ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.76 ಕೋಟಿ ರೂ. ಮೌಲ್ಯದ 3 ಕೆಜಿ ಅಕ್ರಮ ಚಿನ್ನ ವಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ವಿದೇಶಿ ಪ್ರಯಾಣಿಕರಲ್ಲಿ ಕೆಲವರು ಅಕ್ರಮವಾಗಿ ಚಿನ್ನ, ಡ್ರಗ್ಸ್​​, ಗಾಂಜಾಗಳನ್ನು ಸಾಗಿಸುತ್ತಿರುತ್ತಾರೆ. ಕಸ್ಟಮ್ಸ್​​ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬೀಳುತ್ತಾರೆ. ಹೀಗೆ ಸಿಕ್ಕಿಬಿದ್ದ ಪ್ರಯಾಣಿಕರಿಂದ ಚಿನ್ನ, ಡ್ರಗ್ಸ್​​, ಗಾಂಜಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ ಇದೀಗ 1.76 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.76 ಕೋಟಿ ರೂ. ಮೌಲ್ಯದ 3 ಕೆಜಿ ಅಕ್ರಮ ಚಿನ್ನ ವಶ
ಪತ್ತೆಯಾದ ಚಿನ್ನ
Updated By: ವಿವೇಕ ಬಿರಾದಾರ

Updated on: Oct 24, 2023 | 10:35 AM

ದೇವನಹಳ್ಳಿ ಅ.24: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕಸ್ಟಮ್ಸ್ ಅಧಿಕಾರಿಗಳು 1.76 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನವನ್ನು (Gold) ವಶಪಡಿಸಿಕೊಂಡಿದ್ದಾರೆ. ಕೌಲಾಲಂಪುರ, ದುಬೈ, ಕೊಲಂಬೋದಿಂದ ಪ್ರಯಾಣಿಕರು ಅಕ್ರಮವಾಗಿ ವಿಮಾನದಲ್ಲಿ ಚಿನ್ನದ ಬಿಸ್ಕೆಟ್ ಹಾಗೂ ಸಿಲ್ವರ್ ಚೈನ್ ತಂದಿದ್ದರು. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚಿನ್ನ ಸಾಗಿಸಲು ಮಹಿಳೆಯರ ಖತರ್ನಾಕ್ ಐಡಿಯಾ

ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ ನಡುವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಮಹಿಳೆಯರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ವಾಲಲಂಪುರದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ ಬ್ಲೌಸ್​ನಲ್ಲಿ 300.95 ಗ್ರಾಂ ಚಿನ್ನದ ಪೇಸ್ಟ್ ಅಂಟಿಸಿಕೊಂಡಿದ್ದರು. ಇದನ್ನು ನೋಡಿ ತಪಾಸಣಾ ಅಧಿಕಾರಿಗಲೇ ಶಾಕ್ ಆಗಿದ್ದು ಇಂಚಿಂಚೂ ಚೆಕ್ ಮಾಡಿ ಚಿನ್ನ ವಶಕ್ಕೆ ಪಡೆದಿದ್ದರು. ಈ ಮಹಿಳೆಯಿಂದ ಸುಮಾರು 17.9 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು.

ಇದನ್ನೂ ಓದಿ: ಆಂಧ್ರ ಪ್ರದೇಶ: 10 ಕೆಜಿಗೂ ಹೆಚ್ಚು ಕಳ್ಳಸಾಗಣೆ ಚಿನ್ನ ವಶಪಡಿಸಿದ DRI ಅಧಿಕಾರಿಗಳು

ಮತ್ತೊಂದು ಪ್ರಕರಣದಲ್ಲಿ ಮಲೇಷ್ಯಾ ಮೂಲದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈಕೆ ಗುದದ್ವಾರದಲ್ಲಿ ನಾಲ್ಕು ಕ್ಯಾಪ್ಸೂಲ್‌ಗಳಲ್ಲಿ ಒಟ್ಟು 578.27 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದಳು. ಸದ್ಯ ವೈದ್ಯರ ಸಹಾಯದಿಂದ ಗುದದ್ವಾರದಲ್ಲಿದ್ದ ಚಿನ್ನವನ್ನು ಹೊರತೆಗೆದು ವಶಕ್ಕೆ ಪಡೆಯಲಾಗಿತ್ತು. ಈ ಮಹಿಳೆಯಿಂದ ಸುಮಾರು 34.4 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮತ್ತೋರ್ವ ಮಹಿಳೆ ಕುವೈತ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಭಾರತೀಯ ಮೂಲದವರು. ಇವರು ಚಿನ್ನವನ್ನು ಸಣ್ಣ ಸಣ್ಣದಾಗಿ ತುಂಡು ಮಾಡಿ, ಗೋಡಂಬಿ, ಬಾದಾಮಿ, ಪಿಸ್ತಾವನ್ನು ಒಳಗೊಂಡಿದ್ದ ಡ್ರೈ ಫ್ರೂಟ್ಸ್ ಪ್ಯಾಕೆಟ್​ನಲ್ಲಿ ಸೇರಿಸಿದ್ದರು. ತಪಾಸಣೆಯ ವೇಳೆ ಡ್ರೈ ಫ್ರೂಟ್ಸ್‌ ಪ್ಯಾಕೇಟ್​ನಲ್ಲಿ ಚಿನ್ನದ ಸಣ್ಣ ಸಣ್ಣ ತುಂಡುಗಳು ಇರುವುದು ಕಂಡು ಬಂದಿತ್ತು. ಈ ಮಹಿಳೆಯಿಂದ 15.26 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಹಾಗೂ 1.49 ಲಕ್ಷ ರೂ. ಮೌಲ್ಯದ ಐ ಪೋನ್‌ 14 ಪ್ರೋ ಮ್ಯಾಕ್‌ ಮೊಬೈಲ್‌ ವಶಕ್ಕೆ ಪಡೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:18 am, Tue, 24 October 23