AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಈಸ್ ಬ್ಯಾಕ್: ಆಪ್ತರೊಂದಿಗೆ ಮಹತ್ವದ ಸಭೆ, ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ!

ಸಿದ್ದರಾಮಯ್ಯ ಈಸ್ ಬ್ಯಾಕ್: ಆಪ್ತರೊಂದಿಗೆ ಮಹತ್ವದ ಸಭೆ, ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ!

ರಮೇಶ್ ಬಿ. ಜವಳಗೇರಾ
|

Updated on: Oct 29, 2026 | 5:10 PM

Share

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಂಕಾಗಿದ್ದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ವಿಡಿಯೋ ವೈರಲ್ ಬಳಿಕ ಮತ್ತಷ್ಟು ಫುಲ್ ಸೈಲೆಂಟ್​​​​ ಆಗಿದ್ದರು. ಆದ್ರೆ, ದಸರಾ ಬಳಿ ಸಿದ್ದರಾಮಯ್ಯ ಫುಲ್ ಆ್ಯಕ್ಟೀವ್ ಆಗಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಅಹಿಂದ ಚಳವಳಿ ಆರಂಭಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾವೇರಿ ನಿವಾಸದಲ್ಲಿಂದು ಸಿದ್ದರಾಮಯ್ಯನವರು ತಮ್ಮ ಆಪ್ತ ನಾಯಕರೊಂದಿಗೆ ಮಹತ್ವದ ಸಭೆ ಮಾಡಿದ್ದು, ಪ್ರಸಕ್ತ ರಾಜಕಾರಣದಲ್ಲಿ ಬಗ್ಗೆ ಚರ್ಚಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 29): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಂಕಾಗಿದ್ದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ವಿಡಿಯೋ ವೈರಲ್ ಬಳಿಕ ಮತ್ತಷ್ಟು ಫುಲ್ ಸೈಲೆಂಟ್​​​​ ಆಗಿದ್ದರು. ಆದ್ರೆ, ದಸರಾ ಬಳಿ ಸಿದ್ದರಾಮಯ್ಯ ಫುಲ್ ಆ್ಯಕ್ಟೀವ್ ಆಗಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಅಹಿಂದ ಚಳವಳಿ ಆರಂಭಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾವೇರಿ ನಿವಾಸದಲ್ಲಿಂದು ಸಿದ್ದರಾಮಯ್ಯನವರು ತಮ್ಮ ಆಪ್ತ ನಾಯಕರೊಂದಿಗೆ ಮಹತ್ವದ ಸಭೆ ಮಾಡಿದ್ದು, ಪ್ರಸಕ್ತ ರಾಜಕಾರಣದಲ್ಲಿ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ತಮ್ಮನ್ನು ಬಿಟ್ಟು ಹೆಚ್​​​ಸಿ ಮಹದೇವಪ್ಪ ಅವರು ಮೈಸೂರಲ್ಲಿ ಸಂವಿಧಾನ ದಿನ ಆಚರಣೆ ಕುರಿತಾಗಿಯೂ ಸಿದ್ದರಾಮಯ್ಯ ಮಾತುಕತೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಶಾಸಕರಿಗೆ ಅಹಿಂದ ಚಳವಳಿ ಆರಂಭದ ಸೂಚನೆ ಕೊಟ್ಟಿದ್ದಾರೆ.

ಅಹಿಂದ ಸಮುದಾಯ ಬಲ ಪಡಿಸಲು ರಾಜ್ಯದ ನಾಲ್ಕೈದು ಕಡೆ ಐಕ್ಯತಾ ಸಮಾವೇಶ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಅಹಿಂದದ ಹಳೆ ಅಸ್ತ್ರಕ್ಕೆ ಐಕ್ಯತಾ ಸಮಾವೇಶದ ಹೆಸರಲ್ಲಿ ಹೊಸ ರೂಪ ನೀಡಲು ಮಾಜಿ ಸಿಎಂ ಮುಂದಾಗಿದ್ದಾರೆ. ಆದ್ರೆ, ಐಕ್ಯತಾ ಸಮಾವೇಶ ಎಲ್ಲಿ ಯಾವಾಗ ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More