ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಅಂತರ್​ರಾಜ್ಯ ಮನೆಗಳ್ಳರ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಬೆಂಗಳೂರಿನ ಸಂಜಯ್ ನಗರ ಪೊಲೀಸರ ಬಲೆಗೆ ಕುಖ್ಯಾತ ಅಂತರರಾಜ್ಯ ಮನೆಗಳ್ಳರು ಬಿದ್ದಿದ್ದಾರೆ. ಮಿಂತುವಿಶ್ವಾಸ್, ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್ ಬಂಧಿತ ಆರೋಪಿಗಳು.

ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಅಂತರ್​ರಾಜ್ಯ ಮನೆಗಳ್ಳರ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಬಂಧಿತ ಆರೋಪಿಗಳು
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 05, 2023 | 2:43 PM

ಬೆಂಗಳೂರು, ಆ.5: ಬೆಂಗಳೂರಿನ ಸಂಜಯ್ ನಗರ ಪೊಲೀಸರ ಬಲೆಗೆ ಕುಖ್ಯಾತ ಅಂತರರಾಜ್ಯ ಮನೆಗಳ್ಳರು ಬಿದ್ದಿದ್ದಾರೆ. ಮಿಂತುವಿಶ್ವಾಸ್, ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್ ಬಂಧಿತ ಆರೋಪಿಗಳು. ಇವರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪ್ಲೈಟ್​ನಲ್ಲಿ ಬೆಂಗಳೂರಿಗೆ ಬಂದು ಯಶವಂತಪುರ(Yeswanthpur)ದ ಲಾಡ್ಜ್​ನಲ್ಲಿ ನಾಲ್ಕು ದಿನ ಉಳಿದುಕೊಳ್ಳುತಿದ್ದರು. ಬಳಿಕ ಹೈ ಫೈ ಮನೆಗಳಿರುವ ಐದು ಏರಿಯಾಗಳನ್ನು ಟಾರ್ಗೆಟ್ ಮಾಡಿ ಸುತ್ತಾಟ ಮಾಡುತ್ತಾ, ಯಾವ ಮನೆಗೆ ಬೀಗ ಹಾಕಿದೆಯೆಂದು ನೋಡುತ್ತಿದ್ದರು. ಬಳಿಕ ಅದೇ ಮನೆಯಿಂದ ನಿಂತು ಲೋಕೆಷನ್ ಶೇರ್​ ಮಾಡಿಕೊಂಡು, ಸಂಜೆ ವೇಳೆಗೆ ಅದೇ ಮನೆಗೆ ಬರುತ್ತಿದ್ದರು.

70 ಲಕ್ಷ ಮೌಲ್ಯದ 1 ಕೆಜಿ 430ಗ್ರಾಂ ಚಿನ್ನ ಕಳ್ಳತನ

ಇದೇ ಮಾದರಿಯಲ್ಲಿ ಡಾಲರ್ಸ್ ಕಾಲೋನಿ ಮನೆಯೊಂದನ್ನ ಟಾರ್ಗೆಟ್ ಮಾಡಿದ್ದ ಆರೋಪಿಗಳು. ಟೆಕ್ಕಿಯೋರ್ವನ ಕುಟುಂಬ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಕಳ್ಳತನ ಕೃತ್ಯ ಎಸಗಿ ಪರಾರಿಯಾಗಿದ್ದರು. ಈ ವೇಳೆ ಅವರ ಮನೆಯಲ್ಲಿದ್ದ 70 ಲಕ್ಷ ಮೌಲ್ಯದ 1 ಕೆಜಿ 430 ಗ್ರಾಂ ಚಿನ್ನವನ್ನ ಕಳ್ಳತನ ಮಾಡಿ, ಬಳಿಕ ರಸ್ತೆ ಮಾರ್ಗವಾಗಿ ಬಸ್​ನಲ್ಲಿ ಕದ್ದ ಮಾಲ್ ಸಮೇತ ಹೈದ್ರಾಬಾದ್​ಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳುತ್ತಿದ್ದರು. ನಂತರ ಅಲ್ಲಿಂದ ಉತ್ತರಪ್ರದೇಶಕ್ಕೆ ಈ ಗ್ಯಾಂಗ್​ ಹೋಗುತ್ತಿದ್ದರು.

ಇದನ್ನೂ ಓದಿ:ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು

ಘಟನೆ ಕುರಿತು ಸಂಜಯ್ ನಗರ ಠಾಣೆಗೆ ದೂರು; ಗಡ್ಡ ಕೊಟ್ಟ ಕ್ಲ್ಯೂನಿಂದ ಆರೋಪಿಗಳು ಲಾಕ್

ಇನ್ನು ಮರುದಿನ ಬೆಳಿಗ್ಗೆ ಬಂದ ಮನೆ ಮಾಲೀಕರಿಗೆ ಕೃತ್ಯದ ಸಂಗತಿ ಬಯಲಾಗಿದೆ. ಕೂಡಲೇ ಸಂಜಯ್ ನಗರ ಠಾಣೆಗೆ ಈ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ದೂರು ಹಿನ್ನಲೆ ಎಲ್ಲಾ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಮಾಹಿತಿ ಪಡೆದಿದ್ದ ಪೊಲೀಸರಿಗೆ, ಮನೆ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ಸಿಸಿಟಿವಿ ಇರಲಿಲ್ಲ. ಇದಾದ ಬಳಿಕ ನಿರ್ಮಾಣ ಹಂತದ ಕಟ್ಟಡದ ಅದೊಂದು ಸಿಸಿಟಿವಿಯಲ್ಲಿ ಎರಡನೇ ಆರೋಪಿ ಚಹರೆ ಸೆರೆಯಾಗಿತ್ತು.

ಗಡ್ಡ ಕೊಟ್ಟ ಕ್ಲ್ಯೂನಿಂದ ಆರೋಪಿಗಳು ಲಾಕ್

ಹೌದು, ಓರ್ವ ಆರೋಪಿ ಹರೀಶ್ ಚಂದ್ರನ ಗಡ್ಡದ ಮುಖಾಂತರ ಪೊಲೀಸರಿಗೆ ಲೀಡ್ ಸಿಕ್ಕಿತ್ತು. ಈ ವೇಳೆ ಹಳೆ ಮಾಹಿತಿಗಳ ಆಧರಿಸಿ ಶೋಧ ಆರಂಭ ಮಾಡಿದ ಪೊಲೀಸರಿಗೆ, ಈ ಹಿಂದೆ ಅನ್ನಪೂರ್ಣೇಶ್ವರಿ ನಗರದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ದೆಹಲಿಯಲ್ಲಿ ಈ ಕಳ್ಳರ ಗ್ಯಾಂಗ್​ ಸಿಕ್ಕಿಬಿದ್ದಿತ್ತು. ಬಂಧಿತರಿಂದ ಕಳುವಾಗಿದ್ದ ಸಂಪೂರ್ಣ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಕಳ್ಳತನ ಕುರಿತಂತೆ ಈ ಆರೋಪಿಗಳ ಮೇಲೆ ದೆಹಲಿ, ಕೇರಳ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ಕಡೆ ಪ್ರಕರಣಗಳು ದಾಖಲಾಗಿವೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ