಯ ಹಾಗೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೊಬ್ಬರು, ನಿಮಗೊಂದು ಸಲಾಂ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಮಾಡುವ ಬದಲು ಈ ವ್ಯಕ್ತಿಗೆ ಸಹಾಯ ಮಾಡಬಾರದೇ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




