AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಳು ಭಾಷೆಗೆ ಡಿಜಿಟಲ್ ಸ್ಪರ್ಶ: ಬರವು ಸರ್ವ ಆಪ್‌ಗೆ ‘ಕುರಲ್ ತುಳು ಟಚ್‌’ ಕೀಬೋರ್ಡ್‌ ಸೇರ್ಪಡೆ; ಆಂಡ್ರಾಯ್ಡ್‌ನಲ್ಲಿ ತುಳು ಲಿಪಿಯದ್ದೇ ಹವಾ

'ಕುರಲ್ ತುಳು ಟಚ್' ಕೀಬೋರ್ಡ್ ಬಿಡುಗಡೆಯೊಂದಿಗೆ ತುಳು ಭಾಷೆಯ ಡಿಜಿಟಲ್ ಸಂವಹನ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. 'ಜೈ ತುಳುನಾಡ್' ಸಂಸ್ಥೆ ಅಭಿವೃದ್ಧಿಪಡಿಸಿದ ಈ ಕೀಬೋರ್ಡ್, ಮೊಬೈಲ್‌ಗಳಲ್ಲಿ ಸುಲಭವಾಗಿ ತುಳು ಲಿಪಿಯನ್ನು ಟೈಪ್ ಮಾಡಲು ಸಹಕಾರಿಯಾಗಿದೆ. 'ಬರವು ಸರ್ವ' ಆಪ್‌ನ ಭಾಗವಾಗಿ ಕಾರ್ಯನಿರ್ವಹಿಸುವ ಇದು, ಇತ್ತೀಚೆಗೆ ಯೂನಿಕೋಡ್ ಮಾನ್ಯತೆ ಪಡೆದ ತುಳು ಲಿಪಿಯನ್ನು ದೈನಂದಿನ ಬಳಕೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತುಳು ಭಾಷೆಗೆ ಡಿಜಿಟಲ್ ಸ್ಪರ್ಶ: ಬರವು ಸರ್ವ ಆಪ್‌ಗೆ ‘ಕುರಲ್ ತುಳು ಟಚ್‌’ ಕೀಬೋರ್ಡ್‌ ಸೇರ್ಪಡೆ; ಆಂಡ್ರಾಯ್ಡ್‌ನಲ್ಲಿ ತುಳು ಲಿಪಿಯದ್ದೇ ಹವಾ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 07, 2026 | 11:18 AM

Share

ಮಂಗಳೂರು, ಅ.7: ಕರಾವಳಿಯ ಪ್ರಮುಖ ಮಾತೃಭಾಷೆಯಾದ ತುಳು ಭಾಷೆಯನ್ನು ರಾಜ್ಯ ಎರಡನೇ ಅಧಿಕೃತ ಭಾಷೆ ಎಂದು ಘೋಷಣೆ ಮಾಡಿದ ನಂತರ ಇದೀಗ ಅದರ ಲಿಪಿಯನ್ನು ಕೇವಲ ಶೈಕ್ಷಣಿಕ ಅಥವಾ ಗ್ರಂಥಾಲಯದ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್ ಸಂವಹನಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ನೆಟ್ಟಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಸರಳವಾಗಿ ತುಳು ಲಿಪಿಯನ್ನು ಟೈಪ್ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ ಕೀಬೋರ್ಡ್ ಅನ್ನು ಬಿಡುಗಡೆ ಮಾಡಲಾಗಿದೆ. ‘ಜೈ ತುಳುನಾಡ್’ ಸಂಸ್ಥೆ ಹಾಗೂ ಯುವ ತಂತ್ರಜ್ಞರ ತಂಡವು ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್, ಜನಪ್ರಿಯ ‘ಬರವು ಸರ್ವ’ ಆಪ್‌ನ ಭಾಗವಾಗಿ ಕಾರ್ಯನಿರ್ವಹಿಸಲಿದೆ.

‘ಕುರಲ್ ತುಳು ಟಚ್’ ಕೀಬೋರ್ಡ್‌ನ ಪ್ರಮುಖ ವೈಶಿಷ್ಟ್ಯಗಳು:

ಸರಳ ಕೀಬೋರ್ಡ್ ಲೇಔಟ್: ಮೊಬೈಲ್ ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುವಂತಹ ಸಾಂಪ್ರದಾಯಿಕ ಕೀಬೋರ್ಡ್ ಮಾದರಿಯಲ್ಲೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸಂಪೂರ್ಣ ಲಿಪಿ ಬೆಂಬಲ: ತುಳು ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರ ಹಾಗೂ ಒತ್ತಕ್ಷರಗಳನ್ನು ಅತ್ಯಂತ ನಿಖರವಾಗಿ ಟೈಪ್ ಮಾಡಲು ಇದು ಅನುವು ಮಾಡಿಕೊಡುತ್ತದೆ.

ತ್ವರಿತ ಅಭಿವೃದ್ಧಿ: ಫ್ಲಟರ್ ಮತ್ತು ಫೈರ್‌ಬೇಸ್ ತಂತ್ರಜ್ಞಾನವನ್ನು ಬಳಸಿ ಕೇವಲ ಎರಡೇ ವಾರಗಳಲ್ಲಿ ಈ ಕೀಬೋರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಫಾಂಟ್ ಮ್ಯಾಪಿಂಗ್ ಸವಾಲು: ಮೊಬೈಲ್‌ನ ಸಣ್ಣ ಪರದೆಯ ಮೇಲೆ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಟೈಪ್ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್‌ಗಳನ್ನು ಕೀಬೋರ್ಡ್ ಲೇಔಟ್‌ಗೆ ನಿಖರವಾಗಿ ಜೋಡಿಸುವುದು ದೊಡ್ಡ ತಾಂತ್ರಿಕ ಸವಾಲಾಗಿತ್ತು ಎಂದು ತಂತ್ರಜ್ಞ ಹರ್ಷಿತ್ ದೇವಡಿಗ ತಿಳಿಸಿದ್ದಾರೆ.

ತುಳು ಕಲಿಕೆಗೆ ಬಲ ತಂದ ‘ಬರವು ಸರ್ವ’ ಆಪ್:

ಕೇವಲ ಕೀಬೋರ್ಡ್ ಮಾತ್ರವಲ್ಲದೆ, ‘ಬರವು ಸರ್ವ’ ಆಪ್ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಯಲು ಬಯಸುವವರಿಗೆ ಸೂಕ್ತ ವೇದಿಕೆಯಾಗಿದೆ. ಈ ಆಪ್‌ನಲ್ಲಿ ತುಳು ನಿಘಂಟು , ದಿನನಿತ್ಯ ಬಳಸುವ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ಕರಾವಳಿಯ ಪರಂಪರೆಯನ್ನು ಸಾರುವ ಅಪರೂಪದ ಛಾಯಾಚಿತ್ರಗಳಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸಲು ಅವಕಾಶವಿದ್ದು, ಪರಿಶೀಲನೆಯ ನಂತರ ಅವುಗಳನ್ನು ಆಪ್‌ಗೆ ಸೇರಿಸಲಾಗುತ್ತದೆ. ಸಂಶೋಧಕಿ ಬನಶ್ರೀ ಅವಿನಾಶ್ ಅವರು ತುಳು ಲಿಪಿ ಕಲಿಕೆಗೆ ಅಗತ್ಯವಾದ ಪಠ್ಯ ಹಾಗೂ ವಿಡಿಯೋ ವಿಷಯಗಳನ್ನು ಒದಗಿಸುವ ಮೂಲಕ ಆಪ್‌ಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಬಂಪರ್ ಕಲೆಕ್ಷನ್: 20 ತಿಂಗಳಲ್ಲಿ ಕೋಟಿ ಕೋಟಿ ಆದಾಯ; ಸುಬ್ರಹ್ಮಣ್ಯ ರೋಡ್ ನಿಲ್ದಾಣವೇ ನಂಬರ್ 1

ಯೂನಿಕೋಡ್ ಮಾನ್ಯತೆ ಮತ್ತು ಡಿಜಿಟಲ್ ಕ್ರಾಂತಿ:

ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ ಅನುಮೋದಿಸಿದ ತುಳು ಲಿಪಿಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜೈ ತುಳುನಾಡ್ ಸಂಸ್ಥೆಯ ಶರತ್ ಕೊಡವೂರು ತಿಳಿಸಿದ್ದಾರೆ. ಇತ್ತೀಚೆಗೆ ಯೂನಿಕೋಡ್ ಕನ್ಸೋರ್ಟಿಯಂ 80 ತುಳು-ತಿಗಳಾರಿ ಅಕ್ಷರಗಳಿಗೆ ಅಧಿಕೃತ ಯೂನಿಕೋಡ್ ಮಾನ್ಯತೆ ನೀಡಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ತುಳು ಬಳಕೆಗೆ ತಾಂತ್ರಿಕ ಅಡಿಪಾಯ ಹಾಕಿಕೊಟ್ಟಿದೆ. ತುಳು ಅಕಾಡೆಮಿ ಹಾಗೂ ವಿದ್ವಾಂಸರ ಸಾಲು ಸಾಲು ವರ್ಷಗಳ ಶ್ರಮದ ಫಲವಾಗಿ, ಯುವಜನತೆ ಈಗ ಇಂಗ್ಲಿಷ್ ಅಥವಾ ಕನ್ನಡ ಲಿಪಿಯಲ್ಲಿ ತುಳು ಬರೆಯುವ ಬದಲು, ತಮ್ಮದೇ ಸ್ವಂತ ತುಳು ಲಿಪಿಯಲ್ಲೇ ವಾಟ್ಸಾಪ್, ಮೆಸೇಜ್‌ಗಳಲ್ಲಿ ಟೈಪಿಂಗ್ ಮಾಡಬಹುದಾಗಿದೆ. ಪ್ರಸ್ತುತ ‘ಕುರಲ್ ತುಳು ಟಚ್’ ಕೀಬೋರ್ಡ್ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೂ ಇದನ್ನು ವಿಸ್ತರಿಸಲು ತಂತ್ರಜ್ಞರ ತಂಡ ಯೋಜಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ