AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಹೋರಾಟದ ಫಲ: ಕೊಪ್ಪಳದಲ್ಲಿ ಮತ್ತೆ 8 ಕಾರ್ಖಾನೆ ಕ್ಲೋಸ್

ಕೊಪ್ಪಳ ತಾಲೂಕಿನಲ್ಲಿ ಮತ್ತೆ 8 ಕಾರ್ಖಾನೆ ಮುಚ್ಚಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಜಿಲ್ಲೆಯ ಜನರ ನಿರಂತರ ಧರಣಿಗೆ ಮತ್ತೊಮ್ಮೆ ಫಲ ಸಿಕ್ಕಿದೆ. ಆದರೆ ಬಂದ್​ ಮಾಡಲು ಇನ್ನೂ ಸೂಚನೆ ಬಂದಿಲ್ಲ ಎಂದು ಡಿಸಿ ಹೇಳಿದ್ದಾರೆ.

ನಿರಂತರ ಹೋರಾಟದ ಫಲ: ಕೊಪ್ಪಳದಲ್ಲಿ ಮತ್ತೆ 8 ಕಾರ್ಖಾನೆ ಕ್ಲೋಸ್
ಕಾರ್ಖಾನೆ
ಶಿವಕುಮಾರ್ ಪತ್ತಾರ್
| Edited By: |

Updated on: Oct 29, 2026 | 8:24 PM

Share

ಮುಖ್ಯಾಂಶಗಳು

  • ಕೊಪ್ಪಳ ತಾಲೂಕಿನಲ್ಲಿ ಮತ್ತೆ 8 ಕಾರ್ಖಾನೆ ಮುಚ್ಚುವಂತೆ ತೀರ್ಮಾನ
  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಧಾರ
  • ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್​ಸೈಟ್​ನಲ್ಲಿ ಆದೇಶದ ಪ್ರತಿ ಪ್ರಕಟ

ಕೊಪ್ಪಳ, ಅಕ್ಟೋಬರ್​​ 29: ಕೊಪ್ಪಳ ಎಂದಾಕ್ಷಣ ನೆನಪಾಗುವುದು ಕೇವಲ ಕಲೆ, ಸಂಸ್ಕೃತಿಯಷ್ಟೇ ಅಲ್ಲ, ಬದಲಿಗೆ ಕಾರ್ಖಾನೆಗಳು. ಅವುಗಳಿಂದ ಹೊರಸೂಸುವ ವಿಪರೀತ ಹೊಗೆಯಿಂದ ಬೆಳೆ ಸೇರಿದಂತೆ ಉಸಿರಾಡುವ ಗಾಳಿ ಕೂಡ ಕಲುಷಿತವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಜನರ ಆರೋಗ್ಯದ ಮೇಲೂ ಇದು ಪರಿಣಾಮ ಬೀರಿತ್ತು. ಹೀಗಾಗಿ ಜನರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಯ ಫಲವಾಗಿ ಇದೀಗ ಜಿಲ್ಲೆಯಲ್ಲಿನ ದೊಡ್ಡ ದೊಡ್ಡ 8 ಕಾರ್ಖಾನೆ ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ವಿವಿಧ ಕಾರ್ಖಾನೆಗಳ ಬಂದ್​​ ಮಾಡಲು ತೀರ್ಮಾನ

ಇಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ಮಾಡಲಾಗಿದ್ದು, ಈ ವೇಳೆ ಕೊಪ್ಪಳ ತಾಲೂಕಿನ ವಿವಿಧ ಕಾರ್ಖಾನೆಗಳನ್ನು ಬಂದ್​ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್​ಸೈಟ್​ನಲ್ಲಿ ಕಾರ್ಖಾನೆಗಳನ್ನು ಬಂದ್ ಮಾಡಲು ತೀರ್ಮಾನಿಸಿರುವ ಕುರಿತಾಗಿ ಆದೇಶದ ಪ್ರತಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ!

ಕೊಪ್ಪಳ ತಾಲೂಕಿನಲ್ಲಿರುವ ಬಾಬಾ ಅಖಿಲಾ, ಭದ್ರಶ್ರೀ, ಧ್ರುವ ದೇಶ, ಐಎಲ್​ಸಿ ಸ್ಟೀಲ್, ಪಿಬಿಎಸ್​ ಸ್ಟೀಲ್, ಎಸ್​ಕೆ ಸ್ಟೀಲ್, ತನುಷ್​​ ಈ ಸ್ಪಾತ್ ಯೂನಿಟ್ ಒನ್ ಹಾಗೂ ಯುನಿಟ್ ಎರಡು ಬಂದ್​ ಮಾಡಲು ತೀರ್ಮಾನಿಸಲಾಗಿದೆ. ಅಧಿಕೃತವಾಗಿ ಕೆಲವೇ ದಿನಗಳಲ್ಲಿ ಕಾರ್ಖಾನೆಗಳಿಗೆ ಮುಚ್ಚಳಿಕೆ ನೋಟಿಸ್ ಕೊಡುವ ಸಾಧ್ಯತೆ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಕಾರ್ಖಾನೆಗಳನ್ನು ಬಂದ್​ ಮಾಡಲು ತೀರ್ಮಾನ ಮಾಡಲಾಗಿದೆ.

LIVE TV

48 ಗಂಟೆ ಬಂದ್​ಗೆ ಕರೆ

ಕೊಪ್ಪಳ ತಾಲೂಕಿನಲ್ಲಿ ಅತೀ ಹೆಚ್ಚು ಸ್ಪೋನ್ಜ್ ಐರನ್ ಕಾರ್ಖಾನೆಗಳಿವೆ. ಇದರ ಹೊಗೆಯಿಂದ ಸಾಕಷ್ಟು ಜನರಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ. ಮತ್ತೊಂದು ಕಡೆ ಬಲ್ಡೋಟಾ ಕಾರ್ಖಾನೆ ವಿರೋಧಿಸಿ ನಿರಂತರ ಧರಣಿ ನಡೆಯುತ್ತಿದ್ದು, ಅಕ್ಟೋಬರ್​​ 31ಕ್ಕೆ ಒಂದು ವರ್ಷವಾಗಲಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ 48 ಗಂಟೆ ಬಂದ್​ಗೆ ಕರೆ ನೀಡಿದೆ.

ಬಂದ್​ ಮಾಡಲು ಇನ್ನೂ ಸೂಚನೆ ಬಂದಿಲ್ಲ ಎಂದ ಡಿಸಿ

ಇನ್ನು ಈ ಬಗ್ಗೆ ಟಿವಿ9ಗೆ ಕೊಪ್ಪಳ ಡಿಸಿ ಸುರೇಶ್​ ಇಟ್ನಾಳ್ ಪ್ರತಿಕ್ರಿಯಿಸಿದ್ದು, ‘ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ಇನ್ನೂ ಬಂದ್​ ಮಾಡಲು ಸೂಚನೆ ಬಂದಿಲ್ಲ, ಸಭೆಯಲ್ಲಿ ಮಾತ್ರ ತೀರ್ಮಾನವಾಗಿದೆ. ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕ್ಲೋಸರ್ ನೋಟಿಸ್ ಬರಬಹುದು’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ