AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samudrika Shastra: ನಿಮ್ಮ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರಾಕೃತಿ ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ?

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಉಗುರುಗಳಲ್ಲಿರುವ ಅರ್ಧಚಂದ್ರಾಕಾರದ ಗುರುತು ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ಅದೃಷ್ಟದ ಬಗ್ಗೆ ಮಹತ್ವದ ಸುಳಿವು ನೀಡುತ್ತದೆ. ಸಾಮಾನ್ಯವಾಗಿ ನಿರ್ಲಕ್ಷಿಸುವ ಈ ಚಿಹ್ನೆ, ಪ್ರತಿಯೊಂದು ಬೆರಳಿನಲ್ಲಿ ವಿಭಿನ್ನ ಅರ್ಥವನ್ನು ಹೊಂದಿದ್ದು, ಅಪಾರ ಶಕ್ತಿ ಹಾಗೂ ಸಕಾರಾತ್ಮಕ ಫಲಿತಾಂಶಗಳನ್ನು ಸೂಚಿಸುತ್ತದೆ. ನಿಮ್ಮ ಉಗುರಿನ ಅರ್ಧಚಂದ್ರ ಸ್ಪಷ್ಟವಾಗಿದ್ದರೆ ನೀವು ಅದೃಷ್ಟವಂತರು ಎಂದರ್ಥ.

Samudrika Shastra: ನಿಮ್ಮ ಉಗುರುಗಳ ಮೇಲೆ  ಬಿಳಿ ಅರ್ಧಚಂದ್ರಾಕೃತಿ ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ?
ಉಗುರುಗಳ ಮೇಲಿನ ಬಿಳಿ ಅರ್ಧಚಂದ್ರ
ಅಕ್ಷತಾ ವರ್ಕಾಡಿ
|

Updated on: Jul 14, 2026 | 1:38 PM

Share

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಸಾಮುದ್ರಿಕ ಶಾಸ್ತ್ರದಲ್ಲಿ ಉಗುರುಗಳ ಮೇಲಿನ ಗುರುತುಗಳಿಗೂ ಇದೆ. ಸಾಮಾನ್ಯವಾಗಿ ಜನರು ತಮ್ಮ ಉಗುರುಗಳ ಬುಡದಲ್ಲಿರುವ ಬಿಳಿ ಅರ್ಧಚಂದ್ರಾಕಾರದ (Half-Moon Shape) ಮಾದರಿಯನ್ನು ನಿರ್ಲಕ್ಷಿಸುತ್ತಾರೆ. ಆದರೆ, ಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಆಕಾರವು ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ಅದೃಷ್ಟದ ಬಗ್ಗೆ ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸುತ್ತದೆ.

ನಿಮ್ಮ ಉಗುರುಗಳ ಮೇಲೆ ಈ ಬಿಳಿ ಅರ್ಧಚಂದ್ರ ಸ್ಪಷ್ಟವಾಗಿ ಗೋಚರಿಸಿದರೆ ನೀವು ತುಂಬಾ ಅದೃಷ್ಟವಂತರು ಎಂದರ್ಥ. ಇದು ಅಪಾರ ಶಕ್ತಿ ಮತ್ತು ಬಲವಾದ ಯಶಸ್ಸಿನ ಸಂಕೇತವಾಗಿದೆ. ಪ್ರತಿಯೊಂದು ಬೆರಳಿನ ಉಗುರಿನ ಮೇಲಿನ ಅರ್ಧಚಂದ್ರನು ವಿಭಿನ್ನ ಅರ್ಥವನ್ನು ಹೊಂದಿರುತ್ತಾನೆ. ಆ ವಿವರ ಇಲ್ಲಿದೆ:

ಪ್ರತಿಯೊಂದು ಬೆರಳಿನ ಉಗುರಿನ ಮೇಲಿನ ಅರ್ಧಚಂದ್ರನ ಅರ್ಥ:

ಹೆಬ್ಬೆರಳು ಸಮೃದ್ಧಿಯ ಸಂಕೇತ:

ಹೆಬ್ಬೆರಳಿನ ಉಗುರಿನ ಮೇಲೆ ಅರ್ಧಚಂದ್ರನ ಗುರುತು ಇರುವುದು ಅತ್ಯಂತ ಶುಭ ಲಕ್ಷಣ. ಅಂತಹ ವ್ಯಕ್ತಿಗಳು ತಾವು ಕೈಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಇವರ ಜೀವನದಲ್ಲಿ ಸುಖ-ಸಮೃದ್ಧಿಗೆ ಯಾವುದೇ ಕೊರತೆ ಇರುವುದಿಲ್ಲ.

ತೋರುಬೆರಳು ನಾಯಕತ್ವ ಮತ್ತು ಸರ್ಕಾರಿ ಉದ್ಯೋಗ:

ತೋರುಬೆರಳಿನ ಉಗುರಿನ ಮೇಲಿನ ಬಿಳಿ ಗುರುತು ಪ್ರಗತಿಯ ಸಂಕೇತವಾಗಿದೆ. ಇಂತಹ ವ್ಯಕ್ತಿಗಳು ಹಠಾತ್ ಆರ್ಥಿಕ ಲಾಭ ಅಥವಾ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಈ ಬೆರಳಿನಲ್ಲಿ ಗುರುತಿದ್ದರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು ಮತ್ತು ಇವರಲ್ಲಿ ಅತ್ಯುತ್ತಮ ನಾಯಕತ್ವ ಕೌಶಲ್ಯವಿರುತ್ತದೆ.

ಮಧ್ಯದ ಬೆರಳು ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು:

ಮಧ್ಯದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರಾಕಾರದ ಗುರುತು ಕಂಡುಬಂದರೆ, ಆ ವ್ಯಕ್ತಿಯು ತಾಂತ್ರಿಕ (Technical Field) ಅಥವಾ ಯಾಂತ್ರಿಕ ರಂಗದಲ್ಲಿ ಅಪಾರ ಯಶಸ್ಸು ಮತ್ತು ಕೀರ್ತಿಯನ್ನು ಸಾಧಿಸುತ್ತಾನೆ ಎಂಬುದನ್ನು ಇದು ಸೂಚಿಸುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಉಂಗುರ ಬೆರಳು ಗೌರವ ಮತ್ತು ಪ್ರತಿಷ್ಠೆ:

ನಿಮ್ಮ ಉಂಗುರದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರನಿದ್ದರೆ, ನೀವು ಸರ್ಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರೊಂದಿಗೆ ಸಮಾಜದಲ್ಲಿ ಸಕ್ಕತ್ ಗೌರವ, ಹೆಸರು ಮತ್ತು ಪ್ರತಿಷ್ಠೆಯನ್ನು ಗಳಿಸುತ್ತೀರಿ.

ಕಿರುಬೆರಳು ವ್ಯಾಪಾರ ಮತ್ತು ಸಂವಹನ ಕೌಶಲ್ಯ:

ಕಿರುಬೆರಳಿನ ಉಗುರಿನ ಮೇಲೆ ಈ ಗುರುತು ಇದ್ದರೆ, ಆ ವ್ಯಕ್ತಿಯು ವ್ಯಾಪಾರ-ವ್ಯವಹಾರದಲ್ಲಿ (Business) ಅಸಾಧಾರಣ ಯಶಸ್ಸನ್ನು ಕಾಣುತ್ತಾನೆ. ಇವರ ಸಂವಹನ ಕೌಶಲ್ಯ (Communication Skills) ಅದ್ಭುತವಾಗಿದ್ದು, ಮಾತಿನಿಂದಲೇ ಜನರನ್ನು ಆಕರ್ಷಿಸುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರಗಳು (FAQs)

ಪ್ರಶ್ನೆ 1: ಉಗುರುಗಳ ಮೇಲಿನ ಬಿಳಿ ಅರ್ಧಚಂದ್ರ ಏನನ್ನು ಸೂಚಿಸುತ್ತದೆ?

ಉತ್ತರ: ಇದು ವ್ಯಕ್ತಿಯ ಜೀವನದಲ್ಲಿ ಬರಲಿರುವ ಬಲವಾದ ಅದೃಷ್ಟ, ಶಕ್ತಿ ಮತ್ತು ಯಶಸ್ಸನ್ನು ಸೂಚಿಸುವ ಶುಭ ಸಂಕೇತವಾಗಿದೆ.

ಪ್ರಶ್ನೆ 2: ಎಲ್ಲಾ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರ ಸ್ಪಷ್ಟವಾಗಿ ಕಂಡರೆ ಏನರ್ಥ?

ಉತ್ತರ: ನಿಮ್ಮ ಎಲ್ಲಾ ಉಗುರುಗಳ ಮೇಲೆ ಈ ಆಕಾರವು ಸ್ಪಷ್ಟವಾಗಿ ಗೋಚರಿಸಿದರೆ, ನಿಮ್ಮ ಯಶಸ್ಸಿನ ಹಾದಿಗೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂದು ಅರ್ಥ.

ಪ್ರಶ್ನೆ 3: ಯಾವ ಬೆರಳಿನ ಮೇಲೆ ಅರ್ಧಚಂದ್ರನಿದ್ದರೆ ಸರ್ಕಾರಿ ಉದ್ಯೋಗದ ಯೋಗವಿರುತ್ತದೆ?

ಉತ್ತರ: ಸಾಮುದ್ರಿಕ ಶಾಸ್ತ್ರದ ಪ್ರಕಾರ, ತೋರುಬೆರಳು ಮತ್ತು ಉಂಗುರ ಬೆರಳಿನ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರನಿದ್ದರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ