ಎಸ್ಎಸ್ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಮಾರ್ಚ್ 22ರಿಂದ ಪರೀಕ್ಷೆ ಆರಂಭ
SSLC Exam 1st Final Timetable: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026-27ನೇ ಸಾಲಿನ SSLC ಪರೀಕ್ಷೆ-01ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪರೀಕ್ಷೆಗಳು ಮಾರ್ಚ್ 22 ರಿಂದ ಆರಂಭವಾಗಿ 30ರಂದು ಮುಕ್ತಾಯಗೊಳ್ಳಲಿವೆ. ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 29: 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆ-01ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಎಸ್ಎಸ್ಎಲ್‌ಸಿ ಪರೀಕ್ಷೆ-01 ಮಾರ್ಚ್ 22ರಿಂದ ಆರಂಭವಾಗಲಿದೆ. ಇತ್ತೀಚೆಗೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿ ಕುರಿತಾಗಿ ಆಕ್ಷೇಪಣೆಗಳನ್ನ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಮಂಡಳಿ ಅಂತಿಮವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಸ್ಎಸ್ಎಲ್‌ಸಿ ಪರೀಕ್ಷೆ-01ರ ಅಂತಿಮ ವೇಳಾಪಟ್ಟಿ
- ಮಾರ್ಚ್ 22ರಂದು- ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಸೇರಿದಂತೆ ಪ್ರಥಮ ಭಾಷೆ ಪರೀಕ್ಷೆ
- ಮಾರ್ಚ್ 23 ಮತ್ತು 24ರಂದು ಪರೀಕ್ಷೆ ಇರುವುದಿಲ್ಲ
- ಮಾರ್ಚ್ 25ರಂದು- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
- ಮಾರ್ಚ್ 26ರಂದು- ಗುಡ್ ಫ್ರೈಡೆ ಹಿನ್ನೆಲೆ ಪರೀಕ್ಷೆ ಇರುವುದಿಲ್ಲ
ಇದನ್ನೂ ಓದಿ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಅಪಾರ್ ಐಡಿ ಇಲ್ಲದಿದ್ದರೂ PEN ಸಂಖ್ಯೆ ಕಡ್ಡಾಯ: ಏನಿದು ಅಪಾರ್, ಪೆನ್?
- ಮಾರ್ಚ್ 27ರಂದು- ದ್ವಿತೀಯ ಭಾಷೆ: ಇಂಗ್ಲಿಷ್ ಮತ್ತು ಕನ್ನಡ
- ಮಾರ್ಚ್ 30ರಂದು- ಗಣಿತ, ಸಮಾಜಶಾಸ್ತ್ರ
- ಮಾರ್ಚ್ 31ರಂದು- ಪರೀಕ್ಷೆ ಇರುವುದಿಲ್ಲ
- ಏಪ್ರಿಲ್ 1ರಂದು- ಪರೀಕ್ಷೆ ಇರುವುದಿಲ್ಲ
- ಏಪ್ರಿಲ್ 2ರಂದು- ತೃತೀಯ ಭಾಷೆ
- ಏಪ್ರಿಲ್ 3ರಂದು- ಅರ್ಥಶಾಸ್ತ್ರ ಮತ್ತು ಜೆಟಿಎಸ್ ವಿಷಯಗಳ ಪರೀಕ್ಷೆ
- ಏಪ್ರಿಲ್ 05ರಂದು- ಸಮಾಜ ವಿಜ್ಞಾನ
ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ! ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
ಪ್ರಥಮ ಭಾಷೆ, ಕೋರ್ ವಿಷಯಗಳು ಹಾಗೂ ಜೆಟಿಎಸ್ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ. ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಯ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಎನ್‌ಎಸ್‌ಕ್ಯೂಎಫ್ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:15ರವರೆಗೆ ನಡೆಯಲಿವೆ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಗಳನ್ನು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿವೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Thu, 29 October 26




