ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಬೆದರಿಸಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!
ಕಾರಿನಲ್ಲಿದ್ದ ನಾಲ್ವರಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದರು. 1 ಕೋಟಿಗೂ ಹೆಚ್ಚು ಹಣ, ಕಾರು ದರೋಡೆ ಮಾಡಿದ್ದರು. ನೆಲಮಂಗಲ ಉಪ ವಿಭಾಗದಲ್ಲಿ 3 ತಂಡ ರಚಿಸಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ
ನೆಲಮಂಗಲ: ಚಿನ್ನದ ವ್ಯಾಪಾರಿಗೆ ಬೆದರಿಸಿ ದರೋಡೆ (Robbery) ಮಾಡಿದ್ದ 11 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣೆ ಪೊಲೀಸರು ಕೇರಳದ ರಾಜೀವ್(48), ವಿಷ್ಣುಲಾಲ್(26), ಸನಾಲ್(34), ಜಸೀನ್(28), ರಶೀದ್(25), ಸನಾಫ್(33), ಶಫೀಕ್(31) ಸೇರಿದಂತೆ ಒಟ್ಟು 11 ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಗಳಿಂದ ಪೊಲೀಸರು 10 ಲಕ್ಷಕ್ಕೂ ಹೆಚ್ಚು ಹಣ (Money) ಜಪ್ತಿ ಮಾಡಿದ್ದಾರೆ. ಆರೋಪಿಗಳು ಮಾರ್ಚ್ 11ರಂದು ವ್ಯಾಪಾರಿ ಯೋಗೇಶ್ಗೆ ಬೆದರಿಸಿ ದರೋಡೆ ಮಾಡಿದ್ದಾರೆ. ಮಾದವಾರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿತ್ತು.
ಕಾರಿನಲ್ಲಿದ್ದ ನಾಲ್ವರಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದರು. 1 ಕೋಟಿಗೂ ಹೆಚ್ಚು ಹಣ, ಕಾರು ದರೋಡೆ ಮಾಡಿದ್ದರು. ನೆಲಮಂಗಲ ಉಪ ವಿಭಾಗದಲ್ಲಿ 3 ತಂಡ ರಚಿಸಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಟೋಲ್ ಸಿಸಿಕ್ಯಾಮರಾ, ಟವರ್ ಲೊಕೇಷನ್ ಆಧರಿಸಿ ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಅಂತರರಾಜ್ಯ ಮನೆಗಳ್ಳರು ಬಂಧನ: ರಾಜರಾಜೇಶ್ವರಿ ನಗರ ಪೊಲೀಸರು ಅಂತರರಾಜ್ಯ ಮನೆಗಳ್ಳರನ್ನ ಬಂಧಿಸಿದ್ದಾರೆ. ಬಿಲಾಲ್ ಮಂಡಲ್, ಸಲೀಂ ರಫೀ, ಮತ್ತು ವಿನೋದ್ ರಾಜ್ ಬಂಧಿತ ಅರೋಪಿಗಳು. ವಿನೋದ್ ರಾಜ್ ಬಿಡದಿ ನಿವಾಸಿ. ಈ ಹಿಂದೆ ಸರಗಳ್ಳತನ ಕೇಸ್ನಲ್ಲಿ ಅರೆಸ್ಟ್ ಅಗಿದ್ದ. ಜೈಲಿನಲ್ಲಿ ಬಿಲಾಲ್ ಮಂಡಲ್ ಮತ್ತು ಸಲೀಂ ಪರಿಚಯ ಅಗಿದ್ರು.. ನಂತರ ಜೈಲಿನಲ್ಲಿ ಮೂರುವ ಒಳ್ಳೆಯ ಗೆಳೆಯರಾಗಿದ್ರು. ಬಿಲಾಲ್ ಕಡೆಯವರು ವಿನೋದ್ಗೆ ಬೇಲ್ ಮಾಡಿಸಿಕೊಟ್ಟಿದ್ದ. ನಂತರ ಬೆಲಾಲ್, ಸಲೀಂ ಮಹಾರಾಷ್ಟ್ರ ತೆರಳಿದ್ರು. ಮಹಾರಾಷ್ಟ್ರದಲ್ಲಿ ಇದ್ದ ಅರೋಪಿಗಳಿಗೆ ವಿನೋದ್ ಮನೆಗಳನ್ನು ಹುಡುಕಿ ಕೊಡುತ್ತಿದ್ದ.
ವಿನೋದ್ ತೋರಿಸಿದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರು. ಸದ್ಯ ಪೊಲೀಸರು ಅರೋಪಿಗಳ ಬಳಿ ಇಪ್ಪತ್ತೆಂಟು ಲಕ್ಷ ಮೌಲ್ಯದ ಚಿನ್ನದ ಆಭರಣ, ಒಂಬತ್ತೂವರೆ ಕೆಜಿ ಬೆಳ್ಳಿ ಹಾಗು ಒಂದು ಕಾರು, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
Health Tips: ಪದೇ ಪದೇ ಆತಂಕಕ್ಕೆ ಒಳಗಾಗುತ್ತೀರಾ? ಅದರಿಂದ ಹೊರಬರೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
Published On - 9:40 am, Thu, 21 April 22