ಪೀಣ್ಯ ಇಂಡಸ್ಟ್ರಿಗೂ ತಟ್ಟಿದ ಗ್ಯಾಸ್ ​ಎಫೆಕ್ಟ್: ಕೆಲಸವಿಲ್ಲದೇ ಕೈಕಟ್ಟಿ ಕುಳಿತ ಕಾರ್ಮಿಕರು; ಕೋಟ್ಯಂತರ ರೂ ನಷ್ಟ

ಮಧ್ಯಪ್ರಾಚ್ಯ ಯುದ್ಧದ ಕಾರಣ ವಾಣಿಜ್ಯ ಗ್ಯಾಸ್ ಸಿಲಿಂಡರ್​ಗಳ ತೀವ್ರ ಕೊರತೆ ಎದುರಾಗಿದೆ. ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲದೆ, ಪೀಣ್ಯ ಕೈಗಾರಿಕಾ ಪ್ರದೇಶದ ಸಾವಿರಾರು ಕಂಪನಿಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಸಿಲಿಂಡರ್ ಇಲ್ಲದೆ ಉತ್ಪಾದನೆ ಸ್ಥಗಿತಗೊಂಡಿದ್ದು, ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಪೀಣ್ಯ ಇಂಡಸ್ಟ್ರಿಗೂ ತಟ್ಟಿದ ಗ್ಯಾಸ್ ​ಎಫೆಕ್ಟ್: ಕೆಲಸವಿಲ್ಲದೇ ಕೈಕಟ್ಟಿ ಕುಳಿತ ಕಾರ್ಮಿಕರು; ಕೋಟ್ಯಂತರ ರೂ ನಷ್ಟ
ಪೀಣ್ಯ ಇಂಡಸ್ಟ್ರಿಯಲ್
Image Credit source: tv9 kannada

Updated on: Mar 14, 2026 | 5:34 PM

ನೆಲಮಂಗಲ, ಮಾರ್ಚ್​​ 14: ಮಧ್ಯಪ್ರಾಚ್ಯದಲ್ಲಿ ಯುದ್ದದ ಎಫೆಕ್ಟ್ ಹಿನ್ನೆಲೆ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗಳ (gas cylinder) ಅಭಾವ ಉಂಟಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಎಫೆಕ್ಟ್ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಗಳಿದ್ದು ಸಿಲಿಂಡರ್ ಎಫೆಕ್ಟ್​ನಿಂದ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ತಟ್ಟಿದ ಕಮರ್ಷಿಯಲ್ ಸಿಲಿಂಡರ್ ಬಿಸಿ

ಕಮರ್ಷಿಯಲ್ ಸಿಲಿಂಡರ್ ಸ್ಟಾಕ್ ಬಂದ್ ಹಿನ್ನೆಲೆ ಹೋಟೆಲ್ ಉದ್ಯಮದ ಜೊತೆಗೆ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೆ ದೊಡ್ಡ ಪರಿಣಾಮ ಬೀರಿದೆ. ದಶಕಗಳ ಕಾಲ ನಡೆಸಿಕೊಂಡು ಬಂದಿರುವ ಕಂಪನಿಗಳು ಗ್ಯಾಸ್ ಸಿಲಿಂಡರ್ ಇಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶದ ಶ್ರೀ ಲಕ್ಷ್ಮಿ ಫ್ರೋಫೈಲ್ ಕಂಪನಿಯಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರಿದ್ದು ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿದ್ದಾರೆ.

ಇದನ್ನೂ ಓದಿ: ಬುಕ್​​ ಆಗದ ಗ್ಯಾಸ್​​​: ಖಾಲಿ ಸಿಲಿಂಡರ್ ಹಿಡಿದು ಕುಳಿತ ಜನ; ಮನೆ ಅಡುಗೆಗೂ ಕುತ್ತು

ಇನ್ನು ಈ ಕಂಪನಿ 40 ಕಂಪನಿಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡುವ ಕಂಪನಿಯಾಗಿದ್ದು, 30 ವರ್ಷಗಳಿಂದ ನಡೆಸಿಕೊಂಡು ಬರ್ತಿದ್ದಾರೆ. ಇರಾಕ್ ಮತ್ತು ಇಸ್ರೇಲ್ ಯುದ್ದದಿಂದ ಗ್ಯಾಸ್ ಮೇಲೆ ಪರಿಣಾಮ ಬೀರಿದ್ದು ದಿನನಿತ್ಯ ಕಂಪನಿಯಲ್ಲಿ 50 ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿನಿತ್ಯ 15 ಗ್ಯಾಸ್​​ ಸಿಲಿಂಡರ್ ಅವಶ್ಯಕತೆದೆ. ಇದೀಗ ಸಿಲಿಂಡರ್ ಇಲ್ಲದೆ ಕಾರ್ಮಿಕರು ಕೈ ಕಟ್ಟಿ ಕುಳಿತಿದ್ದಾರೆ. ಇದ್ರಿಂದ ಕೋಟ್ಯಂತರ ರೂ ನಷ್ಟವಾಗಿದೆ.

ಇದನ್ನೂ ಓದಿ: ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಒಟ್ಟಿನಲ್ಲಿ ಕಮರ್ಷಿಯಲ್ ಸಿಲಿಂಡರ್ ಎಫೆಕ್ಟ್​ನಿಂದ ಸಾಕಷ್ಟು ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೂ ಇದರ ಎಫೆಕ್ಟ್ ತಟ್ಟಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us